Advertisement

ಎಸ್‌.ಎಂ. ಜಾಮದಾರರಿಂದ ಅಪಪ್ರಚಾರ: ರಂಭಾಪುರಿ ಶ್ರೀ

11:38 AM Sep 04, 2017 | Team Udayavani |

ರಾಯಚೂರು: ಸಿದ್ಧಗಂಗಾಮಠದ ಶ್ರೀ ಶಿವಕುಮಾರ ಸ್ವಾಮೀಜಿ ಹಾಗೂ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಪ್ರತ್ಯೇಕ ಧರ್ಮದ ಹೋರಾಟಕ್ಕೆ ಬೆಂಬಲಿಸಿದ್ದಾರೆಂದು ಐಎಎಸ್‌ ನಿವೃತ್ತ ಅಧಿಕಾರಿ ಶಿವಾನಂದ ಜಾಮದಾರ ಅಪ್ರಪ್ರಚಾರ ಮಾಡಿ ಜನರಲ್ಲಿ 
ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ರಂಭಾಪುರಿ ಜಗದ್ಗುರು ಡಾ|ಪ್ರಸನ್ನ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ದೂರಿದರು.

Advertisement

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಾನಂದ ಜಾಮದಾರ ಹೇಳಿರುವ ಮಾತುಗಳು ಸತ್ಯಕ್ಕೆ ದೂರವಾಗಿವೆ. ವೀರಶೈವ ಲಿಂಗಾಯತ ಧರ್ಮದ ಸಮಗ್ರತೆ ಕಾಪಾಡಿಕೊಂಡು ಬರಬೇಕೆಂದು ಸಿದ್ಧಗಂಗಾ ಶ್ರೀಗಳು ಮತ್ತು ಸುತ್ತೂರು ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ. ಅವರನ್ನು ಸಂಪರ್ಕಿಸಿದ ನಮ್ಮ ಪ್ರತಿನಿ ಧಿಗಳಿಗೆ ತಾವು ಹಾಗೆ ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಅವರ ಅಭಿಪ್ರಾಯವನ್ನು ತಿರುಚಿ ಹೇಳುವ ಮೂಲಕ ಜಾಮದಾರ ಅವರು ಗೊಂದಲ ಸೃಷ್ಟಿಸುತ್ತಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಅವರು ಈವರೆಗೂ ನಮ್ಮನ್ನು ಸಂಪರ್ಕಿಸಿಲ್ಲ. ಅವರ ಹೇಳಿಕೆ ಹಿಂದೆ ಕೆಲ ಮಠಾಧೀಶರ ಕುಮ್ಮಕ್ಕು ಇದೆ ಎಂದು ದೂರಿದರು. 

ತಾವು ವೀರಶೈವ ಲಿಂಗಾಯತ ಪ್ರತ್ಯೇಕತೆಗೆ ಎಂದಿಗೂ ಅವಕಾಶ ನೀಡುವುದಿಲ್ಲ. ಲಿಂಗಾಯತ ಪ್ರತ್ಯೇಕ ಧರ್ಮಕ್ಕಿಂತ ಎಲ್ಲರೂ ಒಗ್ಗೂಡಿ ಸೌಲಭ್ಯಗಳನ್ನು ಪಡೆಯುವ ನಿಟ್ಟಿನಲ್ಲಿ ಹೋರಾಡಬೇಕಿದೆ ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next