Advertisement

ಮೇಯರ್‌ ದಾಳಿ ಮಾಡಿದರೂ ಮತ್ತೆ ತೆರೆದುಕೊಂಡ ಸ್ಕಿಲ್‌ ಗೇಮ್‌ ಕ್ಲಬ್‌

03:45 AM Jul 13, 2017 | Team Udayavani |

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾನೂನುಬಾಹಿರವಾಗಿ ನಡೆಯು ತ್ತಿದ್ದ ಮಜಾಸ್‌ ಸೆಂಟರ್‌ ಹಾಗೂ ಲೈಸೆನ್ಸ್‌ ಇಲ್ಲದೇ ಕಾರ್ಯಾಚರಿಸುತ್ತಿದ್ದ ಸ್ಕಿಲ್‌ಗೇಮ್‌ ಕ್ಲಬ್‌ವೊಂದಕ್ಕೆ ಮೇಯರ್‌ ಕವಿತಾ ಸನಿಲ್‌ ಅವರು ಅಧಿಕಾರಿಗಳೊಂದಿಗೆ ಮಂಗಳವಾರ ದಾಳಿ ನಡೆಸಿ ಬೀಗ ಹಾಕಿಸಿದ್ದರು.

Advertisement

ಆದರೆ ಪಾಲಿಕೆ ಸೀಲ್‌ ಹಾಕಿದ್ದ ಬೀಗವನ್ನು ಒಡೆದು ಮತ್ತೆ ಸ್ಕಿಲ್‌ಗೇಮ್‌ ಕ್ಲಬ್‌ ಪ್ರಾರಂಭವಾಗಿದ್ದು, ಮೇಯರ್‌ ದಾಳಿಗೂ ಯಾವುದೇ ಬೆಲೆಯೇ ಇಲ್ಲದಂತಾಗಿದೆ. ಮೇಯರ್‌ ಹಾಗೂ ಪೊಲೀಸರು ಸ್ಕಿಲ್‌ಗೇಮ್‌ ಕ್ಲಬ್‌ ಅನ್ನು ಮುಚ್ಚಿಸಿರುವುದನ್ನು ಸ್ವತಃ ಕ್ಲಬ್‌ನ ಮಾಲಕರೇ ಖಂಡಿಸಿ, ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನೋಟಿಸ್‌ ನೀಡಿಲ್ಲ: ಸ್ಕಿಲ್‌ಗೇಮ್‌ ಆಡುವ ಯಾವ ರಿಕ್ರಿಯೇಶನ್‌ ಕ್ಲಬ್‌ಗೂ ಲೈಸೆನ್ಸ್‌ ಹಾಗೂ ಅನುಮತಿ ಬೇಡವೆಂದು ಹೈಕೋರ್ಟ್‌ ಆದೇಶವಿದೆ. ಪಾಲಿಕೆಯಡಿಯಲ್ಲಿ ಲೈಸನ್ಸ್‌ ಪಡೆಯಬೇಕೆಂದು ಯಾವ ಕಾನೂನು ಹೇಳುತ್ತದೆಂದು ಅವರು ನೋಟಿಸ್‌ ಕಳುಹಿಸಬೇಕು. ಆದರೆ, ಇವರು ಯಾವ ಕಾನೂನಡಿ ಸೂಚಿಸುವ ನೋಟಿಸ್‌ ನೀಡಿಲ್ಲ. ಎಂದು ಸ್ಕಿಲ್‌ಗೇಮ್‌ ಕ್ಲಬ್‌ ಮಾಲಕ ಹರಿರಾಜ್‌ ತಿಳಿಸಿದ್ದಾರೆ. ಪಾಲಿಕೆ ಮೇಯರ್‌ ದಾಳಿ ಮಾಡಿದ ಕ್ಲಬ್‌ಗ ಲೈಸನ್ಸ್‌ ಇದೆ. ಪಾಲಿಕೆಯ ಆರೋಗ್ಯಾಧಿಕಾರಿ 10,000 ರೂ. ಪಡೆದುಕೊಂಡಿದ್ದಾರೆ. ಆದರೆ ಲೈಸನ್ಸ್‌ ಮಾತ್ರ 3 ತಿಂಗಳಿಂದ ಪುನರ್‌ ನವೀಕರಣ ಮಾಡಿಲ್ಲ. ಪುನರ್‌ ನವೀಕರಣ ಮಾಡುವುದಿಲ್ಲದಿದ್ದರೆ ಸಾಧ್ಯವಿಲ್ಲವೆಂದು ನೋಟಿಸ್‌ ನೀಡಬೇಕಲ್ಲ. ಹಣ ಯಾಕೆ ಇಟ್ಟುಕೊಳ್ಳಬೇಕು? ಹಿಂದಿರುಗಿಸಬೇಕಿತ್ತು. ಹಾಗಾದಲ್ಲಿ ಅವರು ಮಾಡುವ ಅನ್ಯಾಯ ನಮ್ಮ ಮೇಲೆ ಹಾಕುವುದೇ? ಪೊಲೀಸ್‌ ಇಲಾಖೆ ದಾಖಲಿಸಿದ ಎರಡು ಪ್ರಕರಣಗಳು ಹೈಕೋರ್ಟ್‌ನಲ್ಲಿ  ಸ್ಟೇ ಆಗಿದೆ. ಪೊಲೀಸ್‌ ಅಧಿಕಾರಿಗಳೇ ಮೇಲೆಯೇ ಹೈಕೋರ್ಟ್‌ ಗರಂ ಆಗಿತ್ತು. ಪಾಲಿಕೆಯಾಗಲಿ, ಪೊಲೀಸರಾಗಲಿ ನಾನ್‌ ಕಾಗ್ನೆಸಿಬಲ್‌ ಅಫೆನ್ಸ್‌ , 7 ವರ್ಷದ ಕೆಳಗಿನ ಯಾವುದೇ ಪ್ರಕರಣಗಳಿದ್ದರೂ ನೋಟೀಸ್‌ ನೀಡದೆ ಯಾವುದಕ್ಕೂ ದಾಳಿ ಮಾಡುವ ಅಧಿಕಾರವಿಲ್ಲ. ಕ್ಲಬ್‌ಗ
ನೋಟಿಸ್‌ ನೀಡಬೇಕು. ಆದರೆ ಅವರು ಗೇಮಿಂಗ್‌ ಹೌಸ್‌ ಮೇಲೆ ದಾಳಿ ಮಾಡಬಹುದು. 963 ಕೆಪಿ ಆ್ಯಕ್ಟ್ ನಲ್ಲಿ 79,80 ಪ್ರಕಾರ ಅವರು ಪ್ರಕರಣ ದಾಖಲಿಸಿದ್ದಾರೆ. ಹೈಕೋರ್ಟ್‌ ತೀರ್ಪು ಏನು ಹೇಳಿದೆಯೆಂದರೆ 79,80 ಕ್ಲಬ್‌ಗಳಿಗೆ ಅನ್ವಯಿಸುವುದಿಲ್ಲ. ಅವರಿಗೆ ಕಾನೂನು ಗೊತ್ತಿಲ್ಲ. ಪ್ರಾಪ್ತ ವಯಸ್ಕರಾದ ಮೇಲೆ ಸದಸ್ಯರಾಗಿ ಹಣ ಹಾಕಿ ಆಟವಾಡಬಹುದು ಎಂದು ಹೈಕೋರ್ಟ್‌ ಆದೇಶವಿದೆ. 

ಲೈಸನ್ಸ್‌ ಪುನರ್‌ ನವೀಕರಣಕ್ಕೆ ನೀಡಿದ ಬಳಿಕ ಯಾಕೆ ಪುನರ್‌ ನವೀಕರಣ ಮಾಡಲಾಗಿಲ್ಲ ಎಂದು ಮೇಯರ್‌ ಆರೋಗ್ಯಾಧಿಕಾರಿಗೆ ಕೇಳಬೇಕು. ಇಲ್ಲಿ ನಾವು ವ್ಯವಹಾರ ಮಾಡುತ್ತಿಲ್ಲ. ಯಾವುದೇ ಆಹಾರ ವಸ್ತುಗಳನ್ನು ಮಾರಾಟ
ಇಲ್ಲಿ ನಡೆಯುವುದಿಲ್ಲ. ಈ ಹಿಂದೆ ಪೊಲೀಸರ ವಿರುದ್ಧ ದೂರು ನೀಡಿದ್ದರೂ ಮತ್ತೆ-ಮತ್ತೆ ಅವರು ದಾಳಿ ಮಾಡಿದಾಗ ಅಲ್ಲಿನ ಸದಸ್ಯರೆಲ್ಲಾ ಸೇರಿ ಹಣ ನೀಡಿದ್ದಾರಂತೆ. ನನಗೆ ಬಂದ ಮಾಹಿತಿ ಪ್ರಕಾರ ಹಣ ಪಡೆದುಕೊಂಡಿದ್ದಾರೆ. ಪ್ರತೀ ತಿಂಗಳು ಅವರು ಪಡೆದುಕೊಳ್ಳುತ್ತಾರೆ. ಅವರೇ ಕಾನೂನು ಬಾಹಿರವಾಗಿ ನಡೆಯುತ್ತಿದ್ದಾರೆ ಬಳಿಕ ನಮಗೆ ಹೇಳುತ್ತಾರೆ ಎಂದು  ಹರಿರಾಜ್‌ ತಿಳಿಸಿದ್ದಾರೆ.

ಪಾಲಿಕೆಯ ದಾಳಿ ಕೂಡ ಬೇರೆ ರೀತಿಯಲ್ಲಿ ಬ್ಲಾ Âಕ್‌
ಮೇಲ್‌ ಮಾಡಲು. ಅವರೂ ತಿಂಗಳ ಮಾಮೂಲಿ ಪಡೆಯಲು ಹೊರಟಂತೆ ಕಾಣುತ್ತಿದೆ. ಕ್ಲಬ್‌ನಲ್ಲಿ ಕಾನೂನು ಬಾಹಿರವಾಗಿ ಯಾವುದೂ ನಡೆಯಲು ಬಿಡುವುದಿಲ್ಲ. ನಾನ್‌ ಕಾಗ್ನೆಸಿಬಲ್‌ ಅಫೆನ್ಸ್‌ ಪ್ರಕರಣದಲ್ಲಿ ಅವರು ಕಾನೂನು ಬಾಹಿರವಾಗಿ ನಡೆದುಕೊಂಡಿದ್ದಾರೆ ಎಂದು ಪೊಲೀಸ್‌ ಇಲಾಖೆಗೆ ನಾನು ಚಾಲೆಂಜ್‌ ಮಾಡುತ್ತೇನೆ. ಒಂದು ವೇಳೆ ನನ್ನ ತಪ್ಪಿದ್ದಲ್ಲಿ 1 ಲಕ್ಷ ರೂ. ದಂಡ ಕಟ್ಟಲೂ ತಯಾರಿದ್ದೇನೆ. ದಾಳಿಗೆ ಸಂಬಂಧಿಸಿ ಕಂಟೆಂಮ್‌ ಆಫ್‌ ಕೋರ್ಟ್‌ ದಾಖಲಿಸುತ್ತೇನೆ ಹಾಗೂ ಲೋಕಾಯುಕ್ತ ಮತ್ತು ಎಸಿಬಿಗೂ ದೂರು ಸಲ್ಲಿಸುತ್ತೇನೆ’ ಎಂದು  ಅವರು ತಿಳಿಸಿದ್ದಾರೆ. ಲೈಸನ್ಸ್‌ ಹೊಂದಿರದ ಹಿನ್ನೆಲೆಯಲ್ಲಿ ಸ್ಕಿಲ್‌ಗೇಮ್‌ ಕ್ಲಬ್‌ಗ ಪಾಲಿಕೆ ಹಾಕಲಾಗಿದ್ದ ಬೀಗವನ್ನು ಒಡೆದ ಪ್ರಕರಣ ಸಂಬಂಧಿಸಿ, ಪಾಲಿಕೆ ಹಾಕಲಾಗಿದ್ದ ಬೀಗವನ್ನು ಒಡೆದು ಹಾಕಲಾಗಿದೆ ಎಂದು ಪಾಲಿಕೆ ವತಿಯಿಂದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Advertisement

ಲೈಸನ್ಸ್‌ ಪಡೆಯಬೇಕು: ಮೇಯರ್‌
ಪಾಲಿಕೆ ವ್ಯಾಪ್ತಿಯಲ್ಲಿ ಯಾವುದನ್ನೂ ಲೈಸೆನ್ಸ್‌ ಪಡೆದುಕೊಂಡೇ ಮಾಡಬೇಕು. ಲೈಸೆನ್ಸ್‌ ಪಡೆಯದೆ ಪ್ರಾರಂಭಿಸಲು ಕೋರ್ಟ್‌ ಆದೇಶ ಹೊರಡಿಸಿಲ್ಲ. ಪಾಲಿಕೆ ಯಿಂದ ಟ್ರೇಡ್‌ ಲೈಸೆನ್ಸ್‌ ಪಡೆಯದೆ ಕ್ಲಬ್‌ ಪ್ರಾರಂಭಿಸ ಬಹುದು ಎಂದು ಕೋರ್ಟ್‌ ಹೇಳಿರು ವುದನ್ನು ಅವರು ತೋರಿಸಲಿ ಎಎಂದು ಮೇಯರ್‌ ಕವಿತಾ ಸನಿಲ್‌ ಹೇಳಿದರು. ಅವರು ಯಾರ ವಿರುದ್ಧ ಬೇಕಾದರೂ ದೂರು ದಾಖಲಿಸಲಿ ಪಾಲಿಕೆಯ ಯಾವ ಅಧಿಕಾರಿಗೆ ಹಣ ಕೊಟ್ಟಿದ್ದಾರೆಂದು ಅಧಿಕಾರಿ ಹಾಗೂ ಅವರು ನೋಡಿಕೊಳ್ಳಲಿ. ನಾವು ಲೈಸೆನ್ಸ್‌ ಮಾತ್ರ ಕೇಳುತ್ತಿರುವುದು. ಅವರು ಲೈಸೆನ್ಸ್‌ ಪುನರ್‌ ನವೀಕರಣ ನಡೆಸಲಿ, ಇಲ್ಲವೇ ಟ್ರೇಡ್‌ ಲೈಸೆನ್ಸ್‌ ಅಗತ್ಯವೇ ಇಲ್ಲವೆಂದು ಆದೇಶ ಹೊರಡಿಸಿರುವುದು ತೋರಿಸಲಿ ಎಂದವರು ಹೇಳಿದರು.

ಲಾಭಕ್ಕಾಗಿ ಮಾಡುವ ಉದ್ಯೋಗ ಟ್ರೇಡಿಂಗ್‌ನಡಿ ಬರುತ್ತದೆ. ಟ್ರೇಡಿಂಗ್‌ ಹೇಳಿದ ಮೇಲೆ ಲೈಸೆನ್ಸ್‌ ಆಗಲೇ ಬೇಕು. ಅವರು ತುಂಬಾ ಹೇಳುತ್ತಾರೆ. ಅವರು ಸುಮ್ಮನೆ ಕುಳಿತಿಲ್ಲ. ಲಾಭ ಪಡೆಯುತ್ತಿದ್ದಾರೆ. ಅದಕ್ಕೆ ಲೈಸೆನ್ಸ್‌ ಅಗತ್ಯ. ಬೀಗ ಒಡೆದ ಕುರಿತು ಪಾಲಿಕೆಯ ವತಿಯಿಂದ ಪೊಲೀಸ್‌ ಆಯುಕ್ತರಿಗೆ ದೂರು ನೀಡಲಾಗಿದೆ. ಅವರು ಅದಕ್ಕೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದಾರೆ ಇನ್ನು ಪೊಲೀಸ್‌ ಇಲಾಖೆ ಅದನ್ನು ನೋಡಬೇಕು. ಎಂದವರು ಹೇಳಿದರು.

ಕೂಡಲೇ ಕ್ರಮ: ಸುರೇಶ್‌
ಸ್ಕಿಲ್‌ಗೇಮ್‌ ಕ್ಲಬ್‌ ವಿರುದ್ಧ ಈಗಾಗಲೇ ಸಾಕಷ್ಟು ಪ್ರಕರಣ ದಾಖಲಿಸಲಾಗಿದೆ. ಅವರು ನಮ್ಮ ವಿರುದ್ಧವೇ ಸ್ಟೇ ತೆಗೆದುಕೊಂಡು ಬಂದಿದ್ದಾರೆ. ಆ ಉದ್ದೇಶದಿಂದ ಅವರು ಪೊಲೀಸರಿಗೆ ಹಣ ನೀಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಅವರು ಸ್ಕಿಲ್‌ಗೇಮ್‌ ಕ್ಲಬ್‌ ಅನ್ನು ಪುನಃ ತೆರೆದಿರುವುದಕ್ಕೆ ಮೇಯರ್‌ ಅವರು ಇಲಾಖೆಗೆ ದೂರು ನೀಡಿದ್ದಾರೆ. ಅವರು ಯಾರಿಗೆ ಹಣ ನೀಡಿದ್ದಾರೆ ಎಂದು ಇತರರ ಬದಲು ನೇರವಾಗಿ ನನ್ನಲ್ಲಿ ಬಂದು ದೂರು ನೀಡಿದಲ್ಲಿ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು  ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next