Advertisement
ಭಾರತೀಯ ಸೈನಿಕರು ಪಾಕ್ ಸೇನೆಯ ಪುಂಡಾಟಕ್ಕೆ ಸರಿಯಾಗಿ ಉತ್ತರ ನೀಡಿದ್ದಾರೆ. ಸೋಮವಾರ ರಾತ್ರಿ ಮೂವರು ಪಾಕಿಸ್ತಾನಿ ಸೈನಿಕರನ್ನು ಹೊಡೆದುರುಳಿಸಿದ್ದಾರೆ ನಮ್ಮ ಧೀರ ಯೋಧರು. ಭಾರತವನ್ನು ಅನಗತ್ಯವಾಗಿ ತಡವಿ, ಪೆಟ್ಟು ತಿಂದು ಬೆರಳು ಮಾಡಿ ದೂರುವುದನ್ನೇ ಅಭ್ಯಾಸ ಮಾಡಿಕೊಂಡಿರುವ ಪಾಕಿಸ್ತಾನಿ ಸೇನೆ ಈ ಘಟನೆಯನ್ನು “”ಭಾರತದಿಂದ ನಡೆದ ಅಪ್ರಚೋದಿತ ದಾಳಿ, ಕದನ ವಿರಾಮ ಉಲ್ಲಂಘನೆ, ಅಕಾರಣ ಗುಂಡಿನ ದಾಳಿ” ಎಂದು ಕರೆದಿದೆ. ಆದರೆ ಭಾರತ ತಿರುಗೇಟು ನೀಡಿದೆ ಎನ್ನುವುದನ್ನು ಒಪ್ಪಿಕೊಳ್ಳಲು ಮಾತ್ರ ಅದು ತಯ್ನಾರಿಲ್ಲ. ಇದೇ ಡಿಸೆಂಬರ್ 23 ರಂದು ರಜೌರಿಯ ನಿಯಂತ್ರಣ ರೇಖೆಯ ಬಳಿ ಯುದ್ಧವಿರಾಮ ಉಲ್ಲಂಘನೆ ಮಾಡಿ ಭಾರತದ ಒಬ್ಬರು ಮೇಜರ್ ಸಹಿತ ನಾಲ್ಕು ಸೈನಿಕರ ಹತ್ಯೆ ಮಾಡಿತ್ತು ಪಾಕ್. ಆ ಹೇಡಿ ಕೃತ್ಯಕ್ಕೆ ಪ್ರತೀಕಾರ ವಾಗಿಯೇ ಭಾರತ ಈ ದಾಳಿ ನಡೆಸಬೇಕಾಯಿತು. ವಿಶೇಷವೆಂದರೆ ಭಾರತ ಸೇನೆ ಹಿಂದೆಂದಿಗಿಂತಲೂ ಹೆಚ್ಚು ತೀವ್ರವಾಗಿ ಪಾಕ್‌ಗೆ ಪ್ರತ್ಯುತ್ತರ ನೀಡುತ್ತಿದೆ. ಗಡಿ ಭಾಗದಲ್ಲಿ ಅರಾಜಕತೆ ಸೃಷ್ಟಿಸಿದರೆ ತಾನಿನ್ನು ಸಹಿಸುವು ದಕ್ಕೆ ಸಾಧ್ಯವಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಭಾರತ ನೀಡಿದೆ. ಇದು ಅನಿವಾರ್ಯವೂ ಸಹ. ಏಕೆಂದರೆ 2016ರ ಸೆಪ್ಟೆಂಬರ್‌ನಲ್ಲಿ ಭಾರತ ನಡೆಸಿದ ಸರ್ಜಿಕಲ್ ಸ್ಟ್ರೈಕ್‌ನ ನಂತರವೂ ಪಾಕ್ ಸೇನೆ ತನ್ನ ಹಳೆಯ ಚಾಳಿ ಬಿಡಲು ಸಿದ್ಧವಾಗುತ್ತಿಲ್ಲ, ಪದೇ ಪದೆ ಅಪ್ರಚೋದಿತ ದಾಳಿ ನಡೆಸು ವುದು ಮತ್ತು ಆತಂಕವಾದಿ ಗಳನ್ನು ಭಾರತದೊಳಗೆ ನುಸುಳಿಸುವ ಪ್ರಯತ್ನವನ್ನು ಮುಂದುವರಿಸಿಯೇ ಇದೆ. 778 ಕಿಲೋಮೀರ್ ಉದ್ದದ ಗಡಿ ರೇಖೆಯಲ್ಲಿ ನಿತ್ಯವೂ ಒಂದಲ್ಲ ಒಂದು ಭಾಗದಲ್ಲಿ ಪಾಕ್‌ನ ದುಷ್ಕೃತ್ಯಗಳು ಇಣುಕು ತ್ತಲೇ ಇರುತ್ತವೆ. 2017ರಲ್ಲೇ ಪಾಕ್ ಸೇನೆ 820 ಬಾರಿ ಕದನ ವಿರಾಮ ಉಲ್ಲಂ ಸಿದೆ (2016 ರಲ್ಲಿ ಈ ಸಂಖ್ಯೆ 228ರಷ್ಟಿದ್ದರೆ, ಇದು 2015ರಲ್ಲಿ 152ರಷ್ಟಿತ್ತು)!
Related Articles
Advertisement
ಪಾಕ್ ಹೇಳುವುದು ಒಂದು ಮಾಡುವುದು ಮತ್ತೂಂದು ಎನ್ನುವುದು ಈ ಎಲ್ಲಾ ಘಟನೆಗಳಿಂದ ಮತ್ತೂಮ್ಮೆ ರುಜುವಾತಾಗಿದೆ. ಪಾಕ್ ಭಾರತದತ್ತ ಈ ಪರಿ ಬೆಂಕಿ ಉಗುಳುತ್ತಿರುವುದನ್ನು ನೋಡಿದಾಗ, ಆರುತ್ತಿರುವ ದೀಪ ಕೊನೆಗಾಲದಲ್ಲಿ ಹೊತ್ತಿ ಉರಿಯುವುದು ನೆನಪಾಗುತ್ತಿದೆಯಷ್ಟೆ!