Advertisement

Sullia: ತಡೆಬೇಲಿಗೆ ಕಾರು ಢಿಕ್ಕಿ

08:46 PM Jun 25, 2024 | Team Udayavani |

ಸುಳ್ಯ: ಸುಳ್ಯದ ಕುರುಂಜಿಗುಡ್ಡೆ ಒಳಾಂಗಣ ಕ್ರೀಡಾಂಗಣದ ಇನ್‌ಡೋರ್‌ ತಡೆಬೇಲಿಗೆ ಕಾರೊಂದು ಗುದ್ದಿದ ಘಟನೆ ಸಂಭವಿಸಿದೆ.

Advertisement

ಕ್ರೀಡಾಂಗಣದ ಪಕ್ಕದಲ್ಲಿ ನಗರ ಪಂಚಾಯತ್‌ನ ಪಾರ್ಕ್‌ ಇದ್ದು, ಅಲ್ಲಿಗೆ ಮಂಗಳವಾರ ಬೆಳಗ್ಗೆ ಕಾರಿನಲ್ಲಿ ಬಂದ ಯುವಕರು ಕ್ರೀಡಾಂಗಣದ ಎದುರಿನ ಜಾಗದಲ್ಲಿ ಕಾರು ಚಲಾಯಿಸಿದ ವೇಳೆ ನಿಯಂತ್ರಣ ತಪ್ಪಿ ಕಾರು ತಡೆಬೇಲಿಗೆ ಢಿಕ್ಕಿಯಾಗಿದೆ. ಘಟನೆಯಲ್ಲಿ ತಡೆಬೇಲಿ ಕೆಳಗೆ ಬಿದ್ದಿದೆ. ಸ್ಥಳಕ್ಕೆ ನ.ಪಂ. ಮಾಜಿ ಅಧ್ಯಕ್ಷ ವಿನಯ ಕುಮಾರ್‌ ಕಂದಡ್ಕ, ನ.ಪಂ. ಅಧಿಕಾರಿಗಳು ಭೇಟಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next