Advertisement
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರ, ಸ್ಲಂ ಜನಾಂದೋಲನಾ ಕರ್ನಾಟಕ ಸದಸ್ಯ ಸಂಘಟನೆಯಾಗಿರುವ ರಾಯಚೂರು ಸ್ಲಂ ಕ್ರಿಯಾ ವೇದಿಕೆಯ ಸಹಯೋಗದಲ್ಲಿ ಈ ಹಬ್ಬ ಹಮ್ಮಿಕೊಳ್ಳಲಾಗಿದೆ. 20ಕ್ಕೂ ಹೆಚ್ಚು ಜಿಲ್ಲೆಗಳ ಸ್ಲಂ ತಂಡಗಳು ಭಾಗವಹಿಸಿ ಕಲಾ ಪ್ರದರ್ಶನ ನೀಡಲಿವೆ. ಸ್ಲಂ ಜನರಲ್ಲಿ ಅಡಗಿದ ವಿವಿಧ ಪ್ರತಿಭೆಗಳನ್ನು ಅನೇಕ ಕಲೆಗಳನ್ನು ಪ್ರದರ್ಶಿಸಲು ಇದೊಂದು ಉತ್ತಮ ವೇದಿಕೆಯಾಗಿದೆ.
ಆಗಮಿಸುವರು ಎಂದು ವಿವರಿಸಿದರು. ಈ ನಿಮಿತ್ತ ರ್ಯಾಲಿ ಹಮ್ಮಿಕೊಂಡಿದ್ದು, ಜನವಾದಿ ಮಹಿಳಾ ಸಂಘಟನೆ ರಾಜ್ಯಾಧ್ಯಕ್ಷೆ ಕೆ.ನೀಲಾ ಚಾಲನೆ ನೀಡುವರು. ವಿಜಯಪುರ ಮಹಿಳಾ ವಿವಿಯ ಸರಸ್ವತಿ, ವಕೀಲ ಕ್ಲಿಪ್ಟನ್ ರೋಜಾರಿಯೋ, ಸ್ವಾಗತಿ ಸಮಿತಿ ಅಧ್ಯಕ್ಷ ಕೆ.ಕರಿಯಪ್ಪ ಮಾಸ್ತರ್, ದಾನಪ್ಪ ನಿಲೋಗಲ್, ಎಂ.ಆರ್ ಬೇರಿ, ಅಂಬಣ್ಣ ಆರೋಲಿಕರ್, ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘಟನೆ ರಾಜ್ಯ ಸಂಚಾಕರಾದ ಚಂದ್ರಮ್ಮ ಸೇರಿದಂತೆ ಅನೇಕ ಭಾಗವಹಿಸುವರು ಎಂದು ತಿಳಿಸಿದರು. ವೇದಿಕೆ ಜಿಲ್ಲಾಧ್ಯಕ್ಷ ಜನಾರ್ದನ ಹಳ್ಳಿಬೆಂಚಿ, ಸದಸ್ಯರಾದ ನೂರ್ ಜಾನ್, ವೆಂಕಟೇಶ ಭಂಡಾರಿ, ಶೈನಾಜ ಬೇಗಂ ಸೇರಿ ಇತರರು
ಗೋಷ್ಠಿಯಲ್ಲಿದ್ದರು.