ಬಸ್ತಿ, ಉತ್ತರ ಪ್ರದೇಶ : ಕೆಟ್ಟು ಹೋಗಿದ್ದ ರಾಜ್ಯ ಸಾರಿಗೆ ಬಸ್ಸನ್ನು ಮುಂದಕ್ಕೆ ತಳ್ಳುತ್ತಿದ್ದ ವೇಳೆ ಹಿಂಬದಿಯಿಂದ ವೇಗವಾಗಿ ಧಾವಿಸಿ ಬರುತ್ತಿದ್ದ ಟ್ರಕ್ ಢಿಕ್ಕಿ ಹೊಡೆದ ಕಾರಣ ಆರು ಮಂದಿ ಮೃತಪಟ್ಟು, ಇತರ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಬಡೋಹಿ ಗ್ರಾಮದ ಛವಾನಿ ಪ್ರದೇಶದಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಅಲಹಾಬಾದ್ ನಿಂದ ಗೋರಖ್‌ಪುರಕ್ಕೆ ಹೋಗುತ್ತಿದ್ದ ರಾಜ್ಯ ಸಾರಿಗೆ ಬಸ್ಸು ಢಾಬಾವೊಂದರ ಸಮೀಪ ನಿಂತಿತ್ತು. ಮರಳಿ ಅದನ್ನು ಸ್ಟಾರ್ಟ್ ಮಾಡುವಾಗ ಅದು ನಿಷ್ಕ್ರಿಯವಾಗಿತ್ತು. ಹಾಗಾಗಿ ಬಸ್ಸಿನ ಕೆಲ ಪ್ರಯಾಣಿಕರು ಅದನ್ನು ಮುಂದೂಡಲು ನೆರವಾಗಿದ್ದರು.
ಆಗ ಹಿಂಬದಿಯಿಂದ ಧಾವಿಸಿ ಬಂದ ಟ್ರಕ್ ಇವರಿಗೆ ಬಡಿಯಿತು. ಪರಿಣಾಮವಾಗಿ ಆರು ಮಂದಿ ಸ್ಥಳದಲ್ಲೇ ಮೃತಪಟ್ಟರು; ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೇಸು ದಾಖಲಾಗಿದ್ದು ತನಿಖೆ ನಡೆಯುತ್ತಿದೆ.