Advertisement
ಶನಿವಾರದಂದು 160 ರೂ. ರವರೆಗೆ ಮಾರಾಟವಾಗಿತ್ತು.ಕೆಲವು ದಿನಗಳಿಂದ ಏರಿಕೆ ಕಾಣು ತ್ತಿದ್ದ ಬೆಲೆ ರವಿವಾರ ಸ್ಥಿರವಾಗಿತ್ತು. ಹಳೆ ಈರುಳ್ಳಿಗೆ ಕೆ.ಜಿ.ಗೆ 140ರಿಂದ 150 ರೂ. ತನಕ ಇತ್ತು.
ಉಡುಪಿ: ನಗರದ ಮಾರುಕಟ್ಟೆಗೆ ರವಿವಾರ ಈಜಿಪ್ಟ್ ಈರುಳ್ಳಿ ಆವಕವಾಗಿದ್ದು, ಹಳೆ ಈರುಳ್ಳಿ ದರ ಇಳಿದಿದೆ. ಅದು ಕೆ.ಜಿ.ಗೆ 130 ರೂ., ಹೊಸತು 110 ರೂ., ಸಣ್ಣ ಗಾತ್ರದ್ದು 80ರಿಂದ 90 ರೂ., ಈಜಿಪ್ಟ್ ಈರುಳ್ಳಿ 125 ರೂ.ನಂತೆ ಮಾರಾಟವಾಗಿದೆ.
Related Articles
ಕುಂದಾಪುರ: ಈರುಳ್ಳಿ ಬೆಲೆ ಏರಿಕೆಯಿಂದಾಗಿ ಗ್ರಾಮೀಣ ಭಾಗಗಳ ಅಂಗಡಿಗಳಲ್ಲಿ ದಾಸ್ತಾನು ಅಭಾವ ಉಂಟಾಗಿದ್ದು, ಸಿದ್ದಾಪುರ, ಹಾಲಾಡಿ, ಬಸೂÅರು ಮತ್ತಿತರ ಕಡೆಗಳ ಜನರು ಈರುಳ್ಳಿಗಾಗಿ ಕುಂದಾಪುರಕ್ಕೆ ಧಾವಿಸುತ್ತಿದ್ದಾರೆ.
Advertisement
ಗ್ರಾಮಾಂತರ ಪ್ರದೇಶದ ಸಣ್ಣಪುಟ್ಟ ಅಂಗಡಿಗಳಲ್ಲಿ ಈರುಳ್ಳಿ ಸಿಗುತ್ತಿಲ್ಲ. ಬೆಲೆ ಜಾಸ್ತಿಯಿದ್ದರೂ ಅನಿವಾರ್ಯ ವಾಗಿರುವುದರಿಂದ ಹತ್ತಾರು ಕಿ.ಮೀ. ದೂರದ ಕುಂದಾಪುರ ಪೇಟೆಗೆ ಬರುತ್ತಿದ್ದಾರೆ. ಗ್ರಾಹಕರಿಗೆ ಇದರಿಂದ ವಾಹನ ಸಂಚಾರ ಶುಲ್ಕ ಹೆಚ್ಚುವರಿ ಹೊರೆಯಾಗುತ್ತಿದೆ.
ಇಲ್ಲಿ ಕೆಜಿಗೆ 150 ರೂ. ನಿಂದ 160 ರೂ.ವರೆಗೆ ಮಾರಾಟವಾಗುತ್ತಿದೆ. ಸಣ್ಣ ಈರುಳ್ಳಿ ಬೆಲೆಯೂ ಏರಿಕೆಯಾಗಿದ್ದು 120 ರೂ.ನಿಂದ 130 ರೂ.ವರೆಗೆ ಇದೆ.
ಒಂದು ಈರುಳ್ಳಿಗೆ 60 ರೂ.!2-3 ದಿನಗಳಿಂದ ಕುಂದಾಪುರದಲ್ಲೂ ಟರ್ಕಿ ಈರುಳ್ಳಿ ಬಿಕರಿಯಾಗುತ್ತಿದೆ. ಆದರೆ ಅದು ಅಷ್ಟೇನೂ ರುಚಿಕರ ಅಲ್ಲ ಎನ್ನುವ ಕಾರಣಕ್ಕೆ ಬೇಡಿಕೆ ಇಲ್ಲ. ಇದು ದೊಡ್ಡ ಗಾತ್ರದ್ದಾಗಿದ್ದು, 2 ಈರುಳ್ಳಿ ಒಂದು ಕೆಜಿಯಷ್ಟು ಇರುತ್ತದೆ. ಅಂದರೆ ಒಂದು ಈರುಳ್ಳಿಗೆ 60ರಿಂದ 70 ರೂ.! ಗ್ರಾಹಕರು ಈರುಳ್ಳಿ ಖರೀದಿಸುತ್ತಾರೆಯೋ ಇಲ್ಲವೋ ಎನ್ನುವ ಗೊಂದಲ ಮತ್ತು ಹೊಸ ಈರುಳ್ಳಿಯಲ್ಲಿ ಹೆಚ್ಚಿನ ಭಾಗ ಹಾಳಾಗಿರುತ್ತದೆ ಎನ್ನುವ ಆತಂಕದಿಂದ ಕುಂದಾಪುರದಲ್ಲೂ ವ್ಯಾಪಾರಿಗಳು ಈರುಳ್ಳಿಯ ದಾಸ್ತಾನು ಇರಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.