Advertisement

ಹೊನ್ನಾವರದಲ್ಲಿ ಆರು ಜನರಿಗೆ ಸೋಂಕು

10:28 AM Jul 15, 2020 | Suhan S |

ಹೊನ್ನಾವರ: ಮಂಗಳವಾರ ದುರ್ಗಾಕೇರಿಯಲ್ಲಿರುವ 29 ಮತ್ತು 27 ವರ್ಷದ ಇಬ್ಬರು ಐಆರ್‌ಬಿ ಕಾರ್ಮಿಕರಿಗೆ ಮತ್ತು ಹಳದೀಪುರ ಕರಿಮೂಲೆಯ 36 ವರ್ಷದ ಮತ್ತು ಚಂಡೇಶ್ವರದ 24 ವರ್ಷದವರಿಗೆ, ಕಮಟೆಹಿತ್ತಲಿನ 34 ಯುವಕ ಮತ್ತು 28 ವರ್ಷದ ಮಹಿಳೆಗೆ ಕೋವಿಡ್ ಸೋಂಕು ಕಂಡುಬಂದಿದೆ.

Advertisement

ತಹಶೀಲ್ದಾರ್‌ ವಿವೇಕ ಶೇಣ್ವಿ ಪತ್ರಿಕಾ ಹೇಳಿಕೆ ನೀಡಿದ್ದು, ನಿತ್ಯ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿರುವುದರಿಂದ ಹೊನ್ನಾವರಕ್ಕೆ ಮೂರು ದಿನ ಅಥವಾ ಅದಕ್ಕಿಂತ ಹೆಚ್ಚು ಅವಧಿ ವಾಸ್ತವ್ಯ ಮಾಡಲು ಹೊರ ಜಿಲ್ಲೆಯಿಂದ ಆಗಮಿಸುವ ಎಲ್ಲ ವ್ಯಕ್ತಿಗಳಿಗೆ ಬಂದಕೂಡಲೇ ಸರ್ಕಾರಿ ಆಸ್ಪತ್ರೆಯಲ್ಲಿ ಜ್ವರ ತಪಾಸಣೆ ಮಾಡಲಾಗುವುದು. ಇದನ್ನು ಉಲ್ಲಂಘಿಸಿದವರಿಗೆ 14 ದಿನ ಕಡ್ಡಾಯ ಗೃಹ ಕ್ವಾರಂಟೈನ್‌ ವಿಧಿಸಲಾಗುವುದಲ್ಲದೇ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆ ಅನ್ವಯ ಕಾನೂನು ಕ್ರಮ ಜರುಗಿಸಲಾಗುವುದು. ಹೊರ ಜಿಲ್ಲೆ ಹಾಗೂ ಹೊರ ದೇಶ, ರಾಜ್ಯಗಳಿಂದ ಬರುವ ವ್ಯಕ್ತಿಗಳು 7 ದಿನ ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಬೇಕು. ಗಂಟಲು ದ್ರವ ಪರೀಕ್ಷೆಗೆ ಒಳಪಡುವವರು ವರದಿ ಬರುವವರೆಗೆ ಮನೆಯಲ್ಲಿ ಇರಬೇಕು. ಸಾರ್ವಜನಿಕ ಸ್ಥಳದಲ್ಲಿ ಅವರು ಓಡಾಡಿದರೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು. ಇಂಥವರನ್ನು ಕಂಡರೆ ಸಾರ್ವಜನಿಕರು 08387-220262ಗೆ ಫೋನ್‌ ಮಾಡಿ ದೂರು ದಾಖಲಿಸಲು ಕೋರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next