Advertisement

ಎಸ್‌.ಎಂ.ಕೃಷ್ಣಗೆ ಕಾಂಗ್ರೆಸ್‌ ಎಲ್ಲವನ್ನೂ ನೀಡಿದೆ:  ಮಾಕನ್‌

03:45 AM Jan 30, 2017 | Team Udayavani |

ಹೊಸದಿಲ್ಲಿ: ಕಾಂಗ್ರೆಸ್‌ಗೆ ದಿಢೀರ್‌ ರಾಜೀನಾಮೆ ನೀಡಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್‌.ಎಂ.
ಕೃಷ್ಣ ಕ್ರಮವನ್ನು ದುರದೃಷ್ಟಕರ ಎಂದು ಕಾಂಗ್ರೆಸ್‌ ವಕ್ತಾರ ಅಜಯ್‌ ಮಾಕನ್‌ ಬಣ್ಣಿಸಿದ್ದಾರೆ. ಕಾಂಗ್ರೆಸ್‌ ಕೃಷ್ಣಗೆ ಎಲ್ಲ ವನ್ನೂ ನೀಡಿದೆ. ಅವರು ಕೇಂದ್ರ ಸಚಿವ, ಮುಖ್ಯಮಂತ್ರಿ, ರಾಜ್ಯಪಾಲ ಹುದ್ದೆ ಅಲಂಕರಿಸಿದ ವರು ಎಂದಿದ್ದಾರೆ ಮಾಕನ್‌.

Advertisement

ವಿದೇಶಾಂಗ ಸಚಿವರಾಗಿದ್ದ ವೇಳೆ ಎಸ್‌.ಎಂ. ಕೃಷ್ಣ  2011ರಲ್ಲಿ ವಿಶ್ವಸಂಸ್ಥೆಯಲ್ಲಿ  ಭಾರತದ ಹೇಳಿಕೆ ಓದುವ ಬದಲು ಪೋರ್ಚುಗೀಸ್‌ ದೇಶದ ಹೇಳಿಕೆಯನ್ನು ಓದಿದ್ದರು. ಇದರಿಂದ ಅಂದು ಕಾಂಗ್ರೆಸ್‌ ಬಹಳ ಮುಜುಗರ ಅನು ಭವಿಸಬೇಕಾಗಿ ಬಂತು. ವಿಶ್ವಸಂಸ್ಥೆಯಲ್ಲಿ ಭಾರತ ಖಾಯಂ ಸದಸ್ಯತ್ವಕ್ಕಾಗಿ ಹೋರಾಡುತ್ತಿದ್ದ ವೇಳೆಯಲ್ಲೇ ಕೃಷ್ಣ ಇಂಥ ಎಡವಟ್ಟು ಮಾಡಿದ್ದರು ಎಂದು ಮಾಕನ್‌ ಹರಿಹಾಯ್ದಿದ್ದಾರೆ.

ಶನಿವಾರ ಹಠಾತ್ತನೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಕೃಷ್ಣ ರಾಜೀನಾಮೆ ರವಾನಿಸಿದ್ದರು. ಈ ವೇಳೆ ಪ್ರತಿಕ್ರಿಯೆ ನೀಡಿದ್ದ ಅವರು, ಕಾಂಗ್ರೆಸ್‌ಗೆ ಜನನಾಯಕರು ಬೇಕಿಲ್ಲ, ವ್ಯವಸ್ಥಾಪಕರು ಬೇಕಿದ್ದಾರಷ್ಟೇ. ವಯಸ್ಸಾಗಿದೆ ಎಂಬ ಕಾರಣಕ್ಕೆ ತನ್ನನ್ನು ನಿರ್ಲಕ್ಷಿಸಲಾಗಿದೆ ಆರೋಪಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next