Advertisement

ಸ್ಕೈವಾಕ್‌ ವಿವಾದ: ಬಿಬಿಎಂಪಿಗೆ ನೋಟಿಸ್‌

06:22 AM Feb 22, 2019 | |

ಬೆಂಗಳೂರು: ಇಂದಿರಾನಗರ 100 ಅಡಿ ರಸ್ತೆ ಸಮೀಪದ ದೂಪನಹಳ್ಳಿ ಬಳಿ ನಿರ್ಮಿಸುತ್ತಿರುವ “ಸ್ಕೈವಾಕ್‌’ (ಪಾದಚಾರಿ ಮೇಲ್ಸೇತುವೆ) ಕಾಮಗಾರಿ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ಗುರುವಾರ ಬಿಬಿಎಂಪಿಗೆ ನೋಟಿಸ್‌ ಜಾರಿಗೊಳಿಸಿದೆ.

Advertisement

ಸ್ಕೈವಾಕ್‌ ಕಾಮಗಾರಿಗೆ 2018ರ ಮಾ.14ರಂದು ಬಿಬಿಎಂಪಿ ನೀಡಿರುವ ಕಾರ್ಯಾದೇಶ ಪ್ರಶ್ನಿಸಿ ಇಂದಿರಾನಗರದ ಜಗದೀಶ್‌ ಸಂತೋಷ್‌, ಅರಿಫುಲ್ಲಾ ರವೂಫ್‌ ಖಾನ್‌ ಸೇರಿ 16 ಮಂದಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ವಿಭಾಗೀಯಪೀಠ, ಪ್ರತಿವಾದಿಗಳಾದ ಬಿಬಿಎಂಪಿ ಆಯುಕ್ತರು, ರಸ್ತೆ ಮೂಲಸೌಕರ್ಯ ವಿಶೇಷ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್‌ ಹಾಗೂ ಸ್ಕೈವಾಕ್‌ ಕಾಮಗಾರಿ ಗುತ್ತಿಗೆ ಪಡೆದಿರುವ ಖಾಸಗಿ ಕಂಪೆನಿಗೆ ನೋಟಿಸ್‌ ಜಾರಿಗೆ ಆದೇಶಿಸಿ ವಿಚಾರಣೆ ಮುಂದೂಡಿತು.

ಸದ್ಯ ಸ್ಕೈವಾಕ್‌ ನಿರ್ಮಾಣಕ್ಕೆ ಗುರುತಿಸಿರುವ ಸ್ಥಳದಿಂದ 100 ಮೀ. ಅಂತರದಲ್ಲೇ ಮತ್ತೂಂದು ಸ್ಕೈವಾಕ್‌ ಇದೆ. ಹಾಗಾಗಿ ಹೊಸ ಮೇಲ್ಸೇತುವೆ ಅಗತ್ಯವಿಲ್ಲ. ಅದರ ಬದಲಿಗೆ ಇಂದಿರಾನಗರ 12ನೇ ಮುಖ್ಯರಸ್ತೆಯಲ್ಲಿ ಶಾಲೆಯಿದ್ದು, ಅಲ್ಲಿ ನಿರ್ಮಿಸಿದರೆ ಅನುಕೂಲವಾಗುತ್ತದೆ.

ಈ ಬಗ್ಗೆ ಬಿಬಿಎಂಪಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಮನವಿ ಪರಿಗಣಿಸಿಲ್ಲ. ಆದ್ದರಿಂದ ಕಾಮಗಾರಿ ಆದೇಶ ರದ್ದುಗೊಳಿಸಬೇಕು. ಅಲ್ಲದೇ ಅರ್ಜಿ ಇತ್ಯರ್ಥವಾಗುವವರೆಗೆ ಕಾಮಗಾರಿ ಮುಂದುವರಿಸದಂತೆ ಬಿಬಿಎಂಪಿಗೆ ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next