Advertisement

Food street ನಲ್ಲಿ ಅರೆಬಟ್ಟೆಯಲ್ಲಿ ಸುತ್ತಾಡಿದ ಯುವತಿ ವಿರುದ್ಧ ಪ್ರಕರಣ ದಾಖಲು!

07:46 PM Sep 28, 2024 | Team Udayavani |

ಇಂದೋರ್‌ (ಮಧ್ಯಪ್ರದೇಶ): ಇಲ್ಲಿನ ಪ್ರಸಿದ್ಧ ಬೀದಿ ಆಹಾರ ಮಾರುಕಟ್ಟೆಗಳಾದ ಮೇಘದೂತ್ ಚಾಟ್-ಚೌಪಾಟಿ ಮತ್ತು 56 ಡುಕಾನ್ ಚಾಟ್-ಚೌಪಾಟಿಯಲ್ಲಿ ಅತೀ ಕಡಿಮೆ ಬಟ್ಟೆ ಧರಿಸಿ ಸುತ್ತಾಡಿದ್ದು, ಈ ಬಗ್ಗೆ ಸಾರ್ವಜನಿಕ ವಲಯದ ವಿರೋಧ ವ್ಯಕ್ತವಾದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

ತುಂಡುಡುಗೆಯಲ್ಲಿ ಮಾದಕ ಮೈಮಾಟ ತೋರುತ್ತಾ ಯುವತಿ ಬೀದಿ ಸುತ್ತುತ್ತಿರುವ ವಿಡಿಯೋ ಅಪ್‌ಲೋಡ್ ಮಾಡಿದ್ದಳು. ಈ ಬಗ್ಗೆ ಬಿಜೆಪಿ, ಬಜರಂಗದಳ ಸೇರಿ ಹಲವು ಸಂಘಟನೆಗಳು, ಮಹಿಳಾ ಸಂಘಟನೆಗಳಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ವಿವಾದವಾದ ನಂತರ ಯುವತಿ ಕ್ಷಮೆಯಾಚಿಸಿದ್ದು, ಮಾಧ್ಯಮದಲ್ಲಿ ವಿಡಿಯೋ ಗಳು ವೈರಲ್ ಆಗುತ್ತಿದೆ. ಯುವತಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 296 (ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next