Advertisement

J-K ; LeT ಉಗ್ರರ ಆರು ಮಂದಿ ಸಹಚರರ ಬಂಧನ

04:42 PM Aug 10, 2023 | Team Udayavani |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಮತ್ತು ಬುದ್ಗಾಮ್ ಜಿಲ್ಲೆಗಳಲ್ಲಿ ಆರು ಲಷ್ಕರ್-ಎ-ತೊಯ್ಬಾ (LeT) ಉಗ್ರರ ಸಹಚರರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

Advertisement

ಉತ್ತರ ಕಾಶ್ಮೀರದ ಬಾರಾಮುಲ್ಲಾದ ಉರಿ ಪ್ರದೇಶದಲ್ಲಿ ಭಯೋತ್ಪಾದನಾ ಘಟಕವನ್ನು ಪತ್ತೆಹಚ್ಚಲಾಗಿದ್ದು,ಎಲ್ಇಟಿ ಉಗ್ರರ ಮೂವರು ಸಹಚರರನ್ನು ಬಂಧಿಸಲಾಗಿದೆ. ಸುಳಿವಿನ ಮೇರೆಗೆ ಭದ್ರತಾ ಪಡೆಗಳು ಜಂಟಿ ಗಸ್ತು ತಿರುಗುತ್ತಿದ್ದ ವೇಳೆ ಓರ್ವ ಶಂಕಿತ ನನ್ನು ಬಂಧಿಸಿದರು. ಬಳಿಕ ಎರಡು ಗ್ರೆನೇಡ್‌ಗಳು, ಒಂದು ಚೈನೀಸ್ ಪಿಸ್ತೂಲ್, ಒಂದು ಪಿಸ್ತೂಲ್ ಮ್ಯಾಗಜೀನ್ ಮತ್ತು ನಾಲ್ಕು ಲೈವ್ ರೌಂಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲು ಬಂಧಿಸಿದ ಶಂಕಿತ ಉರಿಯ ಚುರುಂದಾ ಪ್ರದೇಶದ ನಿವಾಸಿ ಶೋಕತ್ ಅಲಿ ಅವನ್ ಎಂಬಾತನಾಗಿದ್ದು, ವಿಚಾರಣೆಯ ಸಮಯದಲ್ಲಿ, ತನ್ನ ಸಹಚರರಾದ ಅಹ್ಮದ್ ದಿನ್ ಮತ್ತು ಮೊಹಮ್ಮದ್ ಸಾದೀಕ್ ಖತಾನಾ ಅವರ ಹೆಸರನ್ನು ಬಹಿರಂಗಪಡಿಸಿದ್ದಾನೆ.

ಖಾನ್ಸಾಹಬ್ ಪ್ರದೇಶದಲ್ಲಿ ಕ್ರೆಮ್‌ಶೋರಾ ನಿವಾಸಿ ಖೈಸರ್ ಅಹ್ಮದ್ ದಾರ್ ಮತ್ತು ಅಕಿಬ್ ರಶೆದ್ ಗನಿ ಎಂಬವರನ್ನು ಬಂಧಿಸಲಾಗಿದೆ. ಇಬ್ಬರೂ ವಾಗರ್ ನಿವಾಸಿಗಳಾಗಿದ್ದು ಅವರ ವಶದಿಂದ ಚೀನಾದ ಹ್ಯಾಂಡ್ ಗ್ರೆನೇಡ್, ಎರಡು ಮ್ಯಾಗಜೀನ್‌ಗಳು ಮತ್ತು 57 ಲೈವ್ ರೌಂಡ್‌ಗಳು ಸೇರಿದಂತೆ ದೋಷಾರೋಪಣೆಯ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next