Advertisement

ಕೌಶಲಯುತ ಶಿಕ್ಷಣ ಇಂದಿನ ಅನಿವಾರ್ಯತೆ

11:27 PM Feb 23, 2022 | Team Udayavani |

ಹಿಂದೆ ಕಲಿಕೆಯಲ್ಲಿ ಪಡೆದ ಅಂಕಗಳೇ ಆಯ್ಕೆಯ ಮುಖ್ಯ ಮಾನದಂಡವಾಗಿತ್ತು. ಈಗ ಆಯ್ಕೆಯ ಮಾನದಂಡಗಳು ನಾವು ಮಾಡುವ ಕೆಲಸ ಬೇಡುವ ಚಾಕಚಕ್ಯಗಳನ್ನು ಅವಲಂಬಿಸಿದೆ. ಒಂದು ಮಾರ್ಕೆ ಟಿಂಗ್‌ ಹುದ್ದೆಯಾದರೆ ಅಭ್ಯರ್ಥಿಯಲ್ಲಿ ಅದಕ್ಕೆ ಬೇಕಾದ ಕೌಶಲ ಎಷ್ಟಿದೆ ಎಂದು ಮನೋ ವೈಜ್ಞಾ ನಿಕ ಪರೀಕ್ಷೆಗಳನ್ನು ನಡೆಸಿ ಸೂಕ್ತರನ್ನು ಆಯ್ಕೆ ಮಾಡುವಷ್ಟು ನೇಮಕಾತಿ ಪ್ರಕ್ರಿಯೆ ಬಿಗುವಾಗಿದೆ. ಈಗ ಕಾರ್ಯನಿರ್ವಹಣೆಯ ದಕ್ಷತೆ ಯನ್ನು ಅಳೆದು ಭಡ್ತಿಯೇ ಹೊರತು, ಜ್ಞಾನ ಆಧಾರಿತ ಮಾನದಂಡದಿಂದ ಅಲ್ಲ. ಆದ್ದರಿಂದ ಕಾರ್ಯನಿರ್ವಹಣೆಯಲ್ಲಿ ತೋರಿದ ಚಾಕಚಕ್ಯತೆ ನಿರ್ಧಾರಕ ಅಂಶ.

Advertisement

ನಾವೀಗ ಕ್ಷಿಪ್ರ ಬದಲಾವಣೆಯ ಕಾಲಫ‌ಟ್ಟದಲ್ಲಿ ದ್ದೇವೆ. 1990ರ ಅನಂತರ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಬಹಳಷ್ಟು ಬದಲಾವಣೆಗಳಾಗಿವೆ. ಇಂತಹ ಬದಲಾವಣೆಗಳಿಗೆ ಸಕಾಲದಲ್ಲಿ ಸ್ಪಂದಿಸು ವವರು ದೀರ್ಘ‌ ಭವಿಷ್ಯದಲ್ಲಿ ಉಳಿಯುತ್ತಾರೆ; ಹಾಗೆ ಒಗ್ಗಿಕೊಳ್ಳದವರು ಹಿಂದುಳಿಯುತ್ತಾರೆ ಎಂಬುದು ಡಾರ್ವಿನನ ವಿಕಾಸವಾದದ ತಿರುಳು. ಆದ್ದರಿಂದ ನಮ್ಮ ಸುತ್ತಲಿನ ಬದಲಾವಣೆಗಳನ್ನು ಆಸಕ್ತಿಯಿಂದ ಗಮನಿಸುವುದು ಮತ್ತು ಅವುಗಳಿಗೆ ಸೂಕ್ತವಾಗಿ ಪ್ರತಿಕ್ರಿಯಿಸುವುದು ಇಂದಿನ ಆದ್ಯತೆಯಾಗಿದೆ.

21ನೇ ಶತಮಾನ ತಂತ್ರಜ್ಞಾನದ ಯುಗ. ಇಂದಿನ ಕಾಲಮಾನಕ್ಕೆ ಸೂಕ್ತವಾದ ಕೌಶಲಗಳನ್ನು ಬೆಳೆಸಿಕೊಂಡವರು ಬೇಗ ಹೊಸ ಯುಗಕ್ಕೆ ಹೊಂದಿ ಕೊಳ್ಳುತ್ತಾರೆ. ಸ್ವಾತಂತ್ರಾéನಂತರದ ಆರಂಭಿಕ ವರ್ಷಗಳಲ್ಲಿ ಕೌಶಲವರ್ಧನೆಗೆ ಸಾರ್ವಜನಿಕರಿಗೆ ಪೂರ್ಣವಾಗಿ ಅವಕಾಶ ಸಿಗಲಿಲ್ಲ. ಶತಮಾನಗಳಿಂದ ಬೇರೆಬೇರೆ ಕಾರಣಗಳಿಂದ ಹಿಂದುಳಿದವರಿಗೆ ತಮ್ಮ ಕೌಶಲವೃದ್ಧಿಯಿಂದ ತಮ್ಮನ್ನು ತಾವು ಸುಧಾರಿಸಿ ಕೊಳ್ಳಲು ಈಗ ಉತ್ತಮ ಅವಕಾಶ ಒದಗಿ ಬಂದಿದೆ. ಆದ್ದರಿಂದ ಅಂತಹ ಕೌಶಲಗಳನ್ನು ಬೆಳೆಸಲು ತಮ್ಮ ಮುಂದಿನ ಪೀಳಿಗೆಗಾದರೂ ಅವಕಾಶ ಕಲ್ಪಿಸಿಕೊಟ್ಟರೆ ಇತಿಹಾಸದ ತಪ್ಪನ್ನು ತಿದ್ದಿಕೊಂಡು ಎಲ್ಲರ ಭವಿಷ್ಯದ ಜೀವನವನ್ನು ಹಸನು ಮಾಡಲು ಸಾಧ್ಯ.

ಹಿಂದಿನ ಶತಮಾನ ಸಾಂಪ್ರದಾಯಿಕ ಕಲಿಕೆ ಗಳನ್ನು ನೆಚ್ಚಿಕೊಂಡು ಅದಕ್ಕೆ ಅನುಸಾರವಾದ ಕಲಿಕೆಗಳನ್ನೇ ಮುಂದುವರಿಸಿತು. ಆ ಕಲಿಕೆ ಕಚೇರಿಗಳಲ್ಲಿ ಕೆಲಸ ಮಾಡುವ ಸೀಮಿತ ಕೌಶಲಕ್ಕೆ ಪ್ರಾಧಾನ್ಯ ನೀಡಿತು. ಜಾಗತೀಕರಣದ ಬೀಸು ದೇಶದಉದ್ಯೋಗ ಕ್ಷೇತ್ರದಲ್ಲಿ ಇನ್ನಿಲ್ಲದ ಬದಲಾವಣೆ ಗಳನ್ನು ತಂದೊಡ್ಡಿತು. ದೇಶ ಜಗತ್ತಿನ ಉತ್ಪಾದನ ಕಾರ್ಯಶಾಲೆಯಾಯಿತು. ಇಂತಹ ಉತ್ಪಾದನ ಆಧಾರಿತ ಪ್ರಗತಿಗೆ ತಯಾರಿಕ ಮತ್ತು ಸೇವಾ ಕೌಶಲ ಮುಖ್ಯ ವಾದುವು. ಆದ್ದರಿಂದಲೇ ಎಂಜಿನಿ ಯರಿಂಗ್‌ ಮತ್ತು ತತ್ಸಂಬಂಧಿತ ಕಲಿಕೆಗೆ ಮೂಲ ಸೌಕರ್ಯ ವಾದ ಶಿಕ್ಷಣ ಸೌಲಭ್ಯಗಳು ತೆರೆದು ಕೊಂಡವು. ಎಂಜಿನಿಯರಿಂಗ್‌, ಎಂಬಿಎ ಕಾಲೇಜುಗಳು ಹೆಚ್ಚಿನ ಬೇಡಿಕೆಯನ್ನು ಪೂರೈಸಿದುವು.

ಇನ್ನೊಂದು ಮುಖ್ಯ ಬೆಳವಣಿಗೆಯೆಂದರೆ ಜನಸಾಮಾನ್ಯರಲ್ಲಿ ಬೆಳೆದ ಆರೋಗ್ಯ ಕುರಿತ ಕಾಳಜಿ. ಇದಕ್ಕಾಗಿ ಹೆಚ್ಚಿನ ವೈದ್ಯಕೀಯ ಸೌಲಭ್ಯ ಗಳು ಮತ್ತು ವೈದ್ಯಕೀಯ ಕಾಲೇಜುಗಳು, ನರ್ಸಿಂಗ್‌ ಕಾಲೇಜುಗಳು ತೆರೆದುಕೊಂಡವು. ಹಿಂದೆ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ನರ್ಸಿಂಗ್‌, ಬಾಣಸಿಗ ಕಲಿಕೆ, ಪ್ರಯಾಣದ ಕುರಿತ ಸೇವೆಗಳು ಹೆಚ್ಚಿನ ಬೇಡಿಕೆ ಕಂಡುಕೊಂಡದ್ದು ಅಚ್ಚರಿಯ ಬೆಳವಣಿಗೆಯೇನಲ್ಲ. ವಿದ್ಯಾರ್ಥಿಗಳು ಮತ್ತವರ ಹೆತ್ತವರು ಕ್ರಮವಾಗಿ ತಮ್ಮ ತಮ್ಮ ಬುದ್ಧಿಮತ್ತೆ ಮತ್ತು ಆರ್ಥಿಕ ಪರಿಸ್ಥಿತಿಗಳಿಗನುಸಾರವಾಗಿ ಸೂಕ್ತ ವೃತ್ತಿಪರ ಕಲಿಕೆಗಳನ್ನು ಆಯ್ದುಕೊಂಡರು.

Advertisement

ಜ್ಞಾನಕ್ಕಿಂತ ಹೆಚ್ಚಾಗಿ ಕೌಶಲಕ್ಕೆ ಆದ್ಯತೆ ಮತ್ತು ಮಹತ್ವ ಕೊಡುವ ಈ ದಿನಮಾನಗಳಲ್ಲಿ ಎಲ್ಲರಿಗೂ ಕಲಿಕೆಗೆ ಮುಕ್ತ ಅವಕಾಶ ಸಿಗುತ್ತಿದೆ. ಇದನ್ನು ಗಮನ ದಲ್ಲಿಟ್ಟು ಹೆತ್ತವರು ಮಾರುಕಟ್ಟೆಯ ಮುಂದಿನ ಬೇಡಿಕೆಗಳಿಗನುಸಾರ ತಮ್ಮ ಮಕ್ಕಳ ಆಸಕ್ತಿಗೆ ಪೂರಕವಾದ ಯಾವುದಾದರೂ ಒಂದು ವೃತ್ತಿಪರ ಕಲಿಕೆಗೆ ಸೇರಿಸಿದರೆ ಅವರ ಭವಿಷ್ಯವನ್ನು ರೂಪಿಸಿ ಕೊಳ್ಳಲು ಅವಕಾಶ ಮಾಡಿಕೊಟ್ಟಂತಾಗುತ್ತದೆ.

ಇಂದು ನಾವು ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕು ತ್ತಿದ್ದೇವೆ. ಕಲಿಕೆಯ ಅವಕಾಶಕ್ಕೂ ಸ್ಪರ್ಧಾತ್ಮಕತೆಯೇ ಮಾನದಂಡವಾಗುವುದರಿಂದ ನಮ್ಮ ಮಕ್ಕಳನ್ನು ಬರೇ ಕಲಿಕೆಗೆ ಸೇರಿಸಿದರೆ ಸಾಲದು; ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಅನುಕೂಲವಾಗುವಂತೆ ತಯಾರು ಮಾಡುವುದೂ ಕೂಡ ಕಲಿಕೆಯ ಭಾಗವೇ ಆಗಿದೆ. ತಮ್ಮ ತಮ್ಮ ಕಲಿಕಾ ಸಾಮರ್ಥ್ಯ, ಹಣಕಾಸು ಸ್ಥಿತಿಗತಿಗಳನ್ನು ಅನುಸರಿಸಿ ಸೂಕ್ತವಾದದ್ದನ್ನು ಆಯ್ಕೆ ಮಾಡಿಕೊಳ್ಳುವುದು ಜಾಣತನ. ಸಮಾಜದಲ್ಲಿ ತಮ್ಮ ಸ್ಥಾನಮಾನಗಳನ್ನು ಹೆಚ್ಚಿಸಲು ತನ್ನ ಮಕ್ಕಳು ಇಂಥ ಕೌಶಲದವರೇ ಆಗಬೇಕೆಂದು ಹಠ ಬಿದ್ದು ಅವರು ಓದಲು ಇಚ್ಛಿಸದ ಕಲಿಕೆಯನ್ನು ಅವರ ಗಂಟಲಲ್ಲಿ ತುರುಕುವುದು ತರವಲ್ಲ. ಎಲ್ಲ ವೃತ್ತಿಪರ ಕಲಿಕೆಗಳಿಗೂ ಸಾಕಷ್ಟು ಬೇಡಿಕೆಯಿರುವಾಗ ಮಕ್ಕಳಿಗೆ ಇಷ್ಟವಾದ ಅಂತಹ ಒಂದು ಆಯ್ಕೆಯನ್ನು ಆಯ್ದು ಕೊಳ್ಳುವುದು ಜಾಣತನ.

ಹಾಗೆಂದ ಮಾತ್ರಕ್ಕೆ ಸಾಂಪ್ರದಾಯಿಕ ಕಲಿಕೆಗಳಿಗೆ ಮುಂದೆ ಭವಿಷ್ಯವಿಲ್ಲ ಎಂದು ಅರ್ಥವಲ್ಲ. ಪ್ರಾಥಮಿಕ ಹಂತದ ವಿದ್ಯಾಭ್ಯಾಸ ಕಲಿಸಲು ಉತ್ತಮ ಶಿಕ್ಷಕರು ಬೇಕು. ಕಚೇರಿಗಳಲ್ಲಿ ಕೆಲಸ ಮಾಡಲು ಸಾಂಪ್ರದಾಯಿಕ ಕಲಿಕೆಯವರು ಬೇಕು. ಭಾಷೆ ಕಲಿಸಲು ಭಾಷಾಧ್ಯಯನ ಮಾಡಿದವರು ಬೇಕು. ಹೀಗೆ ಸಾಂಪ್ರದಾಯಿಕ ಕಲಿಕೆಗೂ ಸಾಕಷ್ಟು ಅವಕಾಶಗಳು ಇದ್ದೇ ಇವೆ.

ಇನ್ನೊಂದು ಮುಖ್ಯ ಬೆಳವಣಿಗೆಯೆಂದರೆ ಉತ್ಪಾ ದನೆ ಹೆಚ್ಚಿದಂತೆ ವಸ್ತು, ಸೇವೆಗಳ ಮಾರಾಟ ಮತ್ತು ಮಾರಾಟ ಅನಂತರದ ಸೇವಾ ಸೌಲಭ್ಯಗಳನ್ನು ಒದಗಿಸುವ ಕುರಿತಾಗಿದ್ದು. ಮಾರಾಟ, ಸೇವೆ ಮುಂತಾದವುಗಳು ಮೃದು ಕೌಶಲಗಳನ್ನು ಬೇಡು ತ್ತವೆ. ಇವುಗಳನ್ನು ಕಾಲೇಜುಗಳಲ್ಲಿ ಕಲಿಸುತ್ತಿದ್ದರೂ ಇದು ಹೆಚ್ಚು ಅನುಭವಿಸಿ ಕಲಿಯಬೇಕಾದ ಕಲಿಕೆ. ಮಾರ್ಕೆಟಿಂಗ್‌, ಗ್ರಾಹಕರನ್ನು ನಿರ್ವಹಿ ಸುವ ಸಾಮರ್ಥ್ಯಗಳೆಲ್ಲ ಈಗ ಬೇಡಿಕೆಯ ಕೌಶಲ ಗಳಾಗಿವೆ. ಮಾತುಗಾರಿಕೆ, ವಿವೇಚನಾಶಕ್ತಿ, ಮನ ಗಾಣಿಸುವುದು, ಆತ್ಮವಿಶ್ವಾಸ, ಮನುಷ್ಯ ಸಂಬಂಧ ಗಳನ್ನು ಬೆಳೆಸಿ ಉಳಿಸಿಕೊಳ್ಳುವುದು ಮುಂತಾದ ಮೃದು ಕೌಶಲಗಳು ಹೆಚ್ಚಿನ ಬೇಡಿಕೆಯಲ್ಲಿವೆ. ಮುಂದಾಳತ್ವದ ಗುಣ, ಸಮಸ್ಯೆಗಳನ್ನು ಬಗೆಹರಿ ಸುವ ಸಾಮರ್ಥ್ಯ, ತಂಡದಲ್ಲಿ ಪರಸ್ಪರ ಸೌಹಾರ್ದ ದಿಂದ ಕೆಲಸ ಮಾಡುವ ಒಲವು, ಹಲವು ಭಾಷೆ ಗಳನ್ನು ತಿಳಿದಿರುವುದೆಲ್ಲವೂ ಇಂದಿನ ಬೇಡಿಕೆಯ ಕೌಶಲಗಳು.

ಆ ಕಾಲ ಒಂದಿತ್ತು -ಕೇವಲ ಕೆಲಸದ ಭದ್ರತೆ ಯನ್ನು ನೋಡಿ ಬೆನ್ನಟ್ಟುವ ಚಾಳಿ. ತಮ್ಮ ಕಲಿಕೆ ಯಲ್ಲಿ ಪಡೆದ ಅಂಕಗಳೇ ಆಯ್ಕೆಯ ಮುಖ್ಯ ಮಾನದಂಡವಾಗಿತ್ತು. ಈಗ ಆಯ್ಕೆಯ ಮಾನ ದಂಡಗಳು ನಾವು ಮಾಡುವ ಕೆಲಸ ಬೇಡುವ ಚಾಕಚಕ್ಯತೆಗಳನ್ನು ಅವಲಂಬಿಸಿದೆ. ಒಂದು ಮಾರ್ಕೆಟಿಂಗ್‌ ಹು¨ªೆಯಾದರೆ ಅಭ್ಯರ್ಥಿಯಲ್ಲಿ ಅದಕ್ಕೆ ಬೇಕಾದ ಕೌಶಲ ಎಷ್ಟಿದೆ ಎಂದು ಮನೋ ವೈಜ್ಞಾ ನಿಕ ಪರೀಕ್ಷೆಗಳನ್ನು ನಡೆಸಿ ಸೂಕ್ತರನ್ನು ಆಯ್ಕೆ ಮಾಡುವಷ್ಟು ನೇಮಕಾತಿ ಪ್ರಕ್ರಿಯೆ ಬಿಗು ವಾಗಿದೆ. ಈಗ ಕಾರ್ಯನಿರ್ವಹಣೆಯ ದಕ್ಷತೆ ಯನ್ನು ಅಳೆದು ಭಡ್ತಿಯೇ ಹೊರತು, ಜ್ಞಾನ ಆಧಾರಿತ ಮಾನದಂಡದಿಂದ ಅಲ್ಲ. ಆದ್ದರಿಂದ ಕಾರ್ಯನಿರ್ವಹಣೆಯಲ್ಲಿ ತೋರಿದ ಚಾಕಚಕ್ಯ ನಿರ್ಧಾರಕ ಅಂಶ.

ಇಂದಿನ ದಿನಗಳಲ್ಲಿ ಒಂದೇ ಕೆಲಸದಲ್ಲಿ, ಒಂದೇ ಜಾಗದಲ್ಲಿ ಇರಲು ಸಾಧಕರು ಇಷ್ಟ ಪಡುವುದಿಲ್ಲ. ವೃತ್ತಿಪರರು ಪಂಥಾಹ್ವಾನವಿರುವ ಕೆಲಸಗಳನ್ನು ಆಯ್ದುಕೊಂಡು ತಮ್ಮ ಸಾಮರ್ಥ್ಯಗಳನ್ನು ತೋರಲು ಬಯಸುತ್ತಾರೆ. ಅಂಥವರಿಗೆ ಇಂದು ಹೆಚ್ಚಿನ ಪ್ರತಿಫ‌ಲ ಮತ್ತು ಬೇಡಿಕೆ.

ಇಂದಿನ ಯಾವುದೇ ಕೆಲಸವನ್ನು ನಿರ್ವಹಿಸ ಬೇಕಾದರೂ ತಂತ್ರಜ್ಞಾನ ಮುಖ್ಯ ನೈಪುಣ್ಯವಾಗಿದೆ. ಸಂವಹನ ಸಂಬಂಧಿ ಉಪಕರಣಗಳು, ಮೊಬೈಲ್ , ಕಂಪ್ಯೂಟರ್‌, ವಾಹನ ಚಾಲನೆ ಮುಂತಾದ ಸಾಮಾನ್ಯ ಕೌಶಲಗಳೂ ಆಯ್ಕೆಯಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಇವುಗಳನ್ನು ತಮ್ಮ ಮಕ್ಕಳಲ್ಲಿ ಬೆಳೆಸಲು ಅವಕಾಶ ಕೊಡಬೇಕು. ಸಮಯ ಪಾಲನೆ, ಸೂಕ್ತ ವಾದ ಬಟ್ಟೆಬರೆ ಧರಿಸುವುದು, ಪ್ರಸನ್ನತೆ, ತಾಳ್ಮೆ, ತಮ್ಮ ವ್ಯವಹಾರಗಳನ್ನು ಕುಳಿತಲ್ಲಿಂದಲೇ ನಿರ್ವಹಿ ಸುವ ತಿಳಿವಳಿಕೆಯಂತಹ ಜಾಣ್ಮೆಗಳೂ ಅಗತ್ಯ.

ಇವೆಲ್ಲವನ್ನೂ ಗಮನದಲ್ಲಿರಿಸಿ ನಮ್ಮ ಮಕ್ಕಳನ್ನು ಇಂದಿನ ಮಾರುಕಟ್ಟೆಯ ಬೇಡಿಕೆಗನುಸಾರವಾಗಿ ಬೆಳೆಸುವುದು ಹೆತ್ತವರ ಕರ್ತವ್ಯ.

-ಡಾ| ಕೊಳ್ಚಪ್ಪೆ ಗೋವಿಂದ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next