Advertisement
ಇಲಾಖೆ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿ.ವಿ. ಮತ್ತು ಅಪೊಲೋ ಮೆಡಿಸ್ಕಿಲ್ ಇದಕ್ಕೆ ಸಹಯೋಗ ನೀಡಿವೆ. ಕೊರೊನಾ ತಡೆ ಮತ್ತು ಲಸಿಕೆ ಅಭಿಯಾನ ದಲ್ಲಿ ಸೇವೆ ಸಲ್ಲಿಸಲು ಅನುಕೂಲ ಆಗುವಂತೆ ಎಸೆಸೆಲ್ಸಿ ಅಥವಾ ತತ್ಸಮಾನ ಕೋರ್ಸ್ ಪೂರೈ ಸಿರುವ, ಪಿಯುಸಿ ವಿಜ್ಞಾನ ವಿಭಾಗ ಅಥವಾ ವಿಜ್ಞಾನ ವಿಭಾಗದ ಪದವಿ ಪೂರೈಸಿರುವ ಅಭ್ಯರ್ಥಿಗಳಿಗೆ ತರಬೇತಿ ನೀಡಿ, ಕೌಶಲಕ್ಕೆ ಅನುಗುಣವಾಗಿ ಉದ್ಯೋಗಾವಕಾಶ ಒದಗಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ವಿವರ ನೀಡಿದ್ದಾರೆ.
Related Articles
Advertisement
1.ಕೋವಿಡ್ ಆರೋಗ್ಯ ಕಾರ್ಯಕರ್ತ ಕೋರ್ಸ್ :
ದ್ವಿತೀಯ ಪಿಯುಸಿ ಅಥವಾ 12ನೇ ತರಗತಿ ವಿಜ್ಞಾನ ವಿಭಾಗದ ಅಭ್ಯರ್ಥಿಗಳಿಗೆ 20 ದಿನಗಳ ತರಬೇತಿ. ಆಸ್ಪತ್ರೆ, ಕ್ಲಿನಿಕ್, ಐಸೋಲೇಶನ್ ಮತ್ತು ಕ್ವಾರಂಟೈನ್ ಕೇಂದ್ರಗಳಲ್ಲಿ ಹೇಗೆ ಕಾರ್ಯ ನಿರ್ವಹಿಸಬೇಕು, ಆಮ್ಲಜನಕ ಸಿಲಿಂಡರ್ ಹೇಗೆ ಬಳಸಬೇಕು ಎಂಬ ತರಬೇತಿ.
2.ಲಸಿಕೆ ಸಂಯೋಜಕ ಕೋರ್ಸ್ :
ವಿಜ್ಞಾನ ವಿಭಾಗದ ದ್ವಿತೀಯ ಪಿಯುಸಿ ಅಥವಾ 12ನೇ ತರಗತಿ ಪೂರೈಸಿದ ಅಭ್ಯರ್ಥಿಗಳಿಗೆ 10 ದಿನಗಳ ತರಬೇತಿ. ಆಸ್ಪತ್ರೆ, ಕ್ಲಿನಿಕ್, ಕಾರ್ಪೋರೆಟ್ ವಲಯದಲ್ಲಿ ಕೊರೊನಾ ಲಸಿಕೆ ಅಭಿಯಾನ ಮತ್ತು ಸಮರ್ಪಕ ನಿರ್ವಹಣೆಯ ಬಗ್ಗೆ ತರಬೇತಿ.
3.ಕೋವಿಡ್ ಸಹಾಯಕ ಕೇಂದ್ರದ ಕಾ.ನಿ. ಕೋರ್ಸ್
ಎಸೆಸೆಲ್ಸಿ ಮೇಲ್ಪಟ್ಟು ವಿದ್ಯಾಭ್ಯಾಸ ಮಾಡಿರುವ ಅಭ್ಯರ್ಥಿಗಳಿಗೆ ಆಸ್ಪತ್ರೆ, ಕ್ಲಿನಿಕ್ ಮತ್ತು ಸರಕಾರಿ ಕೌನ್ಸೆಲಿಂಗ್ ಕೇಂದ್ರಗಳಲ್ಲಿ ಹೇಗೆ ಕಾರ್ಯನಿರ್ವಹಿಸಬೇಕು ಎಂಬುದನ್ನು 10 ದಿನಗಳಲ್ಲಿ ಕಲಿಸಿಕೊಡಲಾಗುತ್ತದೆ. ಮೂರೂ ತರಬೇತಿ ಆನ್‌ಲೈನ್, ಆಫ್ಲೈನ್ ಎರಡೂ ಮಾದರಿಗಳಲ್ಲಿ ಇರಲಿದೆ.
ಉದಯವಾಣಿ ಪ್ರತಿಪಾದಿಸಿತ್ತು :
“ತುರ್ತು ಆರೋಗ್ಯ ಸೇವೆಗೆ ಅಪ್ರಂಟಿಸ್‌ಶಿಪ್ ಜಾರಿಯಾಗಲಿ’ ಎಂಬ ಶೀರ್ಷಿಕೆಯಡಿ ಮೇ 6ರಂದು “ಉದಯವಾಣಿ’ ಸಮಗ್ರ ವರದಿ ಪ್ರಕಟಿ ಸಿತ್ತು. ಅದರಲ್ಲಿ ಕೊರೊನಾ ಸೃಷ್ಟಿ ಸಿರುವ ಆರೋಗ್ಯ ತುರ್ತು ಪರಿಸ್ಥಿತಿ ನಿಭಾ ಯಿಸುವುದಕ್ಕಾಗಿ ಆಸಕ್ತರಿಗೆ ನರ್ಸಿಂಗ್ ತರಬೇತಿ ನೀಡಿ, ಅಪ್ರಂಟಿಸ್‌ಶಿಪ್ ಜಾರಿ ಮಾಡಬೇಕು ಎಂದು ಪ್ರತಿಪಾದಿಸಿತ್ತು.
ಮೊದಲ ಹಂತದಲ್ಲಿ 5 ಸಾವಿರ ಅಭ್ಯರ್ಥಿಗಳಿಗೆ ತರಬೇತಿ ನೀಡಲಿದ್ದೇವೆ. ಕೇಂದ್ರದ ಮಾರ್ಗಸೂಚಿ ಯಂತೆ ಅಲ್ಪಾವಧಿ ಕೋರ್ಸ್ ನಡೆಯಲಿದೆ. ಕೋರ್ಸ್ ಪೂರ್ಣಗೊಂಡ ಅನಂತರ ಸಂದರ್ಶನದ ಮೂಲಕ ಉದ್ಯೋಗಕ್ಕೆ ಆಯ್ಕೆ ನಡೆಯಲಿದೆ.– ಡಾ| ಶಾಲಿನಿ ರಜನೀಶ್, ಯುವ ಸಶಕ್ತೀಕರಣ ಮತ್ತು ಕ್ರೀಡಾ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ