Advertisement
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಒಂದು ಶಿಕ್ಷಣ ಸಂಸ್ಥೆಯಲ್ಲಿ ಪಿ.ಯು.ಸಿಯ 400 ಮಕ್ಕಳು ಸ್ವಯಂ ಪ್ರೇರಿತರಾಗಿ ತಂದೆ ತಾಯಿ ಹೆಸರಿನಲ್ಲಿ ಪಿ.ಯು.ಸಿ ಶಿಕ್ಷಣ ಮುಗಿಯುವ ತನಕ ಸೋಶಿಯಲ್ ಮೀಡಿಯಾ ಬಳಕೆ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. ಅಂದರೆ ಮುಖ್ಯವಾಗಿ ಮೊಬೈಲ್ ನೆಟ್ ವೀಕ್ಷಣೆ ಮಾಡುವುದಿಲ್ಲ ಎಂಬ ಶಪಥ. ಈ ನಿರ್ಧಾರ ನನ್ನಂತಹ ನೂರಾರು ಶಿಕ್ಷಕರಿಗೆ, ಹೆತ್ತವರಿಗೆ ಸಂತಸ ತಂದಿದೆ. ಆದರೆ ಬುದ್ಧಿಜೀವಿಗಳು ಅಪಸ್ವರ ಎತ್ತಿದ್ದಾರೆ. ಮಕ್ಕಳ ಹಕ್ಕಿನ ಹರಣವಾಯಿತು ಎಂದು ಗೋಳಿಡು ತ್ತಿದ್ದಾರೆ. ಪಾಪ ಎಷ್ಟೋ ತಂದೆ ತಾಯಂದಿರು ತಮ್ಮ ಮಕ್ಕಳ ಮೊಬೈಲ್ ಹುಚ್ಚು ಹತ್ತಿಕ್ಕಲಾರದೆ, ವಿದ್ಯಾರ್ಜನೆಯಲ್ಲಿ ಹಿಂದೆ ಬಿದ್ದಿರುವುದಕ್ಕೆ ಕಣ್ಣೀರಿಡುತ್ತಿರುವುದು ಇವರಿಗೆ ಅರಿವೇ ಇಲ್ಲ.
Related Articles
Advertisement
ಇಂತಹ ಹುಡುಗನ ತಂದೆಯನ್ನು ಬರ ಹೇಳಿದೆೆªನು. ತನ್ನ ಮಗ ಅಧ್ಯಯನಕ್ಕೆ ತೊಂದರೆಯಾಗದಂತೆ ಕೋಣೆಯ ಬಾಗಿಲನ್ನು ಹಾಕಿ ರಾತ್ರಿ 1-2 ಗಂಟೆಯ ತನಕ ಓದುತ್ತಿರುತ್ತಾನೆ. ಸಂಶಯಗಳನ್ನು ಮೊಬೈಲ್ ನೆಟ್ ಮೂಲಕ ನೋಡಿ ಪರಿಹರಿಸಿಕೊಳ್ಳುತ್ತಿದ್ದೇನೆ ಎನ್ನುತ್ತಿದ್ದಾನೆ, ಆದರೆ ಪರೀಕ್ಷೆಯಲ್ಲಿ ಅಂಕಗಳು ಏಕೆ ಕಡಿಮೆಯಾದವು ಎಂದು ಅರ್ಥವಾಗುತ್ತಿಲ್ಲ ಎಂದರು ಮುಗ್ಧರಾಗಿ. ಆತನ ಕೈಯಲ್ಲಿದ್ದ ಮೊಬೈಲಿನಲ್ಲಿ ಏನುಂಟು ಎಂಬುದನ್ನು ತುಸು ತೋರಿಸಿದೆನು. ಪಾಪ ತಲೆತಿರುಗಿ ಬಿದ್ದು ಬಿಟ್ಟರು ಈ ಹೆತ್ತವರು. ಒಂದು ದಿನ ವಾರದ ಸಂತೆಯಲ್ಲೊಮ್ಮೆ ಸುತ್ತು ಬರುತ್ತಿದ್ದೆನು. ಗೋಡೆಯ ಮರೆಯೊಂದರಲ್ಲಿ ಸುಮಾರು 10 ವಯಸ್ಸಿನ ಮೂವರು ಮಕ್ಕಳು ಲೋಕವನ್ನೇ ಮರೆತು ಮೊಬೈಲ್ ವೀಕ್ಷಿಸುತ್ತಿದ್ದರು. ಹಿಂದಿನಿಂದ ಹೋಗಿ ಇಣುಕಿದೆ. ನೀಲಿ ಚಿತ್ರ ವೀಕ್ಷಿಸುತ್ತಿದ್ದರು. 2 ವರ್ಷದ ಮಗುವೊಂದಕ್ಕೆ ಅಮ್ಮ ನೆಟ್ ಮೂಲಕ ಕಾಟೂìನ್ ವಿಡಿಯೋ ವೀಕ್ಷಣೆ ಕಲಿಸಿದ್ದರು. ಈಗ ಮಗು ಅದೇ ಬೇಕು ಎಂದು ಹಠ ಹಿಡಿಯುತ್ತಿದೆ. ನೆಟ್‌ವರ್ಕ್ ಬಂದ್ ಮಾಡಿ ಮೊಬೈಲ್ ನೀಡಿದಲ್ಲಿ ಎತ್ತಿ ಬಿಸಾಡುತ್ತಿದೆ. ನೆಲಕ್ಕೊಗೆದು ಹುಡಿಮಾಡಿ, ನೆಟ್ ವರ್ಕ್ ಕಾಟೂìನ್ ಬೇಕು ಎಂದು ಊಟ ತಿಂಡಿ ಮಾಡದೆ ಹಠ ಹಿಡಿದು ಕುಳಿತುಕೊಳ್ಳುತ್ತದೆಯಂತೆ.
ಸುಳ್ಳು ಸುದ್ದಿ, ಸತ್ಯ ಸುದ್ದಿಗಿಂತ ಹೆಚ್ಚು ಪ್ರಚಾರ ಪಡೆಯುತ್ತದೆ. ಹೆಚ್ಚು ಅಪ್ಯಾಯಮಾನವಾಗಿರುತ್ತದೆ. ಮೊಬೈಲ್ ಕೇವಲ ಮಾತಿನ ಸಂವಹನ ಮಾಧ್ಯಮವಾಗಿರುತ್ತಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು. ಸಮಾಜಕ್ಕೆ ತಡೆಯಲಸಾಧ್ಯವಾದ ವೇಗದಲ್ಲಿ ಮೊಬೈಲ್ ಕ್ರಾಂತಿ ಮುಂದುವರಿಯುತ್ತಿದೆ. ಈ ವೇಗದೆತ್ತರ ಆಚೆ ಬದಿಯ ಪ್ರಪಾದತ್ತ ನಮ್ಮ ಸಮಾಜವನ್ನು ತಳ್ಳುತ್ತಿದೆ ಎನ್ನದೆ ವಿಧಿಯಿಲ್ಲ. ಸೋಶಿಯಲ್ ಮೀಡಿಯಾ ಮೂಲಕ ಮಾಡುವ ಅಪರಾಧಗಳು ಸೈಬರ್ ಕ್ರೆçಮ್ ಎನಿಸುತ್ತವೆ. ಇದರ ಅರಿವಿಲ್ಲದೆ ಅನೇಕ ಮಕ್ಕಳು ಈಗ ಕಠಿನ ಶಿಕ್ಷಾರ್ಹ ಅಪರಾಧಗಳನ್ನು ಮಾಡುತ್ತಿದ್ದಾರೆ.
ಹಲವು ಮನೆಯಲ್ಲಿ ಮಕ್ಕಳು ಮೊಬೈಲ್ ದಾಸರು. ರಜಾ ದಿನಗಳಲ್ಲಿ ಎಲ್ಲರೆದುರು ಒಂದಾದ ನಂತರ ಒಂದು ಸಿನೇಮಾ ವೀಕ್ಷಣೆ . ರಾತ್ರಿ ಹೆತ್ತವರು ಮಲಗಿದ ನಂತರವೂ ಇದು ರಾತ್ರೆ 1-2 ಗಂಟೆಯ ತನಕ ಮುಂದುವರಿಯುತ್ತದೆ. ಏನು ವೀಕ್ಷಿಸಿದರು ಎಂದು ನೋಡುವವರಿಲ್ಲ. ಬೆಳಗ್ಗೆ 9 ಗಂಟೆಗೆ ಎದ್ದರೆ ಪುಣ್ಯ. ಹಲವು ಮಂದಿ ಇದಕ್ಕಾಗಿ ತಮ್ಮ ಮಕ್ಕಳನ್ನು ಹಾಸ್ಟೆಲ್‌ಗೆ ಹಾಕಲು ಬಯಸುತ್ತಾರೆ. ಅಲ್ಲಿ ಹಾಟ್ ಕುಕ್ಕರ್ ವಾತಾವರಣದಲ್ಲಿ, ಸಿಸಿಟಿವಿ ಕಣ್ಗಾವಲಿನಲ್ಲಿ ಕಲಿಯಬೇಕಾಗುತ್ತದೆ. ಹೆತ್ತವರು ತಮಗೆ ಜೈಲುವಾಸ ವಿಧಿಸಿದರು ಎಂದು ಹಲಬುವ ಹಲವು ಮಕ್ಕಳನ್ನು ಕಂಡಿದ್ದೇನೆ. ಇಂದು ಮುಖ್ಯವಾಗಿ ಗಂಡು ಮಕ್ಕಳಿಗೆ ವಿದ್ಯಾಭ್ಯಾಸ ಅನಿವಾರ್ಯವಾಗಿದೆ. ಪೇಟೆಯಲ್ಲಿ ಉದ್ಯೋಗ ಖಾತ್ರಿಯಿದ್ದರೆ ಮಾತ್ರ ಹೆಣ್ಣು ಸಮ್ಮತಿಸಿ ಮದುವೆಯಾಗಿ ಗೃಹಸ್ಥಾಶ್ರಮ ಸಿದ್ಧಿಸಬಹುದಷ್ಟೇ. ವಿದ್ಯಾಭ್ಯಾಸದಿಂದ ವಿಮುಖರಾಗಿ ಕೃಷಿ, ಹಳ್ಳಿ ಬದುಕನ್ನು ನೆಚ್ಚಿದ, ನೂರಾರು ಮದುವೆಯ ವಯಸ್ಸು ಮೀರಿದ ಯುವಕರು ಇದಕ್ಕೆ ಸಾಕ್ಷಿ. ಅಂದು ಮೊಬೈಲ್‌ನ ಸ್ಥಾನವನ್ನು ಟಿವಿ ಮತ್ತು ಕಂಪ್ಯೂಟರ್‌ಗಳು ತುಂಬಿದ್ದವು. ಈಗ ಅದು ಅಂಗೈಯಲ್ಲಿ ಅಂಟಿ ಕುಳಿತಿದೆ. ಈ ಕಾರಣದಿಂದಲೇ ಗಂಡು ಮಕ್ಕಳ ಹೆತ್ತವರು ಹೆಚ್ಚು ಆತಂಕಿತರಾಗಿದ್ದಾರೆ.
ಮೊಬೈಲ್ ಇಂದು ಸಮಾಜದಲ್ಲಿ ಜನರ ಕ್ರಿಯಾತ್ಮಕ ಚಟುವಟಿಕೆಗಳನ್ನು, ಧನಾತ್ಮಕ ಚಿಂತನೆಗಳನ್ನು ಕುಂಠಿತ ಗೊಳಿಸುವ ಖಳನಾಯಕನಂತೆ ಕಂಗೊಳಿಸುತ್ತಿದೆ. ಖಳನಾಯಕನಲ್ಲಿಯೂ ಒಳ್ಳೆ ಗುಣಗಳಿರುತ್ತವೆ. ಅಮೂಲ್ಯ ಸಮಯವನ್ನು ಮಕ್ಕಳು ಮೊಬೈಲ್ ಚಾಟಿಂಗ್, ವಾಟ್ಸಪ್, ಫೇಸ್‌ಬುಕ್ ವೀಕ್ಷಣೆಯತ್ತ ಉಪಯೋಗಿ ಸಿದರೆ ಈ ಸಮಯ ಮರಳಿ ಬಂದೀತೆ? ಅನೇಕ ಉತ್ತಮ ವಿದ್ಯಾಭ್ಯಾಸ ಹೊಂದಿದ ಹಿರಿಯರು ಕೂಡಾ ತಮ್ಮ ಇತರ ಓದು, ಕೆಲಸ ಕಾರ್ಯಗಳನ್ನು ಬಿಟ್ಟು ಮೊಬೈಲ್‌ಗೆ ಎಡಿಕ್ಟ್ ಆಗಿದ್ದಾರೆ.
ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಗೂಗಲ್‌ನಲ್ಲಿ ಇತರ ವೆಬ್‌ಸೈಟ್‌ಗಳಲ್ಲಿ ಅಪಾರ ಮಾಹಿತಿ ಇದೆ. ಆದರೆ ಮಕ್ಕಳ ಚಿತ್ತ, ಮನಸ್ಸನ್ನು ಕೆರಳಿಸುವ ಪುಟಗಳೂ ಪಕ್ಕದಲ್ಲಿಯೇ ಇವೆ. ಚೀನಾದಲ್ಲಿ ಅಶ್ಲೀಲ ಎನಿಸಿದ ಎಲ್ಲಾ ಮಾಹಿತಿಗಳ ಪ್ರಸಾರವನ್ನು ತಡೆ ಹಿಡಿಯಲಾಗಿ ದೆಯಂತೆ. ನಮ್ಮಲ್ಲಿ ಅಂತಾರಾಷ್ಟ್ರೀಯ ಕಂಪೆನಿಗಳಿಗೆ ಸಡ್ಡು ಹೊಡೆದು ಅವರ ಬಿಗಿ ಹಿಡಿತದಿಂದ ಮೊಬೈಲ್‌ನಲ್ಲಿ ಸಿಗುವ ಅಶ್ಲೀಲತೆಯನ್ನು ಸಿಗದಂತೆ ಮಾಡಲು, ಫೇಸ್‌ಬುಕ್, ವಾಟ್ಸಪ್‌ನಲ್ಲಿ ಹರಿದಾಡುವ ವಿಚಾರಗಳನ್ನು ಸೆನ್ಸಾರ್ ಮಾಡಿ ನೀಡಲು ಸಾಧ್ಯವೇ?
ಮೊಬೈಲ್ ಇಂದು ಸಮಾಜದ ಪಾಲಿಗೆ ಭಸ್ಮಾಸುರನಿಗೆ ಸಿಕ್ಕಿದ ವರದಂತಾಗಿದೆ. ಹದಿಯರೆಯದವರು ಕೀಳು ಕಾಮನೆಗೆ ಬಲಿಬೀಳಲು ತೆರೆದಿಟ್ಟ ಮಾಧ್ಯಮವಾಗಿದೆ. ವಿದ್ಯಾರ್ಜನೆಗೈ ಯುತ್ತಿರುವ ಮಕ್ಕಳನ್ನು ನಿರ್ಣಾಯಕ ಹಂತದಲ್ಲಿ ಸೋಶಿಯಲ್ ಮೀಡಿಯಾ ಬಳಕೆಯಿಂದ ದೂರವಿಟ್ಟರೆ ಆ ಮಕ್ಕಳಿಗೆ ಏಕ ಚಿತ್ತದಿಂದ ಅಧ್ಯಯನ ಮಾಡಲು ಖಂಡಿತ ಸಾಧ್ಯ. ಸಮಾಜದ ಒಳಿತಿಗೆ ಬುದ್ಧಿಜೀವಿಗಳು ವಿರೋಧ ಪಕ್ಷದಂತೆ ವರ್ತಿಸದೆ ಉತ್ತಮ ನಿರ್ಧಾರಗಳನ್ನು ಸ್ವಾಗತಿಸಲಿ.
ಶಂಕರ್ ಸಾರಡ್ಕ