Advertisement

Congress ದೇಶದ್ರೋಹಿಗಳನ್ನು ರಕ್ಷಿಸುವುದು ಆರನೇ ಗ್ಯಾರಂಟಿ: ವಿಜಯೇಂದ್ರ

06:42 PM Feb 28, 2024 | Shreeram Nayak |

ಶಿವಮೊಗ್ಗ: ದೇಶದ್ರೋಹಿಗಳನ್ನು ಹಿಡಿಯಿರಿ ಅಂದರೆ ಹೋರಾಟ ಮಾಡಿದ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಈ ಮೂಲಕ ದೇಶದ್ರೋಹಿಗಳನ್ನು ರಕ್ಷಣೆ ಮಾಡುವ ಆರನೇ ಗ್ಯಾರಂಟಿಯನ್ನು ಸರ್ಕಾರ ಘೋಷಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ಧಾಳಿ ನಡೆಸಿದರು.

Advertisement

ಶಿಕಾರಿಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಕ್ಕೆ ಮಾನ-ಮರ್ಯಾದೆ ಇದ್ದರೆ ಪಾಕ್‌ ಪರ ಘೋಷಣೆ ಕೂಗಿದವರನ್ನು ಅಲ್ಲಿಯೇ ಬಂಧಿಸಬೇಕಿತ್ತು. ಇದರಲ್ಲಿ ತನಿಖೆ ಮಾಡೋದು ಏನಿದೆ.

ದೇಶದ್ರೋಹಿಗಳನ್ನು ಬಂಧಿಸಲು ಯೋಚನೆ ಮಾಡಬೇಕಾ? ನಾಸೀರ್‌ ಹುಸೇನ್‌ ರಾಜ್ಯಸಭಾ ಸದಸ್ಯರಾದ ತಕ್ಷಣ ಈ ರೀತಿ ಘಟನೆ ನಡೆದಿದೆ ಅಂದರೆ ಮುಂದೆ ಇನ್ನೇನು ಗಂಡಾಂತರ ಕಾದಿದೆಯೋ ಗೊತ್ತಿಲ್ಲ. ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ ದೇಶದ್ರೋಹಿಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂದರು.

ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಅಂಗ. ಅವರ ಮೇಲೆ ದಬ್ಟಾಳಿಕೆ ಮಾಡೋದು ಸರಿಯಲ್ಲ. ಸರ್ಕಾರ ಯಾವ ಮಟ್ಟಕ್ಕೂ ಇಳಿಯುತ್ತದೆ ಅನ್ನೋದಕ್ಕೆ ಇದು ಸಾಕ್ಷಿ. ಈ ಘಟನೆಯಿಂದ ರಾಜ್ಯದ ಜನರು ತಲೆತಗ್ಗಿಸುವಂತಾಗಿದೆ.

ಪ್ರಕಾಶ್‌ ರೈ ಒಬ್ಬ ಅಯೋಗ್ಯ. ಅಯೋಗ್ಯರ ಮಾತಿಗೆ ಉತ್ತರ ನೀಡಬೇಕಿಲ್ಲ. ಮೋದಿ ಅವರನ್ನು ದೇಶದ ಎಲ್ಲಾ ಜನ ಒಪ್ಪಿಕೊಂಡಿದ್ದಾರೆ. ಖರ್ಗೆಯವರೇ 400ಕ್ಕೂ ಹೆಚ್ಚು ಸ್ಥಾನ ಬಿಜೆಪಿ ಗೆಲ್ಲುತ್ತದೆ, ಮೋದಿ ಮತ್ತೊಮ್ಮೆ ಪ್ರಧಾನಿಯಾಗ್ತಾರೆ ಅಂತ ಹೇಳಿದ್ದಾರೆ. ದೇಶದ ಭವಿಷ್ಯದ ದೃಷ್ಟಿಯಿಂದ ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕೆಂದು ಜನ ತೀರ್ಮಾನ ಮಾಡಿದ್ದಾರೆ. ಈ ರೀತಿಯ ಉಡಾಫೆಯಾಗಿ ಮಾತಾನಾಡುವವರಿಗೆ ಜನರೇ ಉತ್ತರ ನೀಡುತ್ತಾರೆ ಎಂದರು.

Advertisement

ರಾಜ್ಯಸಭೆಗೆ ಐದನೇ ಅಭ್ಯರ್ಥಿ ಹಾಕಿದ್ದು ಸರಿ ಇದೆ. ಅದಕ್ಕೆ ಕಾರಣ ಇದೆ. ಮುಂದೆ ಎಲ್ಲವೂ ಗೊತ್ತಾಗುತ್ತದೆ. ರಾಜ್ಯ ಸರ್ಕಾರದ ನಡೆ ರೈತರು , ಬಡವರು, ದಲಿತ ವಿರೋಧಿಯಾಗಿದೆ. ನುಡಿದಂತೆ ನಡೆದಿದ್ದೇವೆ ಅಂತಾರೆ. ಆದರೆ ಬಡವರ ವಿರೋ ಧಿಯಾಗಿ ನಡೆದುಕೊಳ್ಳುತ್ತಿದ್ದಾರೆ. ವಿದ್ಯುತ್‌ ಉಚಿತ ನೀಡಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಟ್ರಾನ್ಸ್‌ಫಾರ್ಮರ್‌ ಬೆಲೆ ನಮ್ಮ ಸರ್ಕಾರ ಇದ್ದಾಗ 25 ಸಾವಿರ ಇತ್ತು, ಇದೀಗ 3 ಲಕ್ಷ ಆಗಿದೆ. ಒಂದು ಕಡೆ ಕೊಟ್ಟು, ಮತ್ತೊಂದು ಕಡೆ ಹೆಚ್ಚು ಹಣ ಕಿತ್ತುಕೊಳ್ಳುತ್ತಿದ್ದಾರೆ. ಎಸ್‌.ಟಿ.ಸೋಮಶೇಖರ್‌ ಹಾಗೂ ಹೆಬ್ಬಾರ್‌ ನಡೆಯಿಂದ ಆತಂಕಗೊಂಡಿಲ್ಲ. ಇವರ ನಡವಳಿಕೆ ನಿರೀಕ್ಷೆ ಮಾಡಿದ್ದೆವು. ಇದರ ಬಗ್ಗೆ ಹೈಕಮಾಂಡ್‌ ಜತೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ.

ಈಗಾಗಲೇ ವರಿಷ್ಠರ ಸಂಪರ್ಕದಲ್ಲಿದ್ದೇವೆ. ಲೋಕಸಭೆ ಟಿಕೆಟ್‌ ಹಂಚಿಕೆ ಕುರಿತಂತೆ ಈಗಾಗಲೇ ಚರ್ಚೆ ನಡೆದಿದ್ದು 2-3 ದಿನದಲ್ಲಿ ಟಿಕೆಟ್‌ ಘೋಷಣೆ ಆಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next