Advertisement
ಎಸೆಸೆಲ್ಸಿ, ಪಿಯುಸಿಗಳಲ್ಲಿ ಡಿಸ್ಟಿಂಕ್ಷನ್ ಪಡೆಯುವುದಷ್ಟೇ ಮುಖ್ಯ ಎನ್ನುವುದನ್ನು ಮಕ್ಕಳೂ, ಹೆತ್ತವರೂ ಯೋಚಿಸುತ್ತಾರೆ. ಆದರೆ ಈಗ ವಾಸ್ತವತೆ ಬದಲಾಗಿದೆ. ಅಂಕಗಳ ಜತೆಗೆ ಬೇಕಾದ ಕೌಶಲಗಳನ್ನೂ ಮೈಗೂಡಿಸಿಕೊಳ್ಳಬೇಕು. ಹಾಗಾದರೆ ಮಾತ್ರ ಪಡೆದ ಶಿಕ್ಷಣ ಪರಿಪೂರ್ಣಗೊಳ್ಳುತ್ತದೆ. ಅಷ್ಟೇ ಅಲ್ಲದೆ ಸುಲಭವಾಗಿ ಉದ್ಯೋಗ ರಂಗವನ್ನು ಪ್ರವೇಶಿಸಲು ಸಾಧ್ಯ. ಸ್ಪರ್ಧಾತ್ಮಕ ಯಗದಲ್ಲಿ ಸ್ಫರ್ಧಿಸಲು ಸಾಧ್ಯ.
ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವುದು ಎಂದರೆ ಪಾಠ ಪುಸ್ತಕಗಳನ್ನು ನಿರ್ಲಕ್ಷಿಸಿ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದಲ್ಲ. ಬದಲಿಗೆ ಪುಸ್ತಕ, ತರಗತಿಗಳ ಜತೆ ಜತೆಗೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಶಾಲೆಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು. ಕಾಲೇಜುಗಳಲ್ಲಿರುವ ಎನ್ನೆಸ್ಸೆಸ್, ಎನ್‌ಸಿಸಿ, ಸಾಂಸ್ಕೃತಿಕ ಸಂಘಗಳಲ್ಲಿ ಪಾಲ್ಗೊಳ್ಳುವುದು. ವಿದ್ಯಾರ್ಥಿ ಜೀವನದಲ್ಲಿ ಆಸಕ್ತ ವಿಷಯಗಳ ಕಲಿಕೆಯತ್ತಲೂ ಗಮನ ನೀಡುವುದು. ಸಂಗೀತ, ನೃತ್ಯ, ಕ್ರೀಡೆಗಳಲ್ಲಿ ಆಸಕ್ತಿಯಿದ್ದರೆ ಅವುಗಳ ಕಲಿಕೆಗೂ ಸ್ವಲ್ಪ ಸಮಯ ಮೀಸಲಿಡಿಸಿ. ಒಂದಷ್ಟು ಒಳ್ಳೆಯ ಹವ್ಯಾಸಗಳ ರೂಢಿ ಮಾಡಿಕೊಳ್ಳುವುದರಿಂದ ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧಿಸಲು ಸಹಾಯಕಾರಿ.
Related Articles
ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿವುದರಿಂದ ವಿದ್ಯಾರ್ಥಿಗಳಿಗೆ ಪಾಠದ ಜತೆ ಜತೆಗೆ ಇತರ ಸಾಮಾನ್ಯ ಜ್ಞಾನಗಳ ಅರಿವೂ ಮೂಡಲಾರಂಭಿಸುತ್ತದೆ. ಸಾಮಾನ್ಯ ಜ್ಞಾನ, ವಾಕ್‌ಚಾತುರ್ಯ ಹೆಚ್ಚಾಗುತ್ತದೆ.
Advertisement
1 ಸಾಮಾನ್ಯ ಜ್ಞಾನ ವೃದ್ಧಿವಿದ್ಯಾರ್ಥಿಗಳಿಗೆ ಸಾಮಾನ್ಯ ಜ್ಞಾನ ಹೆಚ್ಚಾಗಬೇಕಾದರೆ ಪಾಠದ ಜತೆಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು. ಕಾಲೇಜುಗಳಲ್ಲಿ ನಡೆಯುವ ಕಾರ್ಯಕ್ರಮಗಳ ಆಯೋಜನೆ, ಭಾಗಿಯಾಗುವುದರಿಂದ ಸಾಮಾನ್ಯ ಜ್ಞಾನ ವೃದ್ಧಿ ಸಾಧ್ಯ.
2 ಕೌಶಲಗಳು ಮೈಗೂಡಿಸಿಕೊಳ್ಳಲುಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಸುಲಭವಾಗಿ ಸ್ಪರ್ಧಿಸಲು ಕೌಶಲಗಳು ಮುಖ್ಯ. ಕೌಶಲಗಳು ಬೆಳೆಯಬೇಕಾದರೆ ವಿದ್ಯಾರ್ಥಿ ಜೀವನದಲ್ಲಿಯೇ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿಗಳಾಗಬೇಕು. ಇದರಿಂದ ಕೌಶಲಗಳು ವೃದ್ಧಿಯಾಗುತ್ತವೆ. 3 ನಾಯಕತ್ವದ ಗುಣ
ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ಭಾಗವಹಿಸಿದರೆ ನಾಯಕತ್ವದ ಗುಣ ಬೆಳೆಯುತ್ತದೆ. ಕಾಲೇಜು, ಶಾಲೆಗಳಲ್ಲಿರುವ ಸಂಘಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ನಾಯಕತ್ವದ ಗುಣ ಬೆಳೆಯುತ್ತದೆ. 4 ವಾಕ್‌ಚಾತುರ್ಯ
ಭಾಷಣ, ಕಾರ್ಯಕ್ರಮ ನಿರೂಪಣೆ, ಆಶುಭಾಷಣ ಮೊದಲಾದ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಹೆಚ್ಚು ಭಾಗವಹಿಸುವುದರಿಂದ ವಾಕ್‌ಚಾತುರ್ಯ ವೃದ್ದಿಯಾಗುತ್ತದೆ. ಮಾತೇ ಎಲ್ಲ ಆಗಿರುವಾಗ ಸಭೆಯ ಮುಂದೆ ನಿಂತು ಮಾತನಾಡುವ ಧೈರ್ಯ ಬರುತ್ತದೆ. ರಂಜಿನಿ ಮಿತ್ತಡ್ಕ