Advertisement

ಹಲವು ಸಮಸ್ಯೆಗಳಿಗೆ ನಿದ್ದೆಯೇ ಪರಿಹಾರ

11:39 AM Jun 05, 2019 | mahesh |

ಚಿಂತೆಯಿಲ್ಲದವನಿಗೆ ಸಂತೆಯಲ್ಲೂ ನಿದ್ದೆ ಎನ್ನುವಂತೆ ಚಿಂತೆಯಿಲ್ಲದವನಿಗೆ ನಿದ್ದೆಯ ಸಮಸ್ಯೆ ಕಡಿಮೆ. ಆದರೆ ಈಗ ನಿದ್ದೆಯ ಸಮಸ್ಯೆ ಸಾಮಾನ್ಯವಾಗಿಬಿಟ್ಟಿದೆ. ನಿದ್ದೆ ಸರಿಯಾಗಿಲ್ಲ ಎಂಬ ಕಾರಣಕ್ಕೆ ಕೊರಗುವವ ಸಂಖ್ಯೆ ಇಂದು ಅಧಿಕವಾಗುತ್ತಿದೆ. ನಿದ್ದೆ ಎನ್ನುವುದು ಮನುಷ್ಯನ ಆರೋಗ್ಯಕ್ಕೆ ಉತ್ತಮ ಮದ್ದು. ದೇಹ ಎಷ್ಟೇ ದಣಿದಿದ್ದರೂ ನಿದ್ದೆ ಮಾಡಿ ಎದ್ದಾಗ ದೇಹದಲ್ಲಿನ ಆಯಾಸ ಮಾಯವಾಗಿರುತ್ತದೆ ಹಾಗೂ ಮನಸ್ಸು ಚೈತನ್ಯದಿಂದ ಕೂಡಿರುತ್ತದೆ. ನಿದ್ದೆ ಸರಿಯಾಗಿ ಆಗಿಲ್ಲ ಎಂದಾದರೇ ಹಲವು ರೋಗಗಳನ್ನು ಮೈಗೆಳೆದುಕೊಂಡಂತೆ.

Advertisement

ಎಷ್ಟು ನಿದ್ದೆ ಅವಶ್ಯ
ಮನುಷ್ಯ ಹಗಲು ಹೊತ್ತಲ್ಲಿ ಕೆಲಸ ಮಾಡುವುದರಿಂದ ರಾತ್ರಿ ಹೊತ್ತು ನಿದ್ದೆ ಅತ್ಯವಶ್ಯಕ. ವಯಸ್ಸಿಗೆ ತಕ್ಕಂತೆ, ಮನುಷ್ಯನಿಂದ ಮನುಷ್ಯನಿಗೆ ಅವರ ಆರೋಗ್ಯಕ್ಕೆ ತಕ್ಕಂತೆ ನಿದ್ದೆಯ ಅವಧಿಯಲ್ಲಿ ವ್ಯತ್ಯಾಸವಿರುತ್ತದೆ. ಆದರೆ ಕನಿಷ್ಠ ನಿದ್ದೆ ಎಲ್ಲರಿಗೂ ಅಗತ್ಯ. ಉತ್ತಮ ಆರೋಗ್ಯಕ್ಕಾಗಿ ಮನುಷ್ಯನಿಗೆ 8 ಗಂಟೆ ನಿದ್ದೆಯ ಅಗತ್ಯವಿದೆ.

ಪರಿಹಾರಗಳು
ನಿದ್ದೆಯ ಸಮಸ್ಯೆ ಉಂಟಾಗುವುದು ನಮ್ಮ ದಿನನಿತ್ಯದ ಚಟುವಟಿಕೆಗಳ ಆಧಾರದ ಮೇಲೆ. ಆದ್ದರಿಂದ ನಮ್ಮ ದಿನನಿತ್ಯದ ಚಟುವಟಿಕೆಗಳ ಮೇಲೆ ನಿಯಂತ್ರಣ ಸಾಧಿಸಿದರೆ ನಿದ್ದೆಯ ಸಮಸ್ಯೆ ನಿಯಂತ್ರಿಸಬಹುದು. ನಿದ್ದೆಯ ಸಮಸ್ಯೆ ಆರೋಗ್ಯದ ಏರುಪೇರಿನಿಂದಾಗಿ ಸಮಸ್ಯೆಯುಂಟಾದಲ್ಲಿ ವೈದ್ಯರನ್ನು ಕಾಣಬೇಕು.

1 ಒತ್ತಡದ ಬದುಕು ನಿದ್ದೆಗೆ ಪ್ರಮುಖ ಕಾರಣ. ಧ್ಯಾನ ಮಾಡುವುದ ರಿಂದ ಒತ್ತಡವನ್ನು ನಿಯಂತ್ರಿಸಲು ಸಾಧ್ಯ. ಒತ್ತಡ ಕಡಿಮೆಯಾದರೆ ನಿದ್ದೆಯ ಸಮಸ್ಯೆ ದೂರವಾಗುವುದರಲ್ಲಿ ಅನುಮಾನವಿಲ್ಲ.

2 ಮಲಗುವ ಮೊದಲು ಬಿಸಿ ಹಾಲು ಕುಡಿಯುವುದರಿಂದ ಚೆನ್ನಾಗಿ ನಿದ್ದೆ ಬರುತ್ತದೆ.

Advertisement

3 ತಲೆಗೆ ಚೆನ್ನಾಗಿ ಎಣ್ಣೆ ಹಾಕಿ ಮಸಾಚ್‌ ಮಾಡಿದಾಗ ತಲೆ ತಂಪಾಗುವುದರಿಂದ ಚೆನ್ನಾಗಿ ನಿದ್ದೆ ಬರುತ್ತದೆ.

4 ಮಲಗುವ ಮೊದಲು ಸಂಗೀತ ಕೇಳಿ. ಇದರಿಂದ ಮನಸ್ಸು ರಿಲ್ಯಾಕ್ಸ್‌ ಆಗಿ ಚೆನ್ನಾಗಿ ನಿದ್ದೆ ಬರುತ್ತದೆ.

5 ಬೇಗ ಮಲಗಿ ಬೇಗ ಏಳುವ ಅಭ್ಯಾಸ ಮಾಡಿದರೆ ನಿದ್ದೆಯ ಸಮಸ್ಯೆಯುಂಟಾಗುವುದಿಲ್ಲ.

-   ರಂಜಿನಿ ಮಿತ್ತಡ್ಕ

Advertisement

Udayavani is now on Telegram. Click here to join our channel and stay updated with the latest news.

Next