ದಾವಣಗೆರೆ: ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿನ ಆರ್ಭಟ ಜೋರಾಗಿದೆ.
ಬುಧವಾರ ಈ ಮಹಾಮಾರಿಗೆ ಜಿಲ್ಲೆಯಲ್ಲಿ ಒಟ್ಟು ಆರು ಜನರು ಬಲಿಯಾಗಿದ್ದಾರೆ.
ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೆ ಕೋವಿಡ್ 19 ಸೋಂಕಿಗೆ ಬಲಿಯಾದವರ ಸಂಖ್ಯೆ 110ಕ್ಕೆ ಏರಿದೆ.
ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 37 ವರ್ಷದ ವ್ಯಕ್ತಿ (ರೋಗಿ ನಂಬರ್ 175872), 69 ವರ್ಷದ ವೃದ್ಧ (ರೋಗಿ ನಂಬರ್ 176520), 66 ವರ್ಷದ ವೃದ್ಧ (ರೋಗಿ ನಂಬರ್ 181750), 65 ವರ್ಷದ ವೃದ್ಧ (ರೋಗಿ ನಂಬರ್ 184336), 70 ವರ್ಷದ ವೃದ್ಧ (ರೋಗಿ ನಂಬರ್ 193569), 48 ವರ್ಷದ ವ್ಯಕ್ತಿ (ರೋಗಿ ನಂಬರ್ 149207) ಬುಧವಾರದಂದು ಮೃತಪಟ್ಟವರಾಗಿದ್ದಾರೆ. ಇನ್ನೊಂದೆಡೆ, ಬುಧವಾರ ಜಿಲ್ಲೆಯಲ್ಲಿ ದಾಖಲೆ ಪ್ರಮಾಣದಲ್ಲಿ ಕೋವಿಡ್ 19 ಸೋಂಕಿತರು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಇಂದು ಒಂದೇ ದಿನದಲ್ಲಿ ಜಿಲ್ಲೆಯಲ್ಲಿ ಒಟ್ಟು 239 ಜನರಲ್ಲಿ ಸೋಂಕು ಪ್ರಕರಣಗಳು ಪತ್ತೆಯಾಗಿವೆ.
ಇತ್ತ, ಕೋವಿಡ್ 19 ಸೋಂಕಿನಿಂದ ಗುಣಮುಖರಾದ 170 ಜನರು ಆಸ್ಪತ್ರೆಯಿಂದ ಇಂದು ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿನ ಒಟ್ಟು 4077 ಕೋವಿಡ್ 19 ಪ್ರಕರಣಗಳಲ್ಲಿ ಈವರೆಗೆ 2647 ಜನರು ಡಿಸ್ಚಾರ್ಜ್ ಆಗಿದ್ದಾರೆ ಮತ್ತು ಒಟ್ಟು 110 ಜನರು ಮೃತಪಟ್ಟಿದ್ದಾರೆ.
ಸದ್ಯಕ್ಕೆ ಜಿಲ್ಲೆಯಲ್ಲಿ 1320 ಸಕ್ರಿಯ ಕೋವಿಡ್ 19 ಪ್ರಕರಣಗಳಿವೆ.