ದೇವದುರ್ಗ: ತಾಲೂಕಿನಲ್ಲಿ ಎತ್ತು, ಆಕಳುಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು, ಈ ವರೆಗೆ ಸುಮಾರು 5 ಸಾವಿರಕ್ಕೂ ಅಧಿಕ ಜಾನುವಾರುಗಳಲ್ಲಿ ರೋಗ ಪತ್ತೆಯಾಗಿದೆ. ಈ ಕಾಯಿಲೆಗೆ ಚಿಕಿತ್ಸೆ ಕೊಡಿಸಲು ರೈತರು ಪರದಾಡುವಂತಾಗಿದೆ.
ರೋಗದ ಲಕ್ಷಣಗಳು: ಚರ್ಮಗಂಟು ರೋಗ ಕಂಡು ಬಂದ ಎತ್ತು, ಆಕಳುಗಳಲ್ಲಿ ಅತಿಯಾದ ಜ್ವರ, ಕಣ್ಣುಗಳಿಂದ ನೀರು ಸೋರುವುದು ನಿಶ್ಯಕ್ತಿ, ಕಾಲುಗಳಲ್ಲಿ ಬಾವು ಹಾಗೂ ಕುಟುಂವುದು, ಮೈಮೇಲೆ 2.5 ಸೆಂ.ಮೀ.ನಷ್ಟು ಅಗಲದ ಗುಳ್ಳೆಗಳು ಕಾಣಿಸಿಕೊಳ್ಳುತ್ತಿವೆ. ಗುಳ್ಳೆಗಳ ಮೇಲೆ ಗಾಯವಾಗಿ ಹುಳುಗಳು ಬಿದ್ದು, ಹುಣ್ಣಾಗುತ್ತದೆ.ರೋಗ ಪತ್ತೆಯಾದ ಜಾನುವಾರುಗಳಲ್ಲಿ ಹಾಲಿನ ಇಳುವರಿ ಕಡಿಮೆಯಾಗುವುದು.ಗರ್ಭಪಾತವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ಕಾಯಿಲೆ ಸಾಂಕ್ರಾಮಿಕವಾಗಿದ್ದು, ಎತ್ತು, ಆಕಳುಗಳನ್ನು ಒಂದೆಡೆ ಕಟ್ಟಿಹಾಕದೇ ಬೇರೆ ಬೇರೆ ಕಟ್ಟಿ ಹಾಕಬೇಕು ಎಂದು ಪಶುವೈದ್ಯರು ತಿಳಿಸಿದ್ದಾರೆ.
ಜಾನುವಾರುಗಳಿಗೆ ಲಸಿಕೆ: ತಾಲೂಕಿನ 33 ಗ್ರಾಪಂ ವ್ಯಾಪ್ತಿಯಲ್ಲಿ ಕಾಲುಬಾಯಿ ರೋಗದಮುನ್ನೆಚ್ಚರಿಕೆ ಕ್ರಮವಾಗಿ ಜಾನುವಾರುಗಳಿಗೆ ಲಸಿಕೆ ಹಾಕಲಾಗುತ್ತಿದೆ. ಕಾಲುಬಾಯಿ ರೋಗವುಎತ್ತು, ಹೋರಿ, ಹಸು, ಎಮ್ಮೆ, ಹಂದಿಗಳಿಗೆ ತಗಲುವ ಮಾರಕ ರೋಗವಾಗಿದೆ, ಹೀಗಾಗಿ ಲಸಿಕೆ ಹಾಕಲಾಗುತ್ತಿದೆ. ಇದೊಂದು ವೈರಾಣು ರೋಗವಾಗಿದ್ದು, ಲಸಿಕೆ ಹಾಕುವುದರಿಂದ ರೋಗ ನಿಯಂತ್ರಣ ಬರುತ್ತದೆ. ಪಶು ಸಂಗೋಪನಾಇಲಾಖೆಯಿಂದ ಉಚಿತ ಲಸಿಕೆ ಕಾರ್ಯಕ್ರಮ ನಡೆಯುತ್ತಿದೆ. ಜಾನುವಾರುಗಳಲ್ಲಿ ಯಾವುದೇರೋಗದ ಲಕ್ಷಣಗಳು ಕಂಡು ಬಂದಲ್ಲಿ ಪಶು ವೈದ್ಯರನ್ನು ಸಂಪರ್ಕಿಸಬೇಕು ಎಂದು ಜಾಗೃತಿ ಮೂಡಿಸಲಾಗಿದೆ.
ಈ ಹಿಂದೆ ಎಷ್ಟೇ ಬಾರಿ ಲಸಿಕೆ ಹಾಕಿಸಿದ್ದರೂ. ಪ್ರತಿ ಆರು ತಿಂಗಳಿಗೊಮ್ಮೆ ಜಾನುವಾರುಗಳಿಗೆ ರೈತರು ಲಸಿಕೆ ಹಾಕಿಸಬೇಕು. ರೈತರಲ್ಲಿ ಎಚ್ಚರ ಮುಖ್ಯ: ಜಾನುವಾರುಗಳಲ್ಲಿ ಚರ್ಮಗಂಟು ರೋಗ ಲಕ್ಷಣ ಕಂಡುಬಂದಲ್ಲಿ ತಕ್ಷಣ ಪಶು ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಕೊಡಿಸಬೇಕು. ಈಗಾಗಲೇ ಐದು ಸಾವಿರಕ್ಕೂಹೆಚ್ಚು ಎತ್ತು, ಆಕಳಲ್ಲಿ ರೋಗ ಪತ್ತೆಯಾಗಿದೆ. ಪಶು ಇಲಾಖೆಯಿಂದ ತಾಲೂಕಿನಾದ್ಯಂತ ಜಾಗೃತಿ ಮೂಡಿಸುವ ಜತೆ ಲಸಿಕೆ ಕಾರ್ಯಕ್ರಮ ನಡೆಯುತ್ತಿದೆ. ರೈತರು ಚಿಕಿತ್ಸೆ ಕೊಡಿಸಲು ಮುಂದಾಗಬೇಕು ಎಂದು ರೈತ ಮುಖಂಡ ಬೂದಯ್ಯಸ್ವಾಮಿ ಗಬ್ಬೂರು ವಿನಂತಿಸಿದ್ದಾರೆ.
ಎತ್ತು, ಆಕಳಲ್ಲಿ ಚರ್ಮಗಂಟು ರೋಗ ಪತ್ತೆಯಾಗಿದೆ. ಈಗಾಗಲೇ ಸಾವಿರಾರೂ ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗಿದೆ. ಲಸಿಕೆ ಕಾರ್ಯಕ್ರಮನಡೆದಿದ್ದು, ರೋಗ ಕಾಣಿಸಿಕೊಂಡಲ್ಲಿ ರೈತರು ಸೂಕ್ತ ಸಮಯದಲ್ಲಿ ಚಿಕಿತ್ಸೆ ಕೊಡಿಸಬೇಕು.
– ಡಾ| ಬಿ.ಎಸ್. ಮಿರಾಸಾªರ, ಪ್ರಭಾರಿ ಸಹಾಯಕ ನಿರ್ದೇಶಕ, ಪಶು ಸಂಗೋಪನಾ ಇಲಾಖೆ
-ನಾಗರಾಜ ತೇಲ್ಕರ್