Advertisement

ಸ್ಕೇಟಿಂಗ್‌ ನೃತ್ಯ-ಕವಾಯತು

04:48 PM May 10, 2019 | Team Udayavani |

ಶಿರಸಿ: ಇಲ್ಲಿನ ಅದ್ವೈತ ಸ್ಕೇಟರ್ಸ್‌ ಆ್ಯಂಡ್‌ ನ್ಪೋರ್ಟ್ಸ್ ಕ್ಲಬ್‌ನವರು ಸಂಘಟಿಸಲಾಗಿದ್ದ ಬೇಸಿಗೆ ಶಿಬಿರದಲ್ಲಿ ಸ್ಕೇಟಿಂಗ್‌ ತರಬೇತಿ ಪಡೆದ ಮಕ್ಕಳು ನಡೆಸಿಕೊಟ್ಟ ಒಂದೇ ಮಾತರಂ ನೃತ್ಯ ಹಾಗೂ ಕವಾಯತು ನೋಡುಗರ ಮನದಲ್ಲಿ ರೋಮಾಂಚನವನ್ನುಂಟು ಮಾಡಿತು.

Advertisement

ಕಾಲಿಗೆ ಸ್ಕೇಟಿಂಗ್‌ ಕಟ್ಟಿಕೊಂಡಿಯೇ ಒಂದೇ ಮಾತರಾಂ ಹಾಡಿಗೆ ಹೆಜ್ಜೆ ಹಾಕಿದ ಮಕ್ಕಳ ದೃಶ್ಯ ಅದ್ಬುತವಾಗಿತ್ತು. ಸುಮಾರು 150ಕ್ಕೂ ಹೆಚ್ಚಿನ ಮಕ್ಕಳು ಈ ಹಾಡಿಗೆ ಹೆಜ್ಜೆ ಹಾಕಿದರು. ಕವಾಯತು ಕೂಡಾ ಒಂದಕ್ಕಿಂತ ಒಂದು ನೋಡುಗರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿತು. ಅದರಲ್ಲಿಯೂ ಮುಖ್ಯವಾಗಿ ಚಿಕ್ಕ ಚಿಕ್ಕ ಮಕ್ಕಳು ಬೆಂಕಿಯಿಂದ ಪಾರಾಗುತಿದ್ದ ದೃಶ್ಯವಂತೂ ಮಕ್ಕಳ ಸ್ಕೆಟಿಂಗ್‌ ಜಾಣ್ಮೆಗೆ ಹಿಡಿದಗನ್ನಡಿಯಾಗಿತ್ತು. ಇವೆಲ್ಲ ದೃಶ್ಯವನ್ನು ನೋಡಲು ಪಾಲಕರು ಸೇರಿದಂತೆ ಅನೇಕ ಜನರು ಪಾಲ್ಗೊಂಡು ಮಕ್ಕಳ ಪ್ರತಿಭೆ ನೋಡಿ ಚಪ್ಪಾಳೆ ತಟ್ಟಿದರು. ಹುಬ್ಬಳ್ಳಿ ರಸ್ತೆಯಲ್ಲಿರುವ ಗಾಳಿ ಮಾಸ್ತಿ ದೇವಸ್ಥಾನದ ಪಕ್ಕದ ಖಾಲಿ ಜಾಗದಲ್ಲಿ ಆಯೋಜಿಸಲಾಗಿದ್ದ ಸ್ಕೇಟಿಂಗ್‌ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಉಪವಿಭಾಗಾಧಿಕಾರಿ ಈಶ್ವರ ಉಳ್ಳಾಗಡ್ಡಿ, ಮಕ್ಕಳು ಸ್ಕೆಟಿಂಗ್‌ನಲ್ಲಿ ಬ್ಯಾಲೆನ್ಸ್‌ ಕಂಡುಕೊಂಡಂತೆ ಜೀವನದಲ್ಲಿಯೂ ಬ್ಯಾಲೆನ್ಸಿಂಗ್‌ ಮಾಡಿ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.

ಡಿವೈಎಸ್‌ಪಿ ಭಾಸ್ಕರ್‌ ವಿ.ಜಿ., ಲಯನ್ಸ್‌ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಂ.ಎಂ. ಭಟ್, ಸ್ಕೇಟಿಂಗ್‌ನ ರಾಜ್ಯಮಟ್ಟದ ತರಬೇತಿದಾರ ದಿಲೀಪ್‌ ಹಣಬರ್‌ ಮಾತನಾಡಿದರು.

ಸಹಾಯಕ ಯುವಜನ ಸೇವಾ ಕ್ರೀಡಾಧಿಕಾರಿ ಕಿರಣ ನಾಯ್ಕ, ನಗರಸಭೆ ಸದಸ್ಯೆ ವೀಣಾ ಶೆಟ್ಟಿ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜೆ.ಆರ್‌. ಸಂತೋಷಕುಮಾರ, ಅದ್ವೈತ ಸ್ಕೇಟಿಂಗ್‌ ಆ್ಯಂಡ್‌ ನ್ಪೋರ್ಟ್ಸ್ ಕ್ಲಬ್‌ ಅಧ್ಯಕ್ಷ ಕಿರಣಕುಮಾರ, ಕಾರ್ಯದರ್ಶಿ ಗೌರಿ ಲೋಕೇಶ್‌ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next