Advertisement

ರಾಜ್ಯ ಮಟ್ಟದ ಚಾಂಪಿಯನ್‌ಶಿಪ್‌ಗೆ ಆಯ್ಕೆ

04:28 PM Feb 22, 2021 | Team Udayavani |

ದಾವಣಗೆರೆ: ಮೈಸೂರಿನಲ್ಲಿ ಮಾ.4 ರಿಂದ 7ರ ವರೆಗೆ ನಡೆಯಲಿರುವ 36ನೇ ರಾಜ್ಯ ಮಟ್ಟದ ರೋಲರ್‌ ಸ್ಕೇಟಿಂಗ್‌ ಚಾಂಪಿಯನ್‌ಶಿಪ್‌ಗೆ ಜಿಲ್ಲೆಯ ವಿವಿಧ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.

Advertisement

5 ರಿಂದ 7 ನೇ ವಯೋಮಾನ ಬಾಲಕರ ವಿಭಾಗದಲ್ಲಿ ಎನ್‌. ಸಾತ್ವಿಕ್‌ ನಾಯಕ್‌, ಶ್ರೇಯಸ್‌ ಕಲ್ಲಾಪುರ್‌, 7 ರಿಂದ 9 ವಯೋಮಾನದ ಬಾಲಕಿಯರ ವಿಭಾಗದಲ್ಲಿ ಎಚ್‌.ಎಸ್‌. ದಿಷಿತಾ, ಫಲಕ್‌ ನಿಗಾರ್‌, ಬಾಲಕರ ವಿಭಾಗದಲ್ಲಿ ಶಾಶ್ವತ್‌ ವಿಶ್ವಕರ್ಮ, ಆಭಯ್‌ ಪಾಟೀಲ್‌, 11 ರಿಂದ 14 ನೇ ವಯೋಮಾನ ಬಾಲಕರ ವಿಭಾಗದಲ್ಲಿ ವಿ.ಜೆ. ಅಭಿರಾಮ್‌,ಎನ್‌. ದೈವಿಕ್‌ ನಾಯಕ್‌,ಎ. ತಾರೇಶ್‌, 14 ರಿಂದ 17 ವಯೋಮಾನದ ಬಾಲಕಿಯರ ವಿಭಾಗದಲ್ಲಿ ಟಿ.ಎನ್‌. ಸ್ನೇಹ, ಬಾಲಕರ ವಿಭಾಗದಲ್ಲಿ ಟಿ. ಹರಿ ಕಾರ್ತಿಕ್‌, ಆರ್ಯನ್‌ ಅದಿತ್ಯ, ಮನೋಜ್‌ ಮತ್ತೂರ್‌, 30 ವರ್ಷದ ಮೇಲ್ಪಟ್ಟ ಪುರುಷರ (ಮಾಸ್ಟರ್‌) ವಿಭಾಗದಲ್ಲಿ ಎ.ಜಿ. ಮಧು ಆಯ್ಕೆಯಾಗಿದ್ದಾರೆ.

ರಾಜ್ಯ  ಮಟ್ಟಕ್ಕೆಆಯ್ಕೆಯಾದವರು ಮಾ. 31 ದ ಏ. 10 ರವರೆಗೆ ಮೊಹಾಲಿಯಲ್ಲಿ ನಡೆಯಲಿರುವ 58ನೇ ರಾಷ್ಟ್ರ ಮಟ್ಟದ ರೋಲರ್‌ ಸ್ಕೇಟಿಂಗ್‌ ಚಾಂಪಿಯನ್‌ ಶಿಪ್‌ನಲ್ಲಿ ಭಾಗವಹಿಸಲಿದ್ದಾರೆ ಎಂದು ನ್ಯೂ ದಾವಣಗೆರೆ ಡಿಸ್ಟ್ರಿಕ್‌ ರೋಲರ್‌ ಸ್ಕೇಟಿಂಗ್‌ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ನಿರಂಜನ ಬಾಬು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next