Advertisement

ಎಸ್.ಆರ್. ವಿಶ್ವನಾಥ್ ಗೆ ಸ್ಕೆಚ್: ಆಣೆ ಪ್ರಮಾಣಕ್ಕೆ ಕರೆದ ಆರೋಪಿ ಗೋಪಾಲಕೃಷ್ಣ

07:39 PM Dec 03, 2021 | Team Udayavani |

ಬೆಂಗಳೂರು : ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಕೊಲೆಗೆ ಸಂಚು ಆರೋಪಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕ ಗೋಪಾಲಕೃಷ್ಣ ಅವರು ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಆಣೆ ಪ್ರಮಾಣಕ್ಕೆ ಆಹ್ವಾನ ನೀಡಿದ್ದಾರೆ.

Advertisement

ನನ್ನ ಮನೆ ದೇವರು ವೆಂಕಟರಮಣ ಸ್ವಾಮಿ, ವಿಶ್ವನಾಥ್ ಈಗ ಟಿಟಿಡಿ ಮೆಂಬರ್ ಆಗಿದ್ದಾರೆ.ನಾನು ಬರ್ತೇನೆ, ಅವರು ಮೂವರೂ ಬರಲಿ, ಆಣೆ ಮಾಡಲಿ ಎಂದರು.

ಈಗ ವೈರಲ್ ಆಗಿರೋ ವೀಡಿಯೋ 80% ಎಡಿಟೆಡ್.ಆ ವೀಡಿಯೋದಲ್ಲಿರುವಂತೆ ನಾನು ಮಾತೇ ಆಡಿಲ್ಲ.ಈಗ ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಎಡಿಟ್ ಮಾಡಿ ಏನು ಮಾಡುತ್ತಾರೆ ಅಂತ ನಿಮಗೇ ಗೊತ್ತಲ್ಲ. ನಾನು ಆ ರೀತಿ ಏನೂ ಮಾತಾಡೇ ಇಲ್ಲ. ಆ ವೀಡಿಯೋದಲ್ಲಿರೋ ಮಾತು ನನ್ನದಲ್ಲ. ಕೊಲೆ ಸಂಚಿನ ವಿಷಯ ನಾನು ಮಾತನಾಡಿಲ್ಲ, ಜಮೀನಿನ ವಿಷಯ ಮಾತ್ರ ಮಾತಾಡಿದ್ದೇನೆ. ನನ್ನನ್ನು ಟ್ರಾಪ್ ಮಾಡಲಾಗಿದೆ ಎಂದರು.

ನನಗೂ ವಿಶ್ವನಾಥ್ ಗೂ ಯಾವುದೇ ಸಂಬಂಧ ಇಲ್ಲ, ವಿಶ್ವನಾಥ್ ರೆಡ್ಡಿ, ನಾನು ಯಾದವ ನಮಗೂ ಅವರಿಗೂ ಯಾವುದೇ ಸಂಬಂಧ ಇಲ್ಲ, ಯಾವ ವ್ಯವಹಾರವೂ ಇಲ್ಲ ಎಂದರು.

ಮೂರು ನಾಲ್ಕು ದಿನದಿಂದ ಎಲ್ಲಾ ಮಾದ್ಯಮಗಳಲ್ಲಿ ಎಲ್ಲಾ ಪಾರದರ್ಶಕವಾಗಿ ತೋರಿಸುತ್ತಿದ್ದೀರಿ. ಯಾವ ರೀತಿ ಟ್ರ್ಯಾಪ್ ಮಾಡಿದಾರೆ ಅಂತ ನೀವೇ ನೋಡ್ತಿದ್ದೀರಿ. ಇತ್ತೀಚಿಗೆ ದೇವರಾಜ್ ಎಂಬ ಹುಡುಗ ಕಾಲ್ ಮಾಡಿ ನನ್ನ ಹೊಟೇಲ್ ಗೆ ಕರೆದಿದ್ದ, ಅಲ್ಲೇ ಒಟ್ಟಿಗೇ ಊಟ ಮಾಡಿದ್ದೆವು
ಸೆಂದಿಲ್ ಹಾಗೂ ನಾಗರಾಜ್ ಅಲ್ಲಿಗೆ ಸಿಸಿಬಿಯವರ ಕರೆಸಿದ್ದರು. ಸಿಸಿಬಿಯವರು ನಮ್ಮನ್ನು ಕರೆಸಿ ಪ್ರಶ್ನೆ ಮಾಡಿದ್ದರು, ನಾವು ಎಲ್ಲಾ ಉತ್ತರ ಕೊಟ್ಟೆವು. ಮರುದಿನ ಎಸ್.ಆರ್. ವಿಶ್ವನಾಥ್ ನನ್ನ ವಿರುದ್ಧ ದೂರು ಕೊಟ್ಟರು ಎಂದರು.

Advertisement

ಎಲೆಕ್ಷನ್ ನಲ್ಲಿ ಗೋಪಾಲಕೃಷ್ಣ ಮೂರನೇ ಸ್ಥಾನಕ್ಕೆ ಹೋಗಿದ್ದರು ಅಂತ ಎಸ್.ಆರ್. ವಿಶ್ವನಾಥ್ ಹೇಳುತ್ತಾರೆ. ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ವಿಶ್ವನಾಥ್ ಪತ್ನಿ ಸೋತು ಎಷ್ಟನೇ ಸ್ಥಾನಕ್ಕೆ ಹೋಗಿದ್ದರು ಎಂದು ಪ್ರಶ್ನಿಸಿದರು.

ನಾನೊಬ್ಬ ಹಿಂದುಳಿದ ವರ್ಗಕ್ಕೆ ಸೇರಿದವನು, ಯಲಹಂಕದಲ್ಲಿ ಶಾಸಕರದ್ದೇನೂ ನಡೆಯುವುದಿಲ್ಲ, ಸತೀಶ್ ಅವರದ್ದೇ ಎಲ್ಲಾ ನಡೆಯುತ್ತಿರುವುದು. ಸತೀಶ್ ಅವರದ್ದೇ ಇದೆಲ್ಲ ಪ್ಲಾನ್ ಎಂದರು.

ನಾವು ನಮ್ಮ ಕುಟುಂಬದವರು ಮೂರು ದಿನದಿಂದ ಊಟ ಮಾಡಿಲ್ಲ, ನಮ್ಮ ತೇಜೋವಧೆ ಮಾಡಿದ್ದಾರೆ.
ನಿನ್ನೆ ರಾಜಾನುಕುಂಟೆ ಠಾಣೆ ಪೊಲೀಸರು ವಿಚಾರಣೆಗೆ ಬರುವಂತೆ ನೋಟೀಸ್ ಕೊಟ್ಟರು. ನಾನು ಓಡಿ ಹೋಗಿಲ್ಲ, ನನಗೆ ನ್ಯಾಯಾಲಯ ಜಾಮೀನು ಕೊಟ್ಟಿದೆ ಎಂದು ಗೋಪಾಲಕೃಷ್ಣ ಹೇಳಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next