Advertisement
ಇದೇ ವೇಳೆ ಕೆ.ಆರ್.ಪುರದಿದ ಬೈರತಿ ಬಸವರಾಜ್ ಮತ್ತು ಚಿಕ್ಕಪೇಟೆ ಕ್ಷೇತ್ರದಿಂದ ಆರ್.ವಿ.ದೇವರಾಜ್ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಆರ್.ಅಶೋಕ್ ಅವರು ಪದ್ಮನಾಭನಗರದಲ್ಲಿರುವ ಚೆನ್ನಮ್ಮನ ಕೆರೆ ಅಂಗಳದಲ್ಲಿರುವ ಬಿಬಿಎಂಪಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರೆ, ಬಿ.ಎನ್. ವಿಜಯಕುಮಾರ್ ಅವರು ಜಯನಗರ ಬಿಡಿಎ ಕಾಂಪ್ಲೆಕ್ಸ್‌ನಲ್ಲಿರುವ ಚುನಾವಣಾಧಿಕಾರಿ ಕಚೇರಿಯಲ್ಲಿ ಉಮೇದುವಾರಿಕೆ ಸಲ್ಲಿಸಿದರು.
Related Articles
ಬೆಂಗಳೂರು: ಹೆಬ್ಟಾಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ವೈ.ಎ. ನಾರಾಯಣಸ್ವಾಮಿ ಅವರ ಒಟ್ಟು ಆಸ್ತಿ ಮೌಲ್ಯ 19.24 ಕೋಟಿ ರೂ. ಗುರುವಾರ ಚುನಾವಣಾಧಿಕಾರಿಗೆ ಸಲ್ಲಿಸಿದ ನಾಮಪತ್ರದೊಂದಿಗೆ ತಮ್ಮ ಆಸ್ತಿ ವಿವರ ಸಲ್ಲಿಸಿರುವ ಅವರು, 3,26,15,924 ರೂ. ಚರಾಸ್ತಿ ಹಾಗೂ 15.98 ಕೋಟಿ ಮೌಲ್ಯದ ಸ್ಥಿರಾಸ್ತಿ ಸೇರಿ ಒಟ್ಟಾರೆ 19.24 ಕೋಟಿ ರೂ. ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.
Advertisement
2014ರಲ್ಲಿ ನಾರಾಯಣಸ್ವಾಮಿ ಅವರ ಆಸ್ತಿ 5.38 ಕೋಟಿ ಆಗಿತ್ತು. ಆಸ್ತಿ ಪೈಕಿ ಅವರ ಬಳಿ 13.06 ಲಕ್ಷ ನಗದು ಮತ್ತು ಅವರ ಪತ್ನಿ ಉಷಾನಂದಿನಿ ಅವರ ಬಳಿ 8 ಲಕ್ಷ ನಗದು ಇದೆ. 2.5 ಕೆಜಿ ಚಿನ್ನ ಹಾಗೂ ಚಿನ್ನಾಭರಣ, 10 ಕೆಜಿ ಹೊಂದಿದ್ದಾರೆ.
ರ್ಯಾಡೊ ಮತ್ತು ರೊಲೆಕ್ಸ್ ವಾಚ್‌ಗಳು ನಾರಾಯಣಸ್ವಾಮಿ ಬಳಿ ಇದ್ದು, ಅದರ ಮೌಲ್ಯ 9 ಲಕ್ಷ ರೂ. ಆಗುತ್ತದೆ. ಕೃಷಿ ಮತ್ತು ಕೃಷಿಯೇತರ ಜಮೀನು ಹೊಂದಿದ್ದಾರೆ. ಇದರೊಂದಿಗೆ ವಿವಿಧ ಬ್ಯಾಂಕ್‌ಗಳಲ್ಲಿ 3.04 ಕೋಟಿ ಸಾಲ ಅವರ ಮೇಲಿದೆ. ಮಗ ಆದಿತ್ಯ ಆರ್ಯನ್ ಹೆಸರಿನಲ್ಲಿ 18.88 ಲಕ್ಷ ರೂ. ಹಾಗೂ ಮತ್ತೂಬ್ಬ ಮಗ ರೋಹಿತ್ ಹೆಸರಿನಲ್ಲಿ 4.85 ಲಕ್ಷ ಚರಾಸ್ತಿ ಇದೆ.
ಆಸ್ತಿ ವಿವರ-21.06 ಲಕ್ಷ ಕೈಯಲ್ಲಿರುವ ನಗದು (ಪತ್ನಿಯದ್ದು ಸೇರಿ)
-2.5 ಕೆಜಿ ಚಿನ್ನಾಭರಣ
-10 ಕೆಜಿ ಬೆಳ್ಳಿ
-3.26 ಕೋಟಿ ರೂ. ಚರಾಸ್ತಿ
-15.98 ಕೋಟಿ ಮೌಲ್ಯದ ಸ್ಥಿರಾಸ್ತಿ ಎಸ್.ಆರ್. ವಿಶ್ವನಾಥ್ ಆಸ್ತಿ 42.45 ಕೋಟಿ ರೂ.
ಬೆಂಗಳೂರು: ಯಲಹಂಕ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಎಸ್.ಆರ್. ವಿಶ್ವನಾಥ್ ಅವರ ಒಟ್ಟು ಆಸ್ತಿ ಮೌಲ್ಯ 42.45 ಕೋಟಿ ರೂ. ಗುರುವಾರ ಚುನಾವಣಾಧಿಕಾರಿಗೆ ಸಲ್ಲಿಸಿದ ನಾಮಪತ್ರದೊಂದಿಗೆ ತಮ್ಮ ಆಸ್ತಿ ವಿವರವನ್ನೂ ನೀಡಿದ್ದು, ಅದರಲ್ಲಿ ಅವರು 2,08,79,002 ರೂ. ಚರಾಸ್ತಿ ಹಾಗೂ 40.37 ಕೋಟಿ ರೂ. ಸ್ಥಿರಾಸ್ತಿ ಸೇರಿ ಒಟ್ಟಾರೆ 42.45 ಕೋಟಿ ರೂ. ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಒಟ್ಟಾರೆ ಆಸ್ತಿ ಪೈಕಿ ವಿಶ್ವನಾಥ್ ಅವರ ಬಳಿ 6 ಲಕ್ಷ ನಗದು ಹಾಗೂ ಅವರ ಪತ್ನಿ ವಾಣಿಶ್ರೀ ಅವರ ಬಳಿ 4 ಲಕ್ಷ ನಗದು ಇದೆ. ಇನ್ನು 5.35 ಕೆಜಿ ಚಿನ್ನ ಹಾಗೂ ಚಿನ್ನಾಭರಣ, 24 ಕೆಜಿ ಬೆಳ್ಳಿ ಹೊಂದಿದ್ದಾರೆ. ಬೆಂಗಳೂರಿನ ವಿವಿಧೆಡೆ ಕೃಷಿ ಮತ್ತು ಕೃಷಿಯೇತರ ಜಮೀನು ಹಾಗೂ ವಸತಿ ಕಟ್ಟಡಗಳು ಇವೆ. ಈ ಮಧ್ಯೆ ವಿಶ್ವನಾಥ್ ಮತ್ತು ಅವರ ಪತ್ನಿ ವಾಣಿಶ್ರೀ ಅವರ ಮೇಲೆ ಕ್ರಮವಾಗಿ 31.90 ಲಕ್ಷ ಹಾಗೂ 35.95 ಲಕ್ಷ ಸಾಲ ಇದೆ. ಪುತ್ರ ಎಸ್.ವಿ. ಅಲೋಕ್ ಮತ್ತು ಪುತ್ರಿ ಎಸ್.ವಿ. ಅಪೂರ್ವ ಹೆಸರಿನಲ್ಲಿ ಬ್ಯಾಂಕ್‌ಗಳಲ್ಲಿ ಅಂದಾಜು 2 ಲಕ್ಷ ರೂ.ವರೆಗೆ ಠೇವಣಿ ಇದೆ. ಆಸ್ತಿ ವಿವರ
-10 ಲಕ್ಷ ಕೈಯಲ್ಲಿರುವ ನಗದು (ಪತ್ನಿಯದ್ದು ಸೇರಿ)
-5.35 ಕೆಜಿ ಚಿನ್ನಾಭರಣ
24 ಕೆಜಿ ಬೆಳ್ಳಿ
-30.59 ಕೋಟಿ ರೂ. ಬೆಲೆ ಬಾಳುವ ಕೃಷಿ ಭೂಮಿ (42ಕ್ಕೂ ಹೆಚ್ಚು ಕಡೆ ತುಂಡು ಭೂಮಿ ಇದೆ)
-3.26 ಕೋಟಿ ಮೌಲ್ಯದ ಕೃಷಿಯೇತರ ಭೂಮಿ
-ಟೊಯೊಟಾ ಇನ್ನೋವ, ಟೊಯೊಟಾ ಫಾಚ್ಯುìನರ್, ಐಸೂಜು ಜೀಪ್, 1 ಟ್ರ್ಯಾಕ್ಟರ್ ಬಿ.ಎನ್. ವಿಜಯಕುಮಾರ್ ಆಸ್ತಿ 4.49 ಕೋಟಿ ರೂ.
ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದಂದ ಬಿಜೆಪಿ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿರುವ ಹಾಲಿ ಶಾಸಕ ಬಿ.ಎನ್. ವಿಜಯಕುಮಾರ್, 1.59 ಕೋಟಿ ರೂ. ಸ್ಥಿರ ಹಾಗೂ 3.20 ಕೋಟಿ ರೂ. ಮೌಲ್ಯದ ಚರಾಸ್ತಿ ಸೇರಿ ಒಟ್ಟು 4.49 ಕೋಟಿ ರೂ. ಮೊತ್ತದ ಆಸ್ತಿ ಘೋಷಿಸಿಕೊಂಡಿದ್ದಾರೆ. 2013ರಲ್ಲಿ ಇವರ ಒಟ್ಟು ಆಸ್ತಿ 1.76 ಕೋಟಿ ರೂ. ಇತ್ತು. ತಮಗೆ 7.70 ಲಕ್ಷ ರೂ. ಆದಾಯವಿದೆ ಎಂದು ಹೇಳಿಕೊಂಡಿರುವ ವಿಜಯಕುಮಾರ್ ಅವರಿಗೆ ಯಾವುದೇ ಸಾಲವಿಲ್ಲ. 3 ಕೋಟಿ ರೂ. ಮೌಲ್ಯದ ಕೃಷಿಯೇತರ ಜಮೀನು, 20 ಲಕ್ಷ ರೂ. ಮೌಲ್ಯದ ವಸತಿ ಕಟ್ಟಡ, 12.18 ಲಕ್ಷ ಮೌಲ್ಯದ ಕಾರು ಹೊಂದಿದ್ದಾರೆ. ದೇವರಾಜ್ ಆಸ್ತಿ ವಿವರ
ಬೆಂಗಳೂರು: ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಆರ್.ವಿ.ದೇವರಾಜ್ 61 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದಾರೆ. ದೇವರಾಜ್ ಹಾಗೂ ಅವರ ಪತ್ನಿ ಬಳಿ 3.433 ಕೆಜಿ ಬಂಗಾರ ಇರುವುದಾಗಿಯೂ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ. ಆಸ್ತಿ ವಿವರ
-ವಾರ್ಷಿಕ ಆದಾಯ 78,35,259 ರೂ.
-ಕೃಷಿ ಆದಾಯ 10,35,715 ರೂ.
-ಪತ್ನಿ ಆದಾಯ 2,96,561 ರೂ.
-ಕೃಷಿ ಆದಾಯ 28,00,000 ರೂ.
-ಕೈಯಲ್ಲಿರುವ ಹಣ 18,01,368 ರೂ.
ಬಿಎಂಡಬು ಕಾರು, ಪತ್ನಿ ಹೆಸರಲ್ಲಿ ಟೊಯೊಟೊ ಫಾರ್ಚುನರ್, ಮಿಟ್ಸುಬಿಸಿ ಪಜೇರೊ ಕಾರ್ ಇದೆ. 2 ಕೆಜಿ 12 ಗ್ರಾಂ ಬಂಗಾರ, ಪತ್ನಿ ಹೆಸರಲ್ಲಿ 1 ಕೆಜಿ 411 ಗ್ರಾಮ್ ಬಂಗಾರ ಸ್ಥಿರಾಸ್ಥಿ-9,90,02,239 ಕೋಟಿ ರೂ. ಪತ್ನಿ ಸ್ಥಿರಾಸ್ಥಿ-3,55,98,552 ಕೋಟಿ ರೂ. ಒಟ್ಟು ಆಸ್ತಿ-54,22,06,323 ಕೋಟಿ ರೂ. ಪತ್ನಿ ಆಸ್ತಿ-7,08,50,084 ಕೋಟಿ ರೂ. ಒಟ್ಟು ಸಾಲ-16,63,26,397ಕೋಟಿ ರೂ. ಪತ್ನಿ ಹೆಸರಲ್ಲಿ ಸಾಲ- 1,19,58,125 ಕೋಟಿ ರೂ. ಬೈರತಿ ಬಸವರಾಜ್ ಆಸ್ತಿ ವಿವರ
ಬೆಂಗಳೂರು: ಕೆ.ಆರ್.ಪುರಂ ಕಾಂಗ್ರೆಸ್ ಅಭ್ಯರ್ಥಿ ಬೈರತಿ ಬಸವರಾಜ್ 90.91 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದು, 10 ಕೆಜಿ ಬಂಗಾರ ಇರುವುದಾಗಿ ತಿಳಿಸಿದ್ದಾರೆ. ವಾರ್ಷಿಕ ಆದಾಯ-27,77,31,712 ಕೋಟಿ ರೂ. ಪತ್ನಿ ಪದ್ಮಾವತಿ ಆದಾಯವಿಲ್ಲ. ಕೈಯಲ್ಲಿರುವ ನಗದು-1,40,760 ರೂ. ಬ್ಯಾಂಕ್ ಠೇವಣಿ-ಜಂಟಿ ಖಾತೆ-10,00,25,000 ಭೂಮಿ ಖರೀದಿಗೆ ವಯಕ್ತಿಕ ಸಾಲ ನೀಡಿರುವುದು-3,77,50,000 3 ಬೆಂಜ್ ಕಾರ್, ಒಂದು ಆಡಿ ಕಾರ್. ಪತ್ನಿ ಹೆಸರಲ್ಲಿ ಒಂದು ಟೊಯೊಟಾ ಫಾರ್ಚುನರ್ ಹಾಗೂ ಇನ್ನೋವಾ ಕಾರು ಇದೆ. ಬಂಗಾರ -10 ಕೆಜಿ 280 ಗ್ರಾಮ್ ಬೆಳ್ಳಿ-62 ಲಕ್ಷ ರೂ. ಮೊತ್ತದ ಬೆಳ್ಳಿ ಆಭರಣ 4 ರಾಡೋ ವಾಚ್, 4 ರೋಲ್ಕ್ ವಾಚ್ ಸ್ಥಿರಾಸ್ಥಿ-56,99,82,215 ಕೋಟಿ ರೂ. ಚರಾಸ್ಥಿ- 33,91,19,722.ಕೋಟಿ ರೂ. ಬ್ಯಾಂಕ್ ಸಾಲ-13,68,67,984 ಕೋಟಿ ರೂ. ಒಟ್ಟು ಆಸ್ತಿ-90,91,01,937 ಕೋಟಿ ಆಸ್ತಿ. 32 ಕೋಟಿ ರೂ. ಒಡೆಯ ಆರ್. ಅಶೋಕ್
ಬೆಂಗಳೂರು: ಪದ್ಮನಾಭನಗರದಿಂದ ಕಣಕ್ಕಿಳಿದಿರುವ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಪ್ರಭಾವಿ ನಾಯಕ ಆರ್. ಅಶೋಕ್, ಒಟ್ಟು 32.03 ಕೋಟಿ ರೂ. ಆಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ. 2013ರಲ್ಲಿ ಅವರು 26.20 ಕೋಟಿ ರೂ. ಆಸ್ತಿ ಹೊಂದಿದ್ದರು. ನಾಮಪತ್ರದ ಜೊತೆಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಮ್ಮ ಹಾಗೂ ಕುಟುಂಬದ ಆಸ್ತಿ ವಿವರನ್ನು ಸಲ್ಲಿಸಿರುವ ಆರ್. ಅಶೋಕ್, 2.97 ಕೋಟಿ ಚರಾಸ್ತಿ ಮತ್ತು 29.06 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಇದೇ ವೇಳೆ 17.32 ಲಕ್ಷ ರೂ. ಆದಾಯ ಇದ್ದು, 1.86 ಕೋಟಿ ರೂ. ಸಾಲ ಇದೆ ಎಂದು ಹೇಳಿಕೊಂಡಿದ್ದಾರೆ. ಇದಲ್ಲದೇ ಪತ್ನಿಯ ಹೆಸರಲ್ಲಿ 75.51 ಲಕ್ಷ ಸ್ಥಿರ ಹಾಗೂ 7.82 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ ಎಂದು ಮಾಹಿತಿ ನೀಡಿದ್ದಾರೆ. ವಿವಿಧ ಬ್ಯಾಂಕುಗಳಲ್ಲಿ ಲಕ್ಷಾಂತರ ರೂ. ಮೊತ್ತದ ಠೇವಣಿ ಹೊಂದಿರುವ ಅಶೋಕ್ ಅವರ ಬಳಿ 14 ಲಕ್ಷ ರೂ. ಮೌಲ್ಯದ ಟೊಯೋಟಾ ಇನ್ನೋವಾ, 24.20 ಲಕ್ಷ ರೂ. ಮೌಲ್ಯದ ಟೊಯೋಟಾ ಇನ್ನೋವಾ ಕ್ರಿಸ್ಟಾ ಕಾರುಗಳು ಇವೆ. 11.60 ಲಕ್ಷ ರೂ ಮೌಲ್ಯದ ಬಂಗಾರ ಮತ್ತು 5.50 ಲಕ್ಷ ರೂ. ಮೌಲ್ಯದ ಬೆಳ್ಳಿ ಆಭರಣಗಳನ್ನು ಅಶೋಕ್ ಹೊಂದಿದ್ದಾರೆ. ಯಲಹಂಕ ಹೋಬಳಿಯ ಸಿಂಗಾಪುರದ ವಿವಿಧ ಸರ್ವೆ ನಂಬರ್‌ಗಳಲ್ಲಿ ಮತ್ತು ತಿಂಡ್ಲು ಗ್ರಾಮದಲ್ಲಿ ಕೋಟ್ಯಾಂತರ ಮೌಲ್ಯದ ಕೃಷಿ ಜಮೀನು, ಜಾಲಹಳ್ಳಿಯಲ್ಲಿ 58 ಲಕ್ಷ ರೂ. ಮೌಲ್ಯದ ವಾಣಿಜ್ಯ ಕಟ್ಟಡ, 3 ಕೋಟಿ ರೂ, ಮೌಲ್ಯದ ವಸತಿ ಸಂಕೀರ್ಣ ಹೊಂದಿದ್ದಾರೆ.