Advertisement
ನಗರದ ಜೆಎಸ್‌ಎಸ್ ವಿಜ್ಞಾನ ಮತ್ತು ತಾಂತ್ರಿಕ ವಿಶ್ವವಿದ್ಯಾನಿಲಯದ(ಎಸ್‌ಜೆಸಿಇ) ಪ್ರಥಮ ಘಟಿಕೋತ್ಸವದಲ್ಲಿ ಭಾಗವಹಿಸಿ ಚಿನ್ನದ ಪದಕ, ಪದವಿ ಪ್ರದಾನ ಮಾಡಿ ಘಟಿಕೋತ್ಸವ ಭಾಷಣ ಮಾಡಿದ ಅವರು, ದೇಶದಲ್ಲಿ ವಿಶ್ವವಿದ್ಯಾನಿಲಯಗಳು ಹಲವು ಬಗೆಯ ಕೋರ್ಸ್‌ಗಳನ್ನು ನೀಡುತ್ತಿವೆ.
Related Articles
Advertisement
ಭಾರತ ಎದುರಿಸುತ್ತಿರುವ ಕೌಶಲ್ಯ, ಪ್ರತಿಭೆಗಳ ಕೊರತೆ ಎಷ್ಟಿದೆ ಎಂಬುದನ್ನು ಜೆಎಸ್‌ಎಸ್ ವಿಜ್ಞಾನ ಮತ್ತು ತಾಂತ್ರಿಕ ವಿವಿ ದಾಖಲಿಸುವ ವಿಷನ್ 2025 ಓದಿದರೆ ತಿಳಿಯುತ್ತದೆ. ಇದರ ಪ್ರಕಾರ ಶೇ.58 ಉದ್ಯೋಗಿಗಳು ಪ್ರತಿಭೆ ಇಲ್ಲದವರಾಗಿದ್ದಾರೆ.
ಕೇವಲ ಶೇ 2.3 ಜನರು ಕೌಶಲ್ಯ ತರಬೇತಿ ಪಡೆದಿದ್ದಾರೆ. ಭಾರತಕ್ಕೆ ಹೋಲಿಸಿದರೆ ಕೊರಿಯಾದಲ್ಲಿ ಶೇ.96, ಜಪಾನ್ ಶೇ.80, ಜರ್ಮನಿ ಶೇ.75, ಇಂಗ್ಲೆಂಡ್ ಶೇ.68, ಅಮೆರಿಕ ಶೇ.52 ಹೆಚ್ಚಿನ ಕೌಶಲ್ಯ ಪಡೆದವರಿದ್ದು, ಈ ಕೊರತೆ ನೀಗಿಸಲು ಕೇಂದ್ರ ಸರ್ಕಾರ ಹೆಜ್ಜೆ ಇಟ್ಟಿದೆ ಎಂದು ತಿಳಿಸಿದರು.
ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ(ಡಬ್ಲೂÂಐಪಿಒ) ಪ್ರಕಾರ 2017ರಲ್ಲಿ ಪೇಟೆಂಟ್ ಸಹಕಾರ ಒಪ್ಪಂದ ಅಡಿಯಲ್ಲಿ 2,43,500 ಅಂತಾರಾಷ್ಟ್ರೀಯ ಪೇಟೆಂಟ್‌ಗಳು ಅರ್ಜಿಗಳು ಸಂಶೋಧಕರಿಂದ ಬಂದಿವೆ. ಇದರಲ್ಲಿ ಅಮೆರಿಕಾದಿಂದ 56,624 ಅರ್ಜಿಗಳು, ಚೀನಾದಿಂದ 48,882, ಜಪಾನ್‌ನಿಂದ 48,208, ಜರ್ಮನಿ 18,982, ಕೊರಿಯಾದಿಂದ 15,763 ಪೇಟೆಂಟ್ ಅರ್ಜಿಗಳು ಬಂದಿವೆ.
ಆದರೆ, ಭಾರತದಿಂದ 1803 ಪೇಟೆಂಟ್ ಅರ್ಜಿಗಳು ಮಾತ್ರ ಹೋಗಿವೆ ಎಂದು ಬೇಸರ ವ್ಯಕ್ತಪಡಿಸಿದರು. ಸಮಾರಂಭದಲ್ಲಿ ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯ ನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ,
ತಾಂತ್ರಿಕ ಶಿಕ್ಷಣ ವಿಭಾಗದ ಸಲಹೆಗಾರ ಪ್ರೊ.ಎಂ.ಎಚ್. ಧನಂಜಯ, ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ ಕುಲಪತಿ ಪ್ರೊ.ಬಿ.ಜಿ. ಸಂಗಮೇಶ್ವರ, ಕುಲಸಚಿವ ಪ್ರೊ.ಕೆ.ಎಸ್, ಲೋಕೇಶ್, ಪರೀûಾ ನಿಯಂತ್ರಣಾಧಿಕಾರಿ ಪ್ರೊ.ಕೆ.ಎನ್. ಉದಯಕುಮಾರ್ ಹಾಜರಿದ್ದರು.
269 ಮಂದಿಗೆ ಪದವಿ: 2017-18ನೇ ಸಾಲಿನಲ್ಲಿ 149 ಎಂ.ಟೆಕ್ ವಿದ್ಯಾರ್ಥಿಗಳು, 96 ಎಂಬಿಎ, 24 ಕಾರ್ಪೊರೇಟ್ ಫೈನಾನ್ಸ್ ವಿದ್ಯಾರ್ಥಿಗಳಿಗೆ ವಿ.ವಿ ನಿಬಂಧನೆಗಳ ಪ್ರಕಾರ ಪದವಿ ಪ್ರದಾನ ಮಾಡಲಾಯಿತು. ಪ್ರತಿ ವಿಭಾಗದಲ್ಲಿ ಅತಿಹೆಚ್ಚು ಅಂಕ ಗಳಿಸಿದ ಜೆ. ನವೀನ್‌ಕುಮಾರ್, ಎಚ್.ಎಸ್. ಭಾನು, ಪಿ. ಮಾನಸಮಿತ್ರ, ಬಿ. ಸುಷ್ಮಾಸುಮತಿ, ಸಿ. ನಿಶ್ಚಲ್, ಎಸ್.ಆರ್. ಯಶಸ್, ಆರ್. ಆದಿತ್ಯ ಕಶ್ಯಪ್,
ಬಾಲಸುಬ್ರಮಣ್ಯ ಎಸ್. ಕುರ್ದೇಕರ್, ಎಚ್.ಆರ್. ಧನುಷ್, ಎಂ. ತ್ರಿವೇಣಿ ಮತ್ತು ಪಿ.ರಂಜಿತಾ, ಎಂಬಿಎನಲ್ಲಿ ಸಿ. ಪ್ರವೀಣ್ ಕುಮಾರ್, ಕಾರ್ಪೋರೇಟ್ ಫೈನಾನ್ಸ್‌ನಲ್ಲಿ ಎಸ್. ಆಶಾ ಅವರಿಗೆ ಪದಕ ವಿತರಿಸಲಾಯಿತು. ಅಲ್ಲದೆ ಬಾಲಸುಹ್ರಮಣ್ಯ ಎಸ್. ಕುರ್ದೇಕರ್, ಸಿ. ಪ್ರವೀಣ್‌ಕುಮಾರ್, ಎಚ್.ಆರ್. ಧನುಷ್ ಮತ್ತು ಸಿ. ನಿಶ್ಚಲ್ ಅವರಿಗೆ ದತ್ತಿ ಬಹುಮಾನ ನೀಡಲಾಯಿತು.