Advertisement

ಮಹಾಲಿಂಗಪುರ ಪುರಸಭೆ ಆಡಳಿತಕ್ಕೆ ಗ್ರಹಣ?

03:58 PM Jan 07, 2020 | Suhan S |

ಮಹಾಲಿಂಗಪುರ: ಇಲ್ಲಿಯ ಪುರಸಭೆಗೆ ಚುನಾವಣೆ ನಡೆದು 16 ತಿಂಗಳು ಕಳೆದರೂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಇಲ್ಲದೇ ಆಡಳಿತ ಯಂತ್ರ ಕುಸಿದಿದ್ದು, ಅಧಿಕಾರಿಗಳು ಹಾಗೂ ಸಿಬ್ಬಂದಿ ಮನಬಂದಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದು ಕಾಂಗ್ರೆಸ್‌ ಸದಸ್ಯರ ಹಾಗೂ ನಿವಾಸಿಗಳ ಆರೋಪವಾಗಿದೆ.

Advertisement

ಹದಗೆಟ್ಟ ವ್ಯವಸ್ಥೆ: ಪುರಸಭೆ ಸಿಬ್ಬಂದಿ ಕಚೇರಿಗೆ ಸಮಯಕ್ಕೆ ಸರಿಯಾಗಿ ಆಗಮಿಸುತ್ತಿಲ್ಲ. ಪುರಸಭೆ ಬಹುತೇಕ ಕಿಟಕಿಗಳು ಉಗಳುವ ಡಬ್ಬಿಗಳಾಗಿ ಪರಿವರ್ತನೆಯಾಗಿವೆ. ಸಮರ್ಪಕ ನಿರ್ವಹಣೆ ಕೊರತೆಯಿಂದಾಗಿ ಶೌಚಾಲಯ ಗಬ್ಬೆದ್ದು ನಾರುತ್ತಿದೆ. ಕೆಲಸ-ಕಾರ್ಯಗಳಿಗೆ ಬಂದ ಜನರಿಗೆ ಸಿಬ್ಬಂದಿ ಹಾಗೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ.

ಕೆಟ್ಟಿರುವ ಬಯೋಮೆಟ್ರಿಕ್‌ ಯಂತ್ರ: ಸುಮಾರು ಎರಡು ವರ್ಷಗಳಿಂದ ಬಯೋಮೆಟ್ರಿಕ್‌ ಯಂತ್ರ ಕೆಟ್ಟು ಹೋಗಿದೆ. ಅದನ್ನು ದುರಸ್ತಿ ಮಾಡಿಸಿಲ್ಲ. ಹೀಗಾಗಿ ಸಿಬ್ಬಂದಿ ಹಾಗೂ ಅಧಿಕಾರಿಗಳು ಕಚೇರಿಗೆ ಬರುವ ಹಾಗೂ ಹೋಗುವ ಸಮಯವೇ ತಿಳಿಯುತ್ತಿಲ್ಲ ಎಂದು ಪುರಸಭೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೇಕಾದಾಗ ಹಾಜರಿ ಸಹಿ: ಹಾಜರಿ ಪುಸ್ತಕದಲ್ಲಿ ಕೆಲವು ಸಿಬ್ಬಂದಿ ತಿಳಿದಾಗ ಸಹಿ ಮಾಡುತ್ತಿದ್ದಾರೆ. ಇನ್ನು ರಜಾ ಪತ್ರವಿಲ್ಲದೆ ರಜೆ ಹಾಕಿ ಮರುದಿನ ಬಂದು ಹಾಜರಿ ಪುಸ್ತಕದಲ್ಲಿ ಸಹಿ ಮಾಡುವ ವ್ಯವಸ್ಥೆಯಿದೆ ಎಂದು ಆರೋಪಿಸಿದ್ದಾರೆ.

ಸಾರ್ವಜನಿಕರ ಪರದಾಟ: ಮುಖ್ಯಾಧಿಕಾರಿಗಳು ವಾರದ ನಾಲ್ಕೈದು ದಿನ ಡಿಸಿ ಮತ್ತು ಎಸಿ ಯವರ ಸಭೆಯಲ್ಲಿ ಭಾಗವಹಿಸುವ ಹಿನ್ನೆಲೆಯಲ್ಲಿ ಪುರಸಭೆಯಲ್ಲಿ ಇರುವುದಿಲ್ಲ. ಇರುವ ದಿನಗಳಲ್ಲಿ ವಾರ್ಡ್ ಗಳಲ್ಲಿ ಸಂಚರಿಸಿ ಜನರ ಸಮಸ್ಯೆ ಆಲಿಸುತ್ತಿಲ್ಲ. ಮುಖ್ಯಾಧಿಕಾರಿಗಳು ಇಲ್ಲದ ಸಂದರ್ಭದಲ್ಲಿ ಪುರಸಭೆ ಕೆಲವು ಸಿಬ್ಬಂದಿ ನೆಪ ಹೇಳಿ ಹೊರಹೋಗುತ್ತಾರೆ. ಸಾರ್ವಜನಿಕರು ಸಿಬ್ಬಂದಿ ಮತ್ತು ಅಧಿಕಾರಿಗಳಿಗಾಗಿ ಗಂಟೆಗಟ್ಟಲೆ ಕಾಯುವಂತಾಗಿದೆ. ಸಣ್ಣಪುಟ್ಟ ಕೆಲಸಗಳಿಗೂ ಸಾರ್ವಜನಿಕರು ಪರದಾಡುವಂತಾಗಿದೆ ಎಂದು ಪುರಸಭೆ ಸದಸ್ಯರು ಆರೋಪಿಸಿದ್ದಾರೆ.

Advertisement

 

ವರ್ಗಾವಣೆ ಇಲ್ಲ  :  ಮುಖ್ಯಾಧಿಕಾರಿ ಪತ್ನಿ ಸೇರಿ ಕೆಲವು ಸಿಬ್ಬಂದಿ ಹತ್ತಾರು ವರ್ಷಗಳಿಂದ ಇಲ್ಲಿಯೇ ಟೀಕಾಣಿ ಹೂಡಿದ್ದಾರೆ. ಜಿಲ್ಲಾಧಿಕಾರಿಗಳು ಪುರಸಭೆಯತ್ತ ಗಮನ ಹರಿಸಿ ಸಿಬ್ಬಂದಿಯನ್ನು ಬೇರೆ ಕಡೆಗೆ ವರ್ಗಾಯಿಸಿ. ಸರಿಯಾಗಿ ಕೆಲಸ ಮಾಡದ ಸಿಬ್ಬಂದಿಗೆ ಶಿಕ್ಷೆ ನೀಡುವ ಮೂಲಕ ಹದಗೆಟ್ಟಿರುವ ಪುರಸಭೆ ವ್ಯವಸ್ಥೆಯನ್ನು ಸರಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಪುರಸಭೆ ವಿರೋಧ ಪಕ್ಷದ ಸದಸ್ಯರಾದ ಯಲ್ಲನಗೌಡ ಪಾಟೀಲ, ಜಾವೇದ ಭಾಗವಾನ, ಬಲವಂತಗೌಡ ಪಾಟೀಲ, ಬಸೀರ ಸೌದಾಗರ, ಜೆಡಿಎಸ್‌ ತೇರದಾಳ ಮತ ಕ್ಷೇತ್ರದ ಅಧ್ಯಕ್ಷ ನಿಂಗಪ್ಪ ಬಾಳಿಕಾಯಿ, ಚಿದಾನಂದ ಧರ್ಮಟ್ಟಿ ಆಗ್ರಹವಾಗಿದೆ.

 

ಹಿಂದಿನ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಅವ ಧಿಯಲ್ಲಿ ದ್ವಿ.ದ. ಸಹಾಯಕರಾಗಿದ್ದ ಚನ್ನಮ್ಮ ಪಟ್ಟಣಶೆಟ್ಟಿ ಆವಕ-ಜಾವಕದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ, ಈಗ ತಮ್ಮ ಪತಿ ಮುಖ್ಯಾ ಧಿಕಾರಿಯಾಗಿ ಬಂದ ಕೂಡಲೆ ಕಟ್ಟಡದ ಪರವಾಣಿಗೆ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅರ್ಹತೆ ಇಲ್ಲದಿದ್ದರೂ ಯಾವ ವಿಭಾಗದಲ್ಲಾದರೂ ಕೆಲಸ ಮಾಡಬಹುದು ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ. ಪುರಸಭೆ ಆಡಳಿತಾಧಿ ಕಾರಿ ಜಮಖಂಡಿ ಉಪವಿಭಾಗಾಧಿ ಕಾರಿಗಳು ಗಮನ ಹರಿಸಿ ಕ್ರಮ ಕೈಗೊಳ್ಳಬೇಕು. ಬಸವರಾಜ ರಾಯರ, ಪುರಸಭೆ ಮಾಜಿ ಅಧ್ಯಕ್ಷರು

 

­ಚಂದ್ರಶೇಖರ ಮೋರೆ

Advertisement

Udayavani is now on Telegram. Click here to join our channel and stay updated with the latest news.

Next