Advertisement

ರೋಹಿತ್ ಹಿಟ್ ಮ್ಯಾನ್ ಆಗಿ ಬದಲಾದ ಆ ಸಾಧನೆಗೆ ಆರು ವರ್ಷ

12:43 PM Nov 03, 2019 | Team Udayavani |

ಮುಂಬೈ: ಟೀಂ ಇಂಡಿಯಾದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಅವರು ಏಕದಿನ ಕ್ರಿಕೆಟ್ ನ ಚೊಚ್ಚಲ ದ್ವಿಶತಕ ಬಾರಿಸಿ ಇಂದಿಗೆ ಆರು ವರ್ಷ. ಆಸೀಸ್ ವಿರುದ್ದದ ಪಂದ್ಯದಲ್ಲಿ ರೋಹಿತ್ ಮೊದಲ ಸಲ ದ್ವಿಶತಕದ ಮೈಲಿಗಲ್ಲು ನೆಟ್ಟಿದ್ದರು.

Advertisement

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2013 ನವೆಂಬರ್ 2 ರಂದು ನಡೆದ ಪಂದ್ಯದಲ್ಲಿ ರೋಹಿತ್ ಈ ಸಾಧನೆ ಮಾಡಿದ್ದರು. ಆಸೀಸ್ ಬೌಲರ್ ಗಳ ದಾಳಿಯನ್ನು ಹಣ್ಣುಗಾಯಿ ನೀರುಗಾಯಿ ಮಾಡಿದ್ದ ರೋಹಿತ್ 12 ಬೌಂಡರಿ ಮತ್ತು 16 ಸಿಕ್ಸರ್ ಬಾರಿಸಿದ್ದರು.

ಕೇವಲ 158 ಎಸೆತಗಳಲ್ಲಿ 209 ರನ್ ಸಿಡಿಸಿದ್ದ ರೋಹಿತ್ ಈ ‘ಹಿಟ್’ ಬ್ಯಾಟಿಂಗ್ ಸಾಹಸದಿಂದ ಭಾರತ ತಂಡ 383 ರನ್ ಗಳಿಸಿತ್ತು. ಮತ್ತು ಆ ಪಂದ್ಯವನ್ನು ಗೆದ್ದುಕೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next