ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಕೋವಿಡ್-19 ಸೋಂಕು ದೃಢವಾದ ಹಿನ್ನಲೆಯಲ್ಲಿ ಅವರ ಕಾವೇರಿ ನಿವಾಸದ ಎಲ್ಲರಿಗೂ ಸೋಂಕು ತಪಾಸಣೆ ನಡೆಸಲಾಗುತ್ತಿದೆ. ಇದೀಗ ಕಾವೇರಿ ನಿವಾಸದ ಆರು ಮಂದಿಗೆ ಸೋಂಕು ದೃಢವಾಗಿದೆ.
ಮುಖ್ಯಮಂತ್ರಿಗಳ ಕಾವೇರಿ ನಿವಾಸದಲ್ಲಿದ್ದ ಗನ್ ಮ್ಯಾನ್, ಬಾಣಸಿಗ ಮಹಿಳೆ, ವಿಶೇಷ ಕರ್ತವ್ಯಾಧಿಕಾರಿ ವಾಹನದ ಚಾಲಕ ಸೇರಿದಂತೆ ಆರು ಮಂದಿಗೆ ಸೋಂಕು ತಾಗಿರುವುದು ದೃಢವಾಗಿದೆ.
ನಿನ್ನೆ ರಾತ್ರಿ ಸಿಎಂ ಬಿಎಸ್ ವೈ ಟ್ವಿಟ್ ಮಾಡಿ ತಮಗೆ ಕೋವಿಡ್ ಸೋಂಕು ತಾಗಿರುವ ಕುರಿತು ಹೇಳಿಕೊಂಡಿದ್ದರು. ಯಾವುದೇ ಸೋಂಕು ಲಕ್ಷಣಗಳು ಇಲ್ಲದೇ ಇದ್ದರೂ, ವೈದ್ಯರ ಸಲಹೆಯಂತೆ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ ಎಂದಿದ್ದರು. ರವಿವಾರ ನಡೆದ ಪರೀಕ್ಷೆಯಲ್ಲಿ ಬಿಎಸ್ ವೈ ಮತ್ತು ಅವರ ಪುತ್ರಿ ಪದ್ಮಾವತಿ ಅವರಿಗೆ ಸೋಂಕು ದೃಢವಾಗಿತ್ತು. ಪುತ್ರ ವಿಜಯೇಂದ್ರ ಅವರ ವರದಿ ನೆಗಟಿವ್ ಆಗಿತ್ತು.
ಇದನ್ನೂ ಓದಿ: ಸಿಎಂಗೆ ಕೋವಿಡ್ ಪಾಸಿಟಿವ್: ರಾಜ್ಯಪಾಲರನ್ನೂ ಭೇಟಿಯಾಗಿದ್ದರು ಸಿಎಂ ಬಿಎಸ್ ವೈ!
ಸದ್ಯ ಸಿಎಂ ಬಿಎಸ್ ವೈ ಅವರಿಗೆ ಸೋಂಕು ದೃಢವಾದ ಹಿನ್ನಲೆಯಲ್ಲಿ ಸಿಎಂ ಅವರ ಕಾವೇರಿ ಮತ್ತು ಕೃಷ್ಣಾ ನಿವಾಸಗಳ ಎಲ್ಲಾ ಸಿಬ್ಬಂದಿಗಳಿಗೆ ಸೋಂಕು ಪರೀಕ್ಷೆ ಮಾಡಿಸಲಾಗುತ್ತಿದೆ.
ಇದನ್ನೂ ಓದಿ: ಬಿಎಸ್ ವೈ ಪುತ್ರಿ ಪದ್ಮಾವತಿಯವರಿಗೂ ಕೋವಿಡ್ ಪಾಸಿಟಿವ್: ಪುತ್ರ ವಿಜಯೇಂದ್ರ ವರದಿ ನೆಗೆಟಿವ್