Advertisement

ಅಧಿಕ ಅಂಕ ಗಳಿಸಿದವರಿಗೆ ಕೌಶಲ ತರಬೇತಿ ಶಿಬಿರ

10:59 PM Jun 06, 2019 | Team Udayavani |

ಮಹಾನಗರ: ಸರಕಾರದ ಐಟಿ, ಬಿಟಿ ಮತ್ತು ಎಸ್‌ ಆ್ಯಂಡ್‌ ಟಿ ಇಲಾಖೆ ಆರಂಭಿಸಿದ ಬಾಲಕಿಯರ ಸಬಲೀಕರಣ ಕೌಶಲ ತರಬೇತಿ “ಚೇತನ’ದ 4ನೇ ಆವೃತ್ತಿಗೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಅವರು ನಗರದ ಇನ್ಫೋಸಿಸ್‌ ಕ್ಯಾಂಪಸ್‌ನಲ್ಲಿ ಚಾಲನೆ ನೀಡಿದರು.

Advertisement

ಸರಕಾರದ ಐಟಿ, ಬಿಟಿ ಮತ್ತು ಎಸ್‌ ಆ್ಯಂಡ್‌ ಟಿ ಇಲಾಖೆ ಕರ್ನಾಟಕದ ಎಲ್ಲೆಡೆ ಇರುವ ಸರಕಾರಿ ಪ್ರೌಢಶಾಲೆಗಳ ಎಸೆಸೆಲ್ಸಿಯಲ್ಲಿ ಅಗ್ರಸ್ಥಾನ ಪಡೆದ ವಿದ್ಯಾರ್ಥಿನಿಯರಿಗೆ ಜಾಗೃತಿ ಮತ್ತು ತಂತ್ರಜ್ಞಾನ ಹಾಗೂ ಉದ್ಯಮಶೀಲತೆಗಳ ಪರಿಚಯ ಮಾಡಿಕೊಡಲಾಗುತ್ತಿದೆ. ಪ್ರತಿ ವರ್ಷ ರಾಜ್ಯದಲ್ಲಿ ಎಸೆಸೆಲ್ಸಿ ಯಲ್ಲಿ ಅಗ್ರ ಅಂಕ ಪಡೆದ 500 ವಿದ್ಯಾರ್ಥಿಗಳನ್ನು ಆರಿಸಿ ಒಂದು ವಾರದ ಅವಧಿಯ ವಸತಿ ಶಿಬಿರವನ್ನು ಇನ್ಫೋಸಿಸ್‌ ಕ್ಯಾಂಪಸ್‌ನಲ್ಲಿ ಆಯೋಜಿಸಲಾಗುತ್ತದೆ. ಅವರಿಗೆ ಸಾಫ್ಟ್ ವೇರ್‌, ತಂತ್ರಜ್ಞಾನ ಸಂಪರ್ಕ ಮತ್ತು ವ್ಯಕ್ತಿತ್ವ ಉದ್ಯಮ ಮತ್ತು ತಂತ್ರಜ್ಞಾನ ಕ್ಷೇತ್ರದ ಪರಿಣತರು ವಿದ್ಯಾರ್ಥಿನಿಯರಿಗೆ ವೃತ್ತಿ ಜೀವನ ಕುರಿತ ಸಲಹೆ ಮತ್ತು ತಂತ್ರಜ್ಞಾನಗಳ ಹಲವು ಕ್ಷೇತ್ರಗಳಲ್ಲಿ ತರಬೇತಿ ನೀಡಲಾಗುತ್ತಿರುವುದು ಉತ್ತಮ ಕಾರ್ಯ ಎಂದರು.

ಸರಕಾರದ ಐಟಿ, ಬಿಟಿ ಮತ್ತು ಎಸ್‌ ಆ್ಯಂಡ್‌ ಟಿ ಇಲಾಖೆ ಆರಂಭಿಸಿದ ಬಾಲಕಿಯರ ಸಬಲೀಕರಣ ಕೌಶಲ ತರಬೇತಿ ಕಾರ್ಯಕ್ರಮವನ್ನು ಕರ್ನಾಟಕ ಇನ್ನೋವೇಷನ್‌ ಆ್ಯಂಡ್‌ ಟೆಕ್ನಾಲಜಿ ಸೊಸೈಟಿ(ಕೆಐಟಿಎಸ್‌)ಯು ಸ್ಯಾಮ್ಸಂಗ್‌ ಮತ್ತು ಇನ್ಫೋಸಿಸ್‌ ಸಹಯೋಗದಲ್ಲಿ ಚಾಲನೆ ನೀಡುತ್ತಿದೆ. ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಿಶ್ವಾಸ ಮೂಡಿಸಿ
ಚೇತನ ಶಿಬಿರದ ಕುರಿತು ಸರಕಾರದ ಐಟಿ ಬಿಟಿ ಮತ್ತು ಎಸ್‌ ಆ್ಯಂಡ್‌ ಟಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್‌ ಗುಪ್ತಾ ಅವರು ಮಾತನಾಡಿ, ಯುವ ಮನಸ್ಸುಗಳನ್ನು ಉತ್ತಮ ಪಡಿಸಿ ಮಹಿಳೆಯರನ್ನು ಸಬ ಲೀಕರಿಸುವ ಸರಕಾರದ ಯೋಜನೆಯ ಭಾಗ ಈ ಉಪ ಕ್ರಮವಾಗಿದೆ. ಅವರಲ್ಲಿ ವಿಶ್ವಾಸ ಮೂಡಿಸಿ, ಉದ್ಯಮಶೀಲತೆ ಮತ್ತು ನವೀನತೆಗಳಿಗೆ ರಾಜ್ಯದಲ್ಲಿ ಪ್ರೋತ್ಸಾಹ ನೀಡುವ ಚಿಂತನೆ ಇದರಲ್ಲಿದೆ. ವಿದ್ಯಾರ್ಥಿಗಳು ಈ ಶಿಬಿರವನ್ನು ಪೂರ್ಣಗೊಳಿಸಿದ ನಂತರ ಅವರಿಗೆ ಚೇತನಾ ಸ್ಕಾಲರ್ಸ್‌ ಎಂದು ಹೆಸರಿಸಲಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next