Advertisement

ಕೌಶಲ ಕರ್ನಾಟಕ: ದ.ಕ.ಜಿಲ್ಲೆಯಲ್ಲಿ  ಚಾಲನೆ

05:06 PM May 16, 2017 | Harsha Rao |

ಮಂಗಳೂರು: ರಾಜ್ಯದ 5 ಲಕ್ಷ ನಿರುದ್ಯೋಗಿಗಳಿಗೆ  ಕೌಶಲಾಭಿವೃದ್ದಿ ಕಾರ್ಯಕ್ರಮದ ಮೂಲಕ ತರ ಬೇತಿ ನೀಡಲು ರಾಜ್ಯ ಸರಕಾರ ಉದ್ದೇಶಿಸಿದ್ದು, ತರಬೇತಿ ಪಡೆದ ಶೇ.70ರಷ್ಟು ಯುವಕರಿಗೆ ಸರಕಾರದ ವತಿಯಿಂದ ಉದ್ಯೋಗವಕಾಶ ದೊರಕಿಸಿಕೊಡಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.

Advertisement

ಮುಖ್ಯಮಂತ್ರಿಯವರ ಕೌಶಲ ಕರ್ನಾಟಕ ಕಾರ್ಯಕ್ರಮದಡಿಯಲ್ಲಿ ಮಂಗಳೂರು ಪುರಭವನದಲ್ಲಿ ಸೋಮವಾರ ಹಮ್ಮಿಕೊಂಡ ದ.ಕ. ಜಿಲ್ಲೆಯಲ್ಲಿ  ನಿರುದ್ಯೋಗಿ ಯುವ ಜನರ ಬೇಡಿಕೆ-ಸಮೀಕ್ಷೆ ಮತ್ತು ನೋಂದಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

16ರಿಂದ 38ರ ವಯಸ್ಸಿನ  ಶಾಲೆ ಅರ್ಧದಲ್ಲಿ ತೊರೆದವರಿಗೆ, ಶಾಲೆಗೆ ಹೋಗಿ ಕೆಲಸ ಸಿಗದ ಯುವಜನರಿಗೆ ಕೌಶಲ ಯೋಜನೆಯಡಿಯಲ್ಲಿ ವಿವಿಧ ಕೌಶಲ ತರಬೇತಿಗಳನ್ನು ನೀಡಲಾಗು ತ್ತದೆ. ತರಬೇತಿ ಪಡೆದವರಿಗೆ ಸರಕಾರದ ವತಿಯಿಂದ ಸರ್ಟಿಫಿಕೇಟ್‌ ನೀಡಲಾಗುವುದು ಎಂದರು.

ದ.ಕ. ಜಿಲ್ಲೆಯಲ್ಲಿ ಕೆಲವರು ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗುತ್ತಾರೆ. ಬಹಳಷ್ಟು ಮಂದಿಗೆ ಅರ್ಹ ಉದ್ಯೋಗ ಸಿಗುವುದಿಲ್ಲ. ಅದಕ್ಕಾಗಿ ಕೌಶಲ ಅಭಿವೃದ್ಧಿ ತರಬೇತಿ ನೀಡಲಾ ಗುತ್ತದೆ. ಯುವ ಜನರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದರು.

ಶಾಸಕ ಜೆ.ಆರ್‌. ಲೋಬೋ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ತಾ.ಪಂ.ಅಧ್ಯಕ್ಷ ಮುಹಮ್ಮದ್‌ ಮೋನು, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎ. ಮಹಮ್ಮದ್‌ ಹನೀಫ್‌, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಿತೇಶ್‌ ಕುಮಾರ್‌ ಸಿಂಗ್‌, ಜಿಲ್ಲಾಧಿಕಾರಿ ಡಾ| ಕೆ.ಜಿ.ಜಗದೀಶ್‌, ಜಿಲ್ಲಾ ಪಂಚಾಯತ್‌ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ |ಎಂ.ಆರ್‌.ರವಿ, ಉಪಕಾರ್ಯ ದರ್ಶಿ ಉಮೇಶ್‌, ಮಂಗಳೂರು ಪಾಲಿಕೆ ಆಯುಕ್ತ ಮಹಮ್ಮದ್‌ ನಝೀರ್‌, ಉಪ ಆಯುಕ್ತ ಗೋಕುಲ್‌ ದಾಸ್‌ ನಾಯಕ್‌ ಉಪಸ್ಥಿತರಿದ್ದರು.

Advertisement

ಅಪರ ಜಿಲ್ಲಾಧಿಕಾರಿ ಕುಮಾರ್‌ ಸ್ವಾಗತಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಎಲ್ಲ  ತಾಲೂಕು ಕಚೇರಿಗಳಲ್ಲಿ ನೋಂದಣಿಗೆ ಅವಕಾಶ
ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ್‌ ಮಾತನಾಡಿ, 16 ವಯಸ್ಸಿ  ಗಿಂತ ಮೇಲ್ಪಟ್ಟವರು ತಮಗೆ ಯಾವುದಾದರೂ ಉದ್ಯೋಗದ ತರಬೇತಿ ಅಗತ್ಯವಿದ್ದಲ್ಲಿ ಅಂತಹ ತರಬೇತಿಯನ್ನು ರಾಜ್ಯ ಸರಕಾರವು ಉಚಿತವಾಗಿ ನೀಡಲಿದೆ. ವಿಶೇಷತೆ ಎಂದರೆ ಈ ಯೋಜನೆಗೆ ಹೆಸರು ನೋಂದಾಯಿಸಲು ಯಾವುದೇ ಶಿಕ್ಷಣದ ಅರ್ಹತೆ ಬೇಕಾಗಿಲ್ಲ. ಯೋಜನೆಯಲ್ಲಿ  ಹೆಸರು ನೋಂದಣಿಗಾಗಿ ರಾಜ್ಯ ಸರಕಾರ ವೆಬ್‌ಸೈಟ್‌ kaushalkar.comನಲ್ಲಿ ಅಭ್ಯರ್ಥಿಯ ಎಲ್ಲ ವಿವರಗಳ ನೋಂದಣಿ ಮಾಡ ಬೇಕು. ಯೋಜನೆಯ ವಿಶೇಷ ಅಭಿಯಾನದ ಅಂಗವಾಗಿ ಮೇ 15ರಿಂದ 27ರ ವರೆಗೆ ರಾಜ್ಯದ ಎಲ್ಲ ತಾಲೂಕು ಕಚೇರಿಗಳಲ್ಲಿ ಕೌಶಲ ಆಸಕ್ತರು ಹೆಸರು ನೋಂದಾ ಯಿಸಲು ಕೌಂಟರ್‌ಗಳನ್ನು ಸ್ಥಾಪಿಸ ಲಾಗಿರುತ್ತದೆ. ಮಂಗಳೂರು ಕಾರ್‌ಸ್ಟ್ರೀಟ್‌ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನೋಂದಣಿಗೆ ಅವಕಾಶವಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next