Advertisement
ರವಿವಾರ ತಮ್ಮ ಗೃಹ ಕಚೇರಿಯಲ್ಲಿ ಲೋಕಸಭಾ ಚುನಾವಣೆ ನಿಮಿತ್ತ ಹಮ್ಮಿಕೊಂಡ ಕನಕಗಿರಿ ಕ್ಷೇತ್ರದ ಪಕ್ಷದ ಮುಖಂಡರು, ಕಾರ್ಯಕರ್ತರು, ಚುನಾಯಿತ ಜನಪ್ರತಿನಿಧಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರಕ್ಕೆ ಬಂದು ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಇದರಿಂದ ಕಾಂಗ್ರೆಸ್ ಮತದಾರರ ಮನದಾಳದಲ್ಲಿ ಮೂಡಿಸಿಕೊಂ ಡಿದೆ. ಆದರೆ ಬಿಜೆಪಿ ವಿಶ್ವಾಸ ಕಳೆದುಕೊಂಡು ಬರೀ ಸುಳ್ಳು ಹೇಳುತ್ತಲೇ ಜನರನ್ನು ವಂಚಿಸು ತ್ತಿದ್ದಾರೆ. 18 ಸಾವಿರ ಕೋ. ರೂ. ಬರ ಪರಿಹಾರವನ್ನು ರಾಜ್ಯ ಸರಕಾರ ಕೇಳಿ 6 ತಿಂಗಳು ಕಳೆದರೂ 1 ರೂಪಾಯಿಯನ್ನೂ ನೀಡಿಲ್ಲ. ಹೀಗಾಗಿ ರಾಜ್ಯ ಸರಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಅಲ್ಲಿಯಾದರೂ ನಮಗೆ ನ್ಯಾಯ ಸಿಗುವ ಭರವಸೆ ಇದೆ ಎಂದರು.
ಬೆಂಗಳೂರು: ಮೋದಿ ಎಂದು ಕೂಗಿದವರ ಕಪಾಳಕ್ಕೆ ಹೊಡೆಯಬೇಕು ಎಂದಿರುವ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ವಿರುದ್ಧ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಬಿಜೆಪಿ ನಾಯಕರು ದೂರು ನೀಡಿದ್ದು, ಚುನಾವಣ ಪ್ರಕ್ರಿಯೆ ಮತ್ತು ಕಾಂಗ್ರೆಸ್ ಪರ ಪ್ರಚಾರದಿಂದ ನಿರ್ಬಂಧಿಸುವಂತೆ ಆಗ್ರಹಿಸಿದ್ದಾರೆ. ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರನ್ನು ಭೇಟಿ ಮಾಡಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ನೇತೃತ್ವದ ತಂಡವು, ಬಿಜೆಪಿಯ ಯುವ ಮತದಾರರ ವಿರುದ್ಧ ಸಚಿವರು ಪ್ರಚೋದನಾತ್ಮಕ ಹಾಗೂ ಬೆದರಿಕೆ ಹುಟ್ಟಿಸುವ ರೀತಿಯ ಮಾತುಗಳನ್ನಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. “ನೀವು ನಿಮ್ಮ ಅಪ್ಪನಿಗೇ ಹುಟ್ಟಿದ್ದರೆ ಕಪಾಳಕ್ಕೆ ಹೊಡೆದು ನೋಡಿ ಎಂದು ಕೇಳಬೇಕೆನಿಸುತ್ತಿದೆ’
ಬೆಂಗಳೂರು: ಸಚಿವ ಶಿವರಾಜ ತಂಗಡಗಿಯವರ ಕಪಾಳ ಮೋಕ್ಷ ಹೇಳಿಕೆಗೆ ಮಾಜಿ ಸಚಿವ ಸಿ.ಟಿ.ರವಿ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ತಂಗಡಗಿ ನೀವು ನಿಮ್ಮ ಅಪ್ಪನಿಗೇ ಹುಟ್ಟಿದ್ದರೆ ಕಪಾಳಕ್ಕೆ ಹೊಡೆದು ನೋಡಿ ಅಂತ ಕೇಳಬೇಕು ಎಂದು ಅನ್ನಿಸಿತ್ತು. ಆದರೆ ನಾನು ಈ ಪ್ರಶ್ನೆ ಅವರಿಗೆ ಕೇಳುವುದಿಲ್ಲ. ಯಾಕೆಂದರೆ ನಾನು ಅವರ ಮಟ್ಟಕ್ಕೆ ಇಳಿಯುವುದಿಲ್ಲ’ ಎಂದು ತಿರುಗೇಟು ನೀಡಿದ್ದಾರೆ.
Related Articles
Advertisement
ಕಾಂಗ್ರೆಸಿಗರು ಹತಾಶರಾಗಿದ್ದಾರೆ. ತಮ್ಮ ಸ್ಥಾನದ ಅರಿವಿಲ್ಲದೆ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ಬಿಜೆಪಿ ಮನೆ ಹಾಳಾಗಲಿ ಎಂದರು. ಆದರೆ ಮನೆ ಹಾಳು ಮಾಡುವ ಮನಸ್ಥಿತಿ ಇರುವವರು ದೇಶ ಹಾಳು ಮಾಡುತ್ತಾರೆ. 47 ಕೋಟಿ ಜನ ಬಿಜೆಪಿಗೆ ಮತ ಹಾಕಿದ್ದಾರೆ. ಹಾಗಾದರೆ ಅಷ್ಟು ಜನರ ಮನೆ ಹಾಳಾಗಲಿ, ದೇಶ ಹಾಳಾಗಲಿ ಎಂಬುದು ಸಿದ್ದರಾಮಯ್ಯನವರ ಉದ್ದೇಶವೇ ಎಂದು ಪ್ರಶ್ನಿಸಿದರು.