Advertisement

ಆಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾದ ಬಾನಂಗಳ: ಕಂಕಣ ಸೂರ್ಯಗ್ರಹಣ ಕಾಲ ಆರಂಭ

10:01 AM Dec 27, 2019 | Mithun PG |

ಬೆಂಗಳೂರು: ವಿಶ್ವದ ಬಾನಂಗಳದಲ್ಲಿ ಅಪರೂಪದಲ್ಲಿ ಅಪರೂಪವಾದ ವಿದ್ಯಮಾನ ಇಂದು ಸಂಭವಿಸಿದೆ. ಒಂಭತ್ತು ವರ್ಷಗಳ ಬಳಿಕ ಇಂದು ಬೆಳಗ್ಗೆ 8.03 ಕಂಕಣ ಸೂರ್ಯಗ್ರಹಣ ಕಾಲ ಆರಂಭ ಆರಂಭವಾಗಿದೆ. ಖಗೋಳಾಸ್ತರು, ವಿಜ್ಞಾನಿಗಳು, ವಿದ್ಯಾರ್ಥಿಗಳು ಮತ್ತು ಪುರೋಹಿತರಾದಿಯಾಗಿ ಎಲ್ಲರೂ ಆಕಾಶದಲ್ಲಿ ಸಂಭವಿಸುವ ವಿಸ್ಮಯ ಕೌತುಕವನ್ನು ಕಣ್ತುಂಬಿಕೊಂಡಿದ್ದಾರೆ.

Advertisement

2019ರ ಮೂರನೇ ಮತ್ತು ಕೊನೆಯ ಸೂರ್ಯಗ್ರಹಣ ಇದಾಗಿದೆ. ಸೂರ್ಯ –ಚಂದ್ರ ಮತ್ತು ಭೂಮಿ ಒಂದೇ ಸರಳ ರೇಖೆಯಲ್ಲಿ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಈ ಸಲದ ಸೂರ್ಯಗ್ರಹಣದಲ್ಲಿ ಚಂದ್ರ, ಶೇ 90 ರಷ್ಟು ಮಾತ್ರ ಸೂರ್ಯನನ್ನು ಆವರಿಸಿಕೊಂಡಿದೆ.

ಸೂರ್ಯಗ್ರಹ ವೀಕ್ಷಣೆಗೆ ಹಲವೆಡೆ ಟೆಲಿಸ್ಕೋಪ್, ಬೈನಾಕ್ಯುಲರ್, ಬಿಂಬ ರಂಧ್ರ ದರ್ಶನ ಹಾಗೂ ಸೌರ ಕನ್ನಡಕಗಳ ವ್ಯವಸ್ಥೆ ಮಾಡಲಾಗಿತ್ತು. ಕಂಕಣ ಸೂರ್ಯಗ್ರಹಣ ಬೆಳಗ್ಗೆ 8.03.ಕ್ಕೆ ಆರಂಭವಾಗಿದೆ. 9 ಗಂಟೆಯಷ್ಟರಲ್ಲಿ ಸಂಪೂರ್ಣ ಗೋಚರವಾಗುತ್ತದೆ. 11 ಗಂಟೆಯಷ್ಟರಲ್ಲಿ ಸಂಪೂರ್ಣವಾಗಿ ಗ್ರಹಣ ಮುಗಿದುಹೋಗುತ್ತದೆ. ಈ ಬಾರಿ ಸೂರ್ಯನಿಗೂ ಭೂಮಿಗೂ ಅಂತರ ಕಡಿಮೆ ಇದೆ. ಈ ಹಿನ್ನೆಲೆ ಸೂರ್ಯ ದೊಡ್ಡದಾಗಿರುತ್ತಾನೆ. ಚಂದ್ರ ಅಡ್ಡ ಬಂದರೂ ಕೂಡ ಸೂರ್ಯ ಸಂಪೂರ್ಣವಾಗಿ ಮುಚ್ಚುವುದಿಲ್ಲ. ಬಳೆಯ ಆಕಾರದಲ್ಲಿ ಸೂರ್ಯ ಗೋಚರವಾಗಿದೆ. .

Advertisement

Udayavani is now on Telegram. Click here to join our channel and stay updated with the latest news.

Next