ಫ್ಯಾಶನ್ ಲೋಕ ನಿಂತ ನೀರಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ. ದಿನದಿಂದ ದಿನಕ್ಕೆ ಇಲ್ಲಿ ಹೊಸ ಹೊಸ ಟ್ರೆಂಡ್‌ಗಳು ಬರುತ್ತವೆ, ಹೋಗುತ್ತವೆ. ಉಡುಗೆ, ಚಪ್ಪಲ್, ವಾನಿಟ್ ಬ್ಯಾಗ್ ಹೀಗೆ ಪ್ರತಿಯೊಂದು ಫ್ಯಾಶನೇಬಲ್ ವಸ್ತುಗಳಲ್ಲಿ ಪ್ರತಿದಿನ ವಿನೂತನ, ವೈಶಿಷ್ಟಗಳಿಂದ ಕೂಡಿರುತ್ತವೆ. ಅದರಲ್ಲೂ ಹೆಣ್ಣು ಮಕ್ಕಳಲ್ಲಿ ತಲೆಗೆ ಹಾಕುವ ಹೇರ್‌ಕ್ಲೀಪ್‌ನಿಂದ ಹಿಡಿದು, ಕಾಲಿಗೆ ಹಾಕುವ ನೈಲ್‌ಪಾಲೀಶ್‌ನ ವರೆಗೂ ಹೊಸ ಹೊಸ ಟ್ರೆಂಡ್‌ಗಳು ಕಾಲಿಡುತ್ತಿವೆ.
ಹೇರ್ ಕ್ಲೀಪ್ ಎಂದಾಕ್ಷಣ ನೆನೆಪಾಗುವುದು ಹಳೆ ಮಾದರಿಯ, ಕಪ್ಪು ವರ್ಣದ, ಕೋಲಿನಂತಿರುವ ಕ್ಲೀಪ್‌ಗ್ಳು. ಅನಂತರ ಬಂದಿದ್ದು ಕಲರ್‌ಫುಲ್, ಆಕರ್ಷಕ, ವಿವಿಧ ಮಾದರಿಯ ಹೇರ್‌ಕ್ಲೀಪ್‌ಗ್ಳು ಮಾರುಕಟ್ಟೆಗೆ ಬಂದವು. ಪುಟ್ಟ ಹೆಣ್ಣು ಮಕ್ಕಳ ತಲೆಯಲ್ಲಿ ಬಣ್ಣ ಬಣ್ಣದ ಕ್ಲಿಪ್‌ಗ್ಳು ರಾರಾಜಿಸಿದರೆ, ಬಗೆ ಬಗೆ ವಿನ್ಯಾಸದ ಹೇರ್ ಕ್ಲಿಪ್‌ಗ್ಳು ಯುವತಿಯರ ಮನ ಸೆಳೆಯುತ್ತವೆ. ಮುತ್ತುಗಳು, ಹೂವುಗಳು, ಚಿಟ್ಟೆಗಳು ಹೇರ್‌ಕ್ಲೀಪ್‌ಗ್ಳನ್ನು ಇನ್ನಷ್ಟು ಆಕರ್ಷಕವಾಗಿಸುತ್ತವೆ. ಇದೀಗ ಸ್ಲೋಗನ್ ಹೇರ್ ಕ್ಲಿಪ್‌ಗ್ಳ ಆಗಮನವಾಗಿದೆ.
ವಿದೇಶದ ಫ್ಯಾಶನ್ ಲೋಕದ ದಿಗ್ಗಜರು ಈ ಸ್ಪೇಲ್ಲಿಂಗ್ ಕ್ಲಿಪ್‌ಗ್ಳಿಗೆ ಮಾರು ಹೋಗಿದ್ದಾರೆ. ರ್‍ಯಾಂಪ್‌ನಲ್ಲಿ ನಡೆಯುವ ರೂಪದರ್ಶಿಯ ಸ್ಟೈಲ್ ಸೇಟ್‌ಮೆಂಟ್ ಆಗಿ ಈ ಸ್ಪೆಲ್ಲಿಂಗ್ ಕ್ಲಿಪ್‌ಗ್ಳು ಸ್ಥಾನ ಪಡೆದಿವೆ . ಭಾರತಕ್ಕೆ ಇನ್ನಷ್ಟೇ ಈ ಹೇರ್‌ಕ್ಲೀಪ್‌ಗ್ಳು ಕಾಲಿಡಬೇಕಾಗಿದೆ. ಎಲ್ಲ ಮಾದರಿಯ ಉಡುಗೆಗಳಿಗೆ ಈ ಕ್ಲೀಪ್‌ಗ್ಳು ಒಪ್ಪುವುದರಿಂದ ಯಾವುದೇ ಸಮಸ್ಯೆಗಳಿಲ್ಲ. ಅಷ್ಟೇ ಎಲ್ಲ ಉಡುಗೆಗಳಲ್ಲಿ ಹಳೆಯ ವಿನ್ಯಾಸಗಳು ಮೂಲೆಗುಂಪಾದಂತೆ ಈ ಕ್ಲೀಪ್‌ಗ್ಳು ಮೂಲೆ ಗುಂಪಾಗಲು ಸಾಧ್ಯವಿಲ್ಲ.
ವಿದೇಶಿ ವಿನ್ಯಾಸಕಾರ್ತಿಯರಾದ ಸಿಮೋನೆ ರೊಚಾ, ಆಶ್ಲೇ ವಿಲಿಯಮ್ಸ್ ಇವರ ಕೈ ಚಳಕದಲ್ಲಿ ಈ ಸ್ಲೋಗನ್/ ಸ್ಪೇಲ್ಲಿಂಗ್ ಹೇರ್ ಕ್ಲೀಪ್ ರೂಪುಗೊಂಡಿದೆ. ಡೆನ್ಮಾರ್ಕ್‌ನ ಕೋಪನ್ ಹ್ಯಾಗನ್‌ನಲ್ಲಿ ನಡೆದ ಪ್ಯಾಶನ್ ವೀಕ್‌ನಲ್ಲಿ ಈ ಸ್ಲೋಗನ್ ಹೇರ್ ಕ್ಲೀಪ್‌ಗ್ಳ ಜನಪ್ರಿಯತೆ ಹೆಚ್ಚಿತು. ಯಾವುದೇ ಮಾರ್ಡನ್ ಡ್ರೆಸ್‌ಗಳಿಗೆ ಸ್ಪೇಲ್ಲಿಂಗ್ ಹೇರ್ ಕ್ಲೀಪ್ ಸೂಟ್ ಆಗುತ್ತವೆ. ವಿದೇಶಿ ವಧುಗಳು ತಮ್ಮ ಮದುವೆ ಸಮಾರಂಭ ದಲ್ಲಿಯೂ ಧರಿಸಲು ಇಷ್ಟಪಡುತ್ತಿದ್ದಾರೆ. ಅಷ್ಟರ ಮಟ್ಟಿಗೆ ಇದರ ಬೇಡಿಕೆ ಯುರೋಪ್ ಮಾರುಕಟ್ಟೆಯಲ್ಲಿದೆ.
ಏನಿದು ಸ್ಲೋಗನ್ ಹೇರ್‌ಕ್ಲಿಪ್?
ಇದೀಗ ಹೇರ್‌ಕ್ಲಿಪ್‌ಗ್ಳ ಲೋಕಕ್ಕೆ ಕಾಲಿಟ್ಟಿರುವ ಹೊಸ ವಿನ್ಯಾಸ ಸ್ಲೋಗನ್ ಹೇರ್ ಕ್ಲಿಪ್. ಪದಗಳಿ ರುವ ಹೇರ್ ಕ್ಲಿಪ್‌ಗ್ಳು ಇಂದಿನ ಟ್ರೆಂಡಿ ಹೇರ್ ಕ್ಲಿಪ್‌ಗ್ಳು. ಹಲೋ, ಎಸ್, ಕ್ರೆಜೀ, ಲಕ್, ಡ್ರೀಮ್ ಗರ್ಲ್, ಕ್ಯೂಟ್ ಹೀಗೆ ನಾನಾ ಪದಗಳು ಈ ಕ್ಲಿಪ್‌ನಲ್ಲಿ ಮುದ್ರಿತವಾಗಿರುತ್ತವೆ. ಉಡುಗೆಗೆಳಿಗೆ ಸೂಕ್ತವಾಗಂತಹ ಹೇರ್‌ಕ್ಲಿಪ್‌ಗ್ಳನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. ನಿಮ್ಮ ಮೂಡ್‌ಗೆ ಸರಿಹೊಂದುವ ಕ್ಲಿಪ್‌ಗ್ಳನ್ನು ಧರಿಸಿ ನಿಮ್ಮ ಮನದ ಭಾವನೆಯನ್ನು ತಿಳಿಸಬಹುದು.
– ಧನ್ಯಾ