Advertisement
ತ್ವಚೆಗೆ ಆದ್ರತೆಯನ್ನು ನೀಡಿತ್ವಚೆಗೆ ಅಗತ್ಯವಿರುವ ಆದ್ರತೆ ಒದಗಿಸುವಯುದಕ್ಕೆ ನಿಮ್ಮ ತ್ವಚೆಗೆ ಹೊಂದುವ ಉತ್ತಮ ಗುಣಮಟ್ಟದ ತೇವಕಾರಕ ಕ್ರೀಂ ಒಂದನ್ನು ದಿನಕ್ಕೆ ಕನಿಷ್ಟ ಎರಡು ಬಾರಿಯಾದರೂ ತೆಳುವಾಗಿ ಹಚ್ಚಿಕೊಳ್ಳುವುದು ಅಗತ್ಯ. ಮನೆಯಿಂದ ಹೊರಹೋಗುವ ಮುನ್ನ ಮುಖ, ಕೈ, ಮೊಣಕಾಲು, ಪಾದಗಳಿಗೆ ತೆಳುವಾಗಿ ಹಚ್ಚಿಕೊಳ್ಳುವುದು ಅವಶ್ಯ.
ನಿಮ್ಮ ತ್ವಚೆಯನ್ನು ಸೌಮ್ಯತೆಯಿಂದ ನೇವರಿಸಿಕೊಳ್ಳುವುದು ಮುಖ್ಯ. ಏಕೆಂದರೆ ಈ ಸಮಯದಲ್ಲಿ ತ್ವಚೆ ಅತಿ ಸೂಕ್ಷ್ಮಸಂವೇದಿಯಾಗಿ ಬದಲಾಗಿರುತ್ತದೆ. ತ್ವಚೆಗೆ ಕೊಂಚ ಒರಟಾಗಿ ಸ್ಪರ್ಶಿಸಿದರೆ ಇಲ್ಲಿ ಉರಿ ಉಂಟಾಗಿ, ಹೊರಪದರ ಸುಲಭವಾಗಿ ಹರಿಯಬಹುದು. ಕ್ರೀಂಗಳನ್ನು ಉಜ್ಜುವ ಬದಲು ಮೃದುವಾದ ದಪ್ಪನೆಯ ಟವೆಲ್‌ನಿಂದ ಒತ್ತಿಕೊಂಡು ಒರೆಸಿಕೊಂಡರೇ ಒಳ್ಳೆಯದು. ಸನ್ ಸ್ಕ್ರೀನ್
ಬಿಸಿಲಿಗೆ ತ್ವಚೆ ಒಡ್ಡುವ ಯಾವುದೇ ಸಮಯದಲ್ಲಿ, ಚಳಿಗಾಲವೇ ಆಗಿರಲಿ, ಬೇಸಗೆಯೇ ಇರಲಿ, ಸೂರ್ಯನ ಅತಿನೇರಳೆ ಕಿರಣಗಳ ವಿರುದ್ದ ರಕ್ಷಣೆ ಒದಗಿಸುವ ಸನ್ ಸ್ಕ್ರೀನ್ ಅನ್ನು ಬಳಸಬೇಕು.
Related Articles
ತ್ವಚೆಯ ಆರೈಕೆಯನ್ನು ಬಾಹ್ಯವಾಗಿ ಮಾಡುವುದಕ್ಕಿಂತಲೂ ನಾವು ಸೇವಿಸುವ ಆಹಾರದ ಮೂಲಕವೂ ಕಂಡುಕೊಳ್ಳಬಹುದಾಗಿದೆ. ಆರೋಗ್ಯಕರ ತ್ವಚೆ ಎಂದರೆ ಕೇವಲ ಹೊರನೋಟಕ್ಕೆ ಕಾಣುವ ಹೊರ ಪದರವೊಂದೇ ಅಲ್ಲ, ಬದಲಿಗೆ ಚರ್ಮದ ಆಳದಲ್ಲಿರುವ ತೈಲಗ್ರಂಥಿಗಳು, ಕೂದಲ ಬುಡ ಮೊದಲಾದವುಗಳ ಆರೈಕೆಯೂ ಅಷ್ಟೇ ಮುಖ್ಯ.
Advertisement
ನಾವೇನು ಮಾಡಬಹುದು· ಪ್ರತಿದಿನ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯುವುದು ಆವಶ್ಯಕ.
· ಫಾಸ್ಟ್ ಫುಡ್ ಸೇವನೆಯನ್ನು ಆದಷ್ಟು ಕಡಿಮೆ ಮಾಡಿ.
· ಸ್ನಾನಕ್ಕೆ ಅತೀ ಬಿಸಿ ನೀರು ಬಳಸಬೇಡಿ.
· ಎಣ್ಣೆಯಿಂದ ದೇಹವನ್ನು ಮಸಾಜ್ ಮಾಡುವುದು ಒಳ್ಳೆಯದು.
· ತುಟಿ ಒಣಗುವುದಕ್ಕೆ ಹಾಲಿನ ಕೆನೆ ಸವರಬೇಕು.
· ತ್ವಚೆಗೆ ಮಾಯಿಶ್ಚರೈಸರ್ ಅನ್ನು ಬಳಸಬೇಕು. – ಕಾರ್ತಿಕ್ ಆಮೈ