Advertisement

ಸ್ಕಿಪ್ಪಿಂಗ್‌ ಸರಳ ವ್ಯಾಯಾಮ

05:26 PM Apr 30, 2019 | Sriram |

ವಿವಿಧ ಮಾದರಿಯ ವ್ಯಾಯಮಗಳ ಪೈಕಿ ಸ್ಕಿಪ್ಪಿಂಗ್‌ ಅತ್ಯಂತ ಸರಳ, ಕಡಿಮೆ ಖರ್ಚಿನ ವ್ಯಾಯಾಮ. ಜಂಪ್‌ ರೋಪ್‌ ಅಥವಾ ಸ್ಕಿಪ್ಪಿಂಗ್‌ ಅದ್ಭುತವಾದ ವಕೌìಟ್‌ ಅಸ್ತ್ರಗಳಲ್ಲೊಂದು. ಈ ವ್ಯಾಯಾಮವನ್ನು ಲಿಂಗ ಮತ್ತು ವಯಸ್ಸಿನ ಭೇದವಿಲ್ಲದೆ ಎಲ್ಲರೂ, ಎಲ್ಲಿ ಬೇಕಾದ್ರೂ ಮಾಡಬಹುದಾಗಿದೆ. ಇದಕ್ಕೆ ಗೈಡ್‌ಗಳ ಅಗತ್ಯವೂ ಇಲ್ಲ. ಇಡೀ ದೇಹದಲ್ಲಿ ಚಲನವಲನ ಉಂಟು ಮಾಡುವುದರಲ್ಲಿ ಇದು ಸಹಕಾರಿ. ರನ್ನಿಂಗ್‌ಗಿಂತ ಹೆಚ್ಚು ಕ್ಯಾಲೋರಿಯನ್ನು ಸ್ಕಿಪ್ಪಿಂಗ್‌ ಮೂಲಕ ಬರ್ನ್ ಮಾಡಬಹುದು. ಸ್ಕಿಪ್ಪಿಂಗ್‌ ಮಾಡುವುದರಿಂದ ದೇಹದಲ್ಲಿರುವ ಕ್ಯಾಲೋರಿ ಕರುಗುವುದರ ಜತೆಗೆ ಮೂಳೆ ಮತ್ತು ಸ್ನಾಯುಗಳು ಬಲವಾಗುತ್ತದೆ.

Advertisement

ಪ್ರಯೋಜನಗಳು
ತೂಕ ಇಳಿಕೆ
ದೇಹದ ತೂಕ ಕಡಿಮೆ ಮಾಡಿ ಕೊಳ್ಳಲು ಸ್ಕಿಪ್ಪಿಂಗ್‌ ಅತ್ಯುತ್ತಮ ವ್ಯಾಯಾಮವಾಗಿದೆ. ಒಂದು ನಿಮಿಷದಲ್ಲಿ 100- 120 ಸ್ಕಿಪ್‌ ಮಾಡುವುದರಿಂದ 13 ಕ್ಯಾಲೋರಿ ಬರ್ನ್ ಮಾಡಬಹುದು. ಇದರಿಂದ ಬಹುಬೇಗನೆ ತೂಕ ವನ್ನು ಇಳಿಸಿಕೊಳ್ಳಬಹುದು. 30 ನಿಮಿಷ ಸ್ಕಿಪ್ಪಿಂಗ್‌ ಮಾಡಿದ್ರೆ 300 ಕ್ಯಾಲೋರಿ ಬರ್ನ್ ಮಾಡಲು ಸಾಧ್ಯ.

ಮೂಳೆಗಳಿಗೆ ಬಲ
ಮೂಳೆಗಳನ್ನು ಬಲಪಡಿಸಿ ಶಕ್ತಿಯನ್ನು ನೀಡುತ್ತದೆ. ಜಾಗಿಂಗ್‌ ಮತ್ತು ರನ್ನಿಂಗ್‌ಗಿಂತ ಇದು ಸುರಕ್ಷಿತವಾದ ವ್ಯಾಯಾಮ. ದೇಹದ ಕೆಳ ಮತ್ತು ಮೇಲ್ಭಾಗದ ಮಾಂಸಖಂಡಗಳನ್ನು ಇದು ಬಲಗೊಳಿಸುತ್ತದೆ.

ದೇಹದ ಅಂಗಾಂಗಕ್ಕೆ ವ್ಯಾಯಮ
ಸ್ಕಿಪ್ಪಿಂಗ್‌ ಇಡೀ ದೇಹಕ್ಕೂ ಕೆಲಸ ಕೊಡುತ್ತದೆ. ಹೆಗಲು, ಕೈ, ಕಾಲು ಹೊಟ್ಟೆ ಹೀಗೆ ಎಲ್ಲ ಭಾಗಗಳ ಮೇಲೂ ಒತ್ತಡ ಬಿದ್ದು ವ್ಯಾಯಾಮವಾಗುತ್ತದೆ. ಕಾಲು ಮತ್ತು ಸೊಂಟಕ್ಕೆ ಉತ್ತಮ ವ್ಯಾಯಾಮ ವಾಗಿದೆ ಮತ್ತು ಹೊಟ್ಟೆ ಬೊಜ್ಜು ಕರಗಿಸಲು ಸಹಕಾರಿಯಾಗಿದೆ

ಕಾರ್ಡಿಯೋ ವ್ಯಾಯಾಮ.
ಇದೊಂದು ಅದ್ಭುತವಾದ ಕಾರ್ಡಿಯೋ ವ್ಯಾಯಾಮ. ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ರೋಪ್‌ ಜಂಪಿಂಗ್‌ ಅನ್ನು ಹೆಚ್ಚಾಗಿ ಟೆನಿಸ್‌ ಆಟಗಾರರು, ಬಾಕ್ಸರ್‌ ಗಳು ಮತ್ತು ಅಥ್ಲೀಟ್‌ಗಳು ಅಭ್ಯಾಸ ಮಾಡ್ತಾರೆ.

Advertisement

-   ಕಾರ್ತಿಕ್‌ ಚಿತ್ರಾಪುರ

Advertisement

Udayavani is now on Telegram. Click here to join our channel and stay updated with the latest news.

Next