Advertisement

ಮನೆಮುಂದೆ ಹರಿಯುವ ಕೊಳಚೆ ನೀರು

12:27 PM Apr 27, 2019 | Suhan S |

ಕಾರ್ಕಳ, ಎ. 26: ಇಲ್ಲಿನ ಪೇಟೆಯಲ್ಲಿ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದ ಪರಿಣಾಮ ಕೊಳಚೆ ನೀರು ಮನೆ ಮುಂದೆಯೇ ಹರಿಯುವಂತಹ ದುಃಸ್ಥಿತಿ ಪುರಸಭೆಯ 4ನೇ ವಾರ್ಡ್‌ನಲ್ಲಿ ಕಂಡುಬಂದಿದೆ.

Advertisement

ಮೀನು ಮಾರುಕಟ್ಟೆಯ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣ ಎಂ.ಜಿ. ಪ್ರಭು ಅವರ ಅಂಗಡಿ ಪಕ್ಕದ ಚರಂಡಿಯಲ್ಲಿ ಕೊಳಚೆ ನೀರು ಹರಿಯಬಿಡಲಾಗಿದೆ. ಸುಮಾರು 100ಕ್ಕಿಂತಲೂ ಹೆಚ್ಚಿನ ಮನೆಗಳಿಗೆ ಇದರಿಂದ ತೊಂದರೆಯಾಗಿದ್ದು, ಕೊಳಚೆಯ ಗಬ್ಬು ದುರ್ನಾತ ಮಾತ್ರವಲ್ಲದೇ ಸೊಳ್ಳೆ ಕಾಟವೂ ಹೆಚ್ಚಿದೆ.

ಸತತ ಮನವಿ:

ಒಳಚರಂಡಿ ವ್ಯವಸ್ಥೆ ಸರಿಪಡಿಸುವಂತೆ ಇಲ್ಲಿನ ಜನರು ಪುರಸಭೆ, ಜಿಲ್ಲಾಕಾರಿ, ಮಾಲಿನ್ಯ ತಡೆ ಇಲಾಖೆಗೆ ಮನವಿ ನೀಡಿದ್ದರೂ ಯಾವುದೇ ಪ್ರಯೋಜನ ವಾಗಿಲ್ಲ. ಸತತ ನಾಲ್ಕು ವರ್ಷಗಳಿಂದ ಈ ನಿಟ್ಟಿನಲ್ಲಿ ಪ್ರಯತ್ನ ಸಾಗುತ್ತಿದ್ದರೂ ಯಾರೊಬ್ಬರೂ ಸ್ಪಂದಿಸಿಲ್ಲ ಎಂದು ಸ್ಥಳೀಯ ನಿವಾಸಿ ನರೇಂದ್ರ ಪ್ರಭು ಪತ್ರಿಕೆಗೆ ತಿಳಿಸಿ ಅಸಮಾಧಾನ ವ್ಯಕ್ತಪಡಿದ್ದಾರೆ.

ಕೊಳಚೆ ನೀರಿನಿಂದಾಗಿ ಸಮೀಪದ ಲ್ಲಿರುವ ಕುಡಿಯುವ ನೀರಿನ ಬಾವಿಗೂ ತೊಂದರೆಯಾಗಲಿದೆ. ಹೀಗಾಗಿ ಸಂಬಂಧ ಪಟ್ಟವರು ಸಮಸ್ಯೆ ಬಗೆಹರಿಸಲು ಇಚ್ಛಾಶಕ್ತಿ ಪ್ರದರ್ಶಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Advertisement

 

ದೊಡ್ಡ ಮೊತ್ತದ ಹಣ ಬೇಕು:
ಒಳಚರಂಡಿ ಸಮಸ್ಯೆ ಸರಿಪಡಿಸಲು ದೊಡ್ಡ ಮೊತ್ತದ ಹಣ ಬೇಕಾಗಿರುವುದರಿಂದ ವಿಳಂಬವಾಗಿದೆ. ಈ ಕುರಿತು ಮುಖ್ಯಾಧಿಕಾರಿ ಮೇಬಲ್ ಅವರ ಗಮನಕ್ಕೂ ತರಲಾಗಿದೆ. 20 ದಿವಸದ ಒಳಗಡೆ ಚರಂಡಿ ಸಮಸ್ಯೆಯನ್ನು ಬಗೆಹರಿಸ ಲಾಗುವುದು. -ಶೋಭಾ ದೇವಾಡಿಗ, ವಾರ್ಡ್‌ ಪುರಸಭೆ ಸದಸ್ಯೆ
Advertisement

Udayavani is now on Telegram. Click here to join our channel and stay updated with the latest news.

Next