Advertisement
ಕಲ್ಮಡ್ಕದಿಂದ ಕಾಪಡ್ಕದ ವರೆಗೆ ಖಾಸಗಿ ಕಂಪೆನಿಯೊಂದು ಜಿ.ಪಂ. ಎಂಜಿನಿಯರಿಂಗ್ ಇಲಾಖೆಯ ಅನುಮತಿ ಪಡೆದು ಕೇಬಲ್ ಅಳವಡಿಸಲು ರಸ್ತೆ ಬದಿಯಲ್ಲಿ ಗುಂಡಿ ತೋಡಿದೆ. ಮಳೆಗಾಲದ ಸಂದರ್ಭ ದಲ್ಲೂ ಗುಂಡಿಗಳನ್ನು ಮುಚ್ಚದ ಕಾರಣ ಅವುಗಳಲ್ಲಿ ಚರಂಡಿ ನೀರು ನಿಂತು, ರಸ್ತೆಯಲ್ಲೂ ಹರಿಯುತ್ತಿದೆ. ಇದರಿಂದ ರಸ್ತೆ ಸಂಪೂರ್ಣ ಹದಗೆಟ್ಟಿ ದ್ದು, ಸಂಚಾರವೇ ದುಸ್ತರವಾಗಿದೆ.
ಕಲ್ಮಡ್ಕ ಮುಖ್ಯ ರಸ್ತೆಯ ನಾಲ್ಕು ಮೋರಿಗಳಿಗೆ ಈ ಗುಂಡಿಗಳಿಂದ ಹಾನಿಯಾಗಿದ್ದು, ಚರಂಡಿ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯ ವಾಗುತ್ತಿಲ್ಲ. ಕುಲಾಯಿ ತೋಡಿಯಲ್ಲಿ ತಡೆಗೋಡೆಗೂ ಹಾನಿಯಾಗಿದೆ. ಸಾರ್ವಜನಿಕ ಮೋರಿಯನ್ನು ಹಾಳು ಗೆಡವಿದ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮ ಸಭೆಯಲ್ಲೂ ಪ್ರಸ್ತಾವ
ಕಲ್ಮಡ್ಕ ರಸ್ತೆ ಹೊಂಡ ಬಿದ್ದಿದ್ದು, ಸಂಚಾರಕ್ಕೆ ಕಷ್ಟವಾಗುತ್ತಿದೆ. ಈ ಮಧ್ಯೆ ಮೊಬೈಲ್ ಕಂಪೆನಿ ಅಗೆದಿರುವ ಗುಂಡಿಗಳಿಂದ ಅದು ಮತ್ತಷ್ಟು ಹದಗೆಟ್ಟಿದೆ ಎಂದು ಗ್ರಾಮಸ್ಥರು ಗ್ರಾಮ ಸಭೆಯಲ್ಲೂ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ರಸ್ತೆ ಕೆಸರು ಮಯವಾಗಿ ಅಲ್ಲಲ್ಲಿ ಹೊಂಡಗಳು ನಿರ್ಮಾಣವಾಗಿವೆ. ಮಳೆಗಾಲದಲ್ಲಿ ಚರಂಡಿಯಲ್ಲಿ ಸರಿಯಾಗಿ ನೀರು ಹೋಗದೆ ಈ ಪರಿಸ್ಥಿತಿ ನಿರ್ಮಾಣ ವಾಗಿದ್ದು, ಗುಂಡಿಯನ್ನು ಮುಚ್ಚಿ ರಸ್ತೆಯನ್ನು ಸರಿಪಡಿಸಬೇಕೆಂದು ಆಗ್ರಹಿಸಿದ್ದರು.
Related Articles
ದುರಸ್ತಿಯಾಗಿ ಮರು ಡಾಮರು ಕಂಡಿದ್ದ ಕಲ್ಮಡ್ಕ ರಸ್ತೆಯ ಸುಮಾರು 700 ಮೀ. ಭಾಗ ಹಾಳಾಗಿ ಹೋಗಿದೆ. ಕಾನೂನು ಪ್ರಕಾರ ರಸ್ತೆಯ ಚರಂಡಿಯಿಂದ ದೂರದಲ್ಲಿ ಗುಂಡಿ ತೆಗೆಯಬೇಕಿತ್ತು. ಆದರೆ ಜೆಸಿಬಿ ಮೂಲಕ ರಸ್ತೆ ಬದಿಯಲ್ಲೇ ಗುಂಡಿ ತೆಗೆದು ಮಣ್ಣನ್ನು ಚರಂಡಿಗೆ ಹಾಕಿದ್ದೇ ಇದಕ್ಕೆ ಕಾರಣ ಎಂದು ಸ್ಥಳೀಯರು ದೂರುತ್ತಿದ್ದಾರೆ.
Advertisement
ಹಾಳಾದ ರಸ್ತೆ ಸರಿಪಡಿಸಿರಸ್ತೆ ಬದಿಯೇ ಗುಂಡಿ ತೆಗೆದು ಚರಂಡಿಗೆ ಮಣ್ಣು ಹಾಕಿದ ಕಾರಣ ರಸ್ತೆಯೆಲ್ಲ ಹಾಳಾಗಿ ಹೋಗಿದೆ. ದ್ವಿಚಕ್ರ ವಾಹನ ಸವಾರರು ಸಹಿತ ಇತರ ವಾಹನಗಳಿಗೆ ಸಂಚರಿಸಲು ತೋದರೆಯಾಗಿದೆ. ಚರಂಡಿ ನೀರು ಸರಿಯಾಗಿ ಹರಿದು ಹೋಗಲು ವ್ಯವಸ್ಥೆ ಮಾಡಿ, ಹಾಳುಗೆಡವಿದ ರಸ್ತೆ ಹಾಗೂ ಮೋರಿಯನ್ನು ಶೀಘ್ರ ದುರಸ್ತಿಗೊಳಿಸಿ. – ಜಯರಾಜ್ ನಡ್ಕ, ಗ್ರಾಮಸ್ಥರು
ಸರಿಪಡಿಸುತ್ತಿದ್ದೇವೆ
ಗುಂಡಿ ಮುಚ್ಚಲು ಕ್ರಮ ಕೈಗೊಳ್ಳಲಾಗಿದೆ. 4-5 ದಿನಗಳಿಂದ ರಸ್ತೆಯನ್ನು ಸರಿಪಡಿಸುವ ಕಾರ್ಯವನ್ನು ಜಿ.ಪಂ. ಎಂಜಿನಿಯರ್ ಇಲಾಖೆಯಿಂದ ಮಾಡಿದ್ದೇವೆ. ಮಳೆಯ ಕಾರಣದಿಂದ ರಸ್ತೆ ಕೆಸರುಮಯವಾಗಿದೆ. ಜಿಯೋ ಸಂಸ್ಥೆಯವರಿಗೆ ಬೇಸಗೆಯಲ್ಲಿ ಕಾಮಗಾರಿ ನಡೆಸಲು ಅನುಮತಿ ನೀಡಲಾಗಿತ್ತು. ಮಳೆಗಾಲದಲ್ಲಿ ಕಾಮಗಾರಿ ಮುಂದುವರಿಸಿದ ಪರಿಣಾಮ ಒಂದೆರಡು ಕಡೆ ರಸ್ತೆ ಹಾಳಾಗಿದೆ.
– ಹನುಮಂತರಾಯಪ್ಪ,ಸಹಾಯಕ ಎಂಜಿನಿಯರ್, ಜಿ.ಪಂ. ಎಂಜಿನಿಯರಿಂಗ್ ಉಪವಿಭಾಗ, ಸುಳ್ಯ