Advertisement
ನಗರದ ಉದ್ಯಮಬಾಗದಲ್ಲಿ ಸೋಮವಾರ ವಾಜಪೇಯಿ ನಗರ ವಸತಿ ಆವಾಸ್ ಯೋಜನೆಯಡಿ ಮನೆಗಳ ನಿರ್ಮಾಣದ ಅಡಿಗಲ್ಲು ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕೊಳಗೇರಿ ಮತ್ತು ಗುಡಿಸಲುಗಳಲ್ಲಿ ವಾಸಿಸುವ ಬಡಜನರ ಜೀವನ ಮತ್ತು ಆರೋಗ್ಯ ಸ್ಥಿತಿ ಹದಗೆಟ್ಟದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಪ್ರಧಾನಮಂತ್ರಿ ವಾಜಪೇಯಿ ಆವಾಸ್ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದರು.
Related Articles
Advertisement
ಆವಾಸ್ ಯೋಜನೆಯಲ್ಲಿ ಯಾವುದೇ ಅದಿಕಾರಿ ಹಾಗೂ ಫಲಾನುಭವಿಯು ಆಮಿಷಕ್ಕೆ ಒಳಗಾಗಬಾರದು. ಆಮಿಷವನ್ನು ಒಡ್ಡಬಾರದು. ಅಂಥವರು ಕಂಡಬಂದರೆ ಅವರ ವಿರುದ್ದ ನಾನೇ ದೂರು ನೀಡುತ್ತೇನೆ ಎಂದರು.
ಆವಾಸ್ ಯೋಜನೆಯಲ್ಲಿ ಸ್ವಂತ ಮನೆಗಳನ್ನು ಹೊಂದುವುದು ಬಡಜನರ ಕನಸು. ಈ ಕನಸನ್ನು ಪ್ರಾಮಾಣಿಕತೆಯಿಂದ ನನಸು ಮಾಡುವುದು ಜನ ಪ್ರತಿನಿಧಿಗಳ ಮತ್ತು ಸಾರ್ವಜನಿಕ ಅಧಿಕಾರಿಗಳ ಕರ್ತವ್ಯ ಎಂದು ಶಾಸಕ ಅಭಯ ಪಾಟೀಲ ಹೇಳಿದರು.
ನಗರದಲ್ಲಿ ರಸ್ತೆ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಸಂಚಾರಕ್ಕೆ ತೊಂದರೆಯಾಗಿದೆ. ಕಾಮಗಾರಿಗಳು ಮುಕ್ತಾಯದ ಹಂತವನ್ನು ತಲುಪಿದ್ದು ಸಾರ್ವಜನಿಕರು ಇನ್ನೂ ಸ್ವಲ್ಪ ದಿನ ಸಹಕರಿಸಬೇಕು. ಉದ್ಯಮಬಾಗದಲ್ಲಿ ಎರಡು ಮೂರು ವರ್ಷಗಳಿಂದ ರಸ್ತೆ ಕಾಮಗಾರಿಗಳು ನಡೆಯುತ್ತಿದ್ದು, ಮುಂದಿನ ವಾರದಲ್ಲಿ ಎಲ್ಲ ಕಾಮಗಾರಿಗಳು ಪೂರ್ಣಗೊಳಿಸುತ್ತೇವೆ ಎಂದು ಭರವಸೆ ನೀಡಿದರು.
ಮಹಾನಗರ ಪಾಲಿಕೆ ಆಯುಕ್ತರಾದ ರುದ್ರೇಶ ಗಾಳಿ ಪ್ರಾಸ್ತಾವಿಕ ಭಾಷಣ ಮಾಡಿದರು. ಪಾಲಿಕೆಯ ಉಪ ಆಯುಕ್ತೆ(ಆಡಳಿತ) ಭಾಗ್ಯಶ್ರೀ ಹುಗ್ಗಿ ಸ್ವಾಗತಿಸಿದರು. ದಕ್ಷಿಣ ಕ್ಷೇತ್ರದ ಎಲ್ಲ ನಗರಸೇವಕರು, ಆವಾಸ್ ಯೋಜನೆಯ ಫಲಾನುಭವಿಗಳು ಉಪಸ್ಥಿತರಿದ್ದರು.