Advertisement

Daily Horoscope: ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಸೂಕ್ತ ಮಾರ್ಗದರ್ಶನ ಲಭ್ಯ

07:28 AM Jun 24, 2024 | Team Udayavani |

ಮೇಷ: ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ. ಉದ್ಯಮಿಗಳಿಗೆ ಸಮಸ್ಯೆಗಳಿಂದ ಸ್ವಲ್ಪ ಬಿಡುಗಡೆ. ದೂರ ದೇಶದಲ್ಲಿರುವ ಬಂಧುಗಳಿಂದ ಶುಭ ಸಮಾಚಾರ. ಮಹಿಳಾ ಉದ್ಯಮಿಗಳಿಗೆ ಯಶಸ್ಸು. ಗೃಹೋದ್ಯಮದ ಉತ್ಪನ್ನಗಳಿಗೆ ಅಧಿಕ ಬೇಡಿಕೆ.

Advertisement

ವೃಷಭ: ಉದ್ಯೋಗಸ್ಥರಿಗೆ ಹೊಸ ಸಪ್ತಾಹ ಅನುಕೂಲಕರ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಹೇರಳ ಲಾಭ. ವೃತ್ತಿಪರಿಣತರಿಗೆ ಉದ್ಯೋಗಾವಕಾಶ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ಯಂತ್ರೋಪಕರಣ ವ್ಯವಹಾರಸ್ಥರಿಗೆ ಅನುಕೂಲ.

ಮಿಥುನ: ಯೋಜನೆಗಳನ್ನು ತ್ವರಿತಗೊಳಿಸುವ ಪ್ರಕ್ರಿಯೆ ಆರಂಭ. ಉದ್ಯೋಗಸ್ಥರಿಗೆ ಸಮಾಧಾನ ನೀಡುವ ಬೆಳವಣಿಗೆ. ಅಪಾತ್ರರಿಗೆ ಸಲಹೆ ನೀಡುವುದರಿಂದ ಅವಮಾನ. ವ್ಯವಹಾರ ಸಂಬಂಧ ಗಣ್ಯವ್ಯಕ್ತಿಯ ಭೇಟಿ.

ಕರ್ಕಾಟಕ: ಉದ್ಯೋಗಸ್ಥರಿಗೆ ಅಧಿಕ ಸವಲತ್ತುಗಳು. ಉದ್ಯಮಗಳಿಗೆ ಸರಕಾರಿ ನೆರವು ಕಡಿತ ಸಂಭವ. ಸರಕಾರಿ ಆಸ್ಪತ್ರೆಗಳ ಸುಧಾರಣೆಗೆ ರಾಜಕಾರಣಿಗಳ ನಿರಾಸಕ್ತಿ. ಮಹಿಳೆಯರ ಸ್ವೋದ್ಯೋಗ ಯೋಜನೆ ಉತ್ಪನ್ನಗಳಿಗೆ ಒಳ್ಳೆಯ ಹೆಸರು.

ಸಿಂಹ: ನಾನಾ ಬಗೆಯ ವ್ಯವಹಾರಗಳಲ್ಲಿ ವ್ಯಸ್ತರಾಗುವಿರಿ. ಉದ್ಯೋಗಸ್ಥರಿಗೆ ಘಟಕದ ನೇತೃತ್ವ. ಉದ್ಯಮಕ್ಕೆ ಹೊಸ ರೂಪ ನೀಡುವ ಕ್ರಿಯೆ ಮುಕ್ತಾಯ. ಕುಟುಂಬದಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ.

Advertisement

ಕನ್ಯಾ: ಹೊಸ ಕಾರ್ಯಕ್ಷೇತ್ರಕ್ಕೆ ಒಗ್ಗಿಕೊಂಡ ಸಮಾಧಾನ. ಕಾರ್ಯನಿಷ್ಠೆಗೆ ಮಾಲಕರಿಂದ ಶ್ಲಾಘನೆ. ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ ಭರವಸೆ. ಕುಶಲಕರ್ಮಿಗಳಿಗೆ ಉದ್ಯೋಗಕ್ಕೆ ಕರೆ. ಮನೆಯಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ.

ತುಲಾ: ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ. ಉದ್ಯಮಿಗಳಿಗೆ ಗುಣಮಟ್ಟ ಕಾಯ್ದುಕೊಳ್ಳುವ ಸವಾಲು. ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಸೂಕ್ತ ಮಾರ್ಗದರ್ಶನ ಲಭ್ಯ ಲೇವಾದೇವಿ ವ್ಯವಹಾರದಿಂದ ದೂರವಿರಿ.
ನ್ಯಾಯಾಲಯದಲ್ಲಿ ಜಯ.

ವೃಶ್ಚಿಕ: ಸದ್ಯದ ಪರಿಸ್ಥಿತಿ ಎಲ್ಲ ರೀತಿಯಲ್ಲೂ ಉತ್ತಮ. ಉದ್ಯೋಗಸ್ಥರ ಸ್ಥಾನ ಗೌರವಕ್ಕೆ ಚ್ಯುತಿಯಾಗದು. ಸರಕಾರಿ ಅಧಿಕಾರಿಗಳಿಗೆ ವರ್ಗಾವಣೆಯ ಆತಂಕ. ರಾಜಕಾರಣಿಗಳಿಗೆ ಕೊಂಚ ಇಕ್ಕಟ್ಟಿನ ಪರಿಸ್ಥಿತಿ.

ಧನು: ಉದ್ಯೋಗಸ್ಥರಿಗೆ ಘಟಕದ ಕಾರ್ಯ ನಿರ್ವಹಣೆಯನ್ನು ಉತ್ತಮಗೊಳಿಸುವ ಹೊಣೆಗಾರಿಕೆ. ಉದ್ಯಮದ ವೈವಿಧಿÂàಕರಣ ಕಾರ್ಯ ಅಂತಿಮಹಂತಕ್ಕೆ. ಹಿರಿಯ ನಾಗರಿಕರಿಗೆ ಸರಕಾರಿ ನೆರವು ದೊರಕಿಸಲು ಸಹಾಯ. ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ.

ಮಕರ: ಏಳೂವರೆ ಶನಿಯ ಕೊನೆಯ ಹಂತದ ಕೀಟಲೆಗಳು. ಬಂಧುವರ್ಗದಲ್ಲಿ ಶುಭ ಸಮಾರಂಭ. ಉದ್ಯಮಿಗಳಿಗೆ ಹಠಾತ್‌ ನಷ್ಟವಾಗುವ ಭೀತಿ. ಗೃಹೋಪಯೋಗಿ ಸಾಧನಗಳ ಖರೀದಿಗೆ ಧನವ್ಯಯ. ಹಿರಿಯರ, ಮಕ್ಕಳ ಆರೋಗ್ಯ ಸುಧಾರಣೆ.

ಕುಂಭ: ನಿಲ್ಲದೆ ಸಾಗುವ ಹಲವು ಬಗೆಯ ಕೆಲಸ, ಕಾರ್ಯಗಳು. ಉದ್ಯೋಗಸ್ಥರಿಗೆ ಯಥಾರೀತಿಯ ಅನುಭವ. ಸರಕಾರಿ ನೌಕರರಿಗೆ ಕಿರಿಕಿರಿ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆಯಲ್ಲಿ ಲಾಭ. ಸಂಗೀತ, ಸಾಹಿತ್ಯ ನೃತ್ಯ ಕಲಾಭ್ಯಾಸಿಗಳಿಗೆ ಸಂತಸ.

ಮೀನ: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ. ಸೇವಾ ರೂಪದ ಕಾರ್ಯಗಳು ಇಲಾಖೆಯವರ ಸಹಕಾರದಿಂದ ಯಶಸ್ವಿ. ಕೊಂಚ ಕಾಲದಿಂದ ಸೊರಗಿದ್ದ ಉದ್ಯಮ ಚೇತರಿಕೆ. ದೇವತಾ ಸಾನ್ನಿಧ್ಯಕ್ಕೆ ಭೇಟಿ. ಪರಿಸರ ಸುಧಾರಣೆಗೆ ಸಂಂಬಂಧಪಟ್ಟ ಸಾಮೂಹಿಕ ಕಾರ್ಯಗಳಲ್ಲಿ ಭಾಗಿ.

Advertisement

Udayavani is now on Telegram. Click here to join our channel and stay updated with the latest news.

Next