ಅಮೆರಿಕ : ಕೆಲವು ಪ್ರಾಣಿಗಳ ಆಟ-ತುಂಟಾಟಗಳನ್ನು ಕಂಡರೆ ಎಂತವರಿಗೂ ಮೊಗದಲ್ಲಿ ನಗು ಬಾರದೇ ಇರದು. ಅವುಗಳ ಮುಗ್ಧ ಆಟಗಳೇ ಹಾಗಿರುತ್ತವೆ. ನೋಡುಗರ ಮನದಲ್ಲಿ ಖುಷಿ ತರಿಸುತ್ತವೆ. ಇಂತಹದ್ದೇ ಒಂದು ವಿಡಿಯೋವನ್ನು ಅಮೇರಿಕಾದ ಬ್ಯಾಸ್ಕೆಟ್ ಬಾಲ್ ಮಾಜಿ ಆಟಗಾರ ರೆಕ್ಸ್ ಚಾಪ್ ಮ್ಯಾನ್ ಎಂಬುವವರು ಶೇರ್ ಮಾಡಿದ್ದಾರೆ. ವಿಡಿಯೋ ಟ್ವಿಟ್ಟರ್ ಹಿಂಬಾಲಕರ ಮನ ಸೂರೆಗೊಳಿಸುತ್ತಿದೆ.
ಹೌದು ರೆಕ್ಸ್ ಚಾಪ್ ಮ್ಯಾನ್ ಶೇರ್ ಮಾಡಿರುವ ವಿಡಿಯೋದಲ್ಲಿ ಸ್ಲಾತ್ ಪ್ರಾಣಿಯು ದೋಣಿಯಲ್ಲಿ ಕೂತು ನೀರಿನ ಜೊತೆ ಆಟವಾಡುತ್ತಿದೆ. ಓಡುವ ದೋಣಿಯ ಮೇಲೆ ಕೂತಿರುವ ಸ್ಲಾತ್ ತನ್ನ ಕೈಗಳನ್ನು ನೀರಿನೊಳಗಡೆ ಬಿಟ್ಟು ಎಂಜಾಯ್ ಮಾಡುತ್ತಿದೆ. ಈ ವಿಡಿಯೋವನ್ನು ರೆಕ್ಸ್ ಶೇರ್ ಮಾಡಿದ್ದಾರೆ.
ಏನಿದು ಸ್ಲಾತ್ :
ಸ್ಲಾತ್ ಪ್ರಾಣಿ ಮರಗಳ ಮೇಲೆ ವಾಸಿಸುವ ಒಂದು ಸಸ್ತನಿ. ಇದು ಹೆಚ್ಚಾಗಿ ದಕ್ಷಿಣ ಅಮೆರಿಕ ಹಾಗೂ ಮಧ್ಯ ಅಮೆರಿಕದ ಸಮಶೀತೋಷ್ಣ ವಲಯದ ಮಳೆಕಾಡುಗಳಲ್ಲಿ ಕಂಡುಬರುತ್ತವೆ. ಈ ಪ್ರಾಣಿ ಯಾವಾಗಲೂ ಮರಗಳ ಮೇಲೆ ತಲೆಕೆಳಗಾಗಿ ನೇತಾಡುತ್ತದೆ. ಸ್ಲಾತ್ ಗಳಲ್ಲಿ ಎರಡು ಬೆರಳಿನ ಸ್ಲಾತ್ ಹಾಗೂ ಮೂರು ಬೆರಳಿನ ಸ್ಲಾತ್ ಎಂಬ ಎರಡು ವಿಧಗಳಿವೆ.