ಬಾಗಲಕೋಟೆ: ಮಹಾರಾಷ್ಟ್ರದಿಂದ ಬಂದಿದ್ದ ಇಬ್ಬರು ಮಹಿಳೆಯರಿಗೆ ಸೋಮವಾರ ಕೋವಿಡ್ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 93ಕ್ಕೆ ಏರಿಕೆಯಾಗಿದೆ.
ಸೋಮವಾರ ಸಂಜೆ ಜಿಲ್ಲೆಯ ಮುಧೋಳನ 5 ಹಾಗೂ ಗುಳೇದಗುಡ್ಡದ ಓರ್ವ ಯುವತಿ ಸೇರಿದಂತೆ ಒಟ್ಟು 6 ಕೋವಿಡ್ ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡರು. ಮುಧೋಳ ನಗರದ 1 ವರ್ಷದ ಹೆಣ್ಣು ಮಗು ಪಿ-3311, 21 ವರ್ಷದ ಮಹಿಳೆ ಪಿ-1000, 35 ವರ್ಷದ ಪುರುಷ ಪಿ-3312, 17 ವರ್ಷದ ಬಾಲಕ ಪಿ-3416, ತಿಮ್ಮಾಪುರದ 34 ವರ್ಷದ ಪುರುಷ ಪಿ-3414 ಹಾಗೂ ಗುಳೇದಗುಡ್ಡದ 20 ವರ್ಷದ ಯುವತಿಯು ಪಿ-3930 ಕೋವಿಡ್ ನಿಂದ ಚಿಕಿತ್ಸೆ ಪಡೆದು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಗುಣಮುಖರಾದವರಿಗೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ|ಪ್ರಕಾಶ ಬಿರಾದಾರ ಪ್ರಮಾಣ ಪತ್ರ ವಿತರಿಸಿದರು. ಆಸ್ಪತ್ರೆ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ ಬೀಳ್ಕೊಡಲಾಯಿತು.
ಜಿಲ್ಲೆಯಿಂದ ಕಳುಹಿಸಲಾದ 102 ಸ್ಯಾಂಪಲ್‌ಗಳ ಪೈಕಿ 85 ಸ್ಯಾಂಪಲ್‌ಗಳು ನೆಗೆಟಿವ್ ಬಂದಿದ್ದು, 2 ಪಾಸಿಟಿವ್ ಪ್ರಕರಣ ವರದಿಯಾಗಿದೆ. ಸೋಂಕಿತರ ಸಂಖ್ಯೆ 93ಕ್ಕೆ ಏರಿಕೆಯಾಗಿದೆ ಈ ಪೈಕಿ 82 ಜನ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ಪ್ರತ್ಯೇಕವಾಗಿ ನಿಗಾದಲ್ಲಿ 472 ಜನ ಇದ್ದು, ಇಲ್ಲಿಯವರೆಗೆ ಒಟ್ಟು 8824 ಸ್ಯಾಂಪಲ್ ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಈ ಪೈಕಿ 8685 ನೆಗೆಟಿವ್ ಪ್ರಕರಣ, 93 ಪಾಸಿಟಿವ್ ಹಾಗೂ ಓರ್ವ ಸೋಂಕಿತ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ|ಕೆ. ರಾಜೇಂದ್ರ ತಿಳಿಸಿದ್ದಾರೆ.
ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 10 ಜನರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಇಲ್ಲಿಯವರೆಗೆ 13 ಸ್ಯಾಂಪಲ್‌ಗಳು ರಿಜೆಕ್ಟ್ ಆಗಿದ್ದು, 14 ದಿನಗಳ ಸಾಂಸ್ಥಿಕ ಕ್ವಾರಂಟೈನ್‌ನಿಂದ 2839 ಜನರನ್ನು ಬಿಡುಗಡೆ ಮಾಡಲಾಗಿರುತ್ತದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 93 ಜನರಿಗೆ ಸೋಂಕು ಖಚಿತವಾಗಿದ್ದು, 82 ಜನ ಕೋವಿಡ್ ಮುಕ್ತರಾಗಿ ಬಿಡುಗಡೆಗೊಂಡಿದ್ದಾರೆ. ಒಟ್ಟು ಸೋಂಕಿತರಲ್ಲಿ 61 ಜನ ಪುರುಷರು, 32ಜನ ಮಹಿಳೆಯರಿದ್ದಾರೆ. ಒಟ್ಟು ಪಾಸಿಟಿವ್ ಕೇಸ್‌ಗಳಲ್ಲಿ 3 ಐಎಲ್‌ಐ, 3 ಸಾರಿ, 16 ಗುಜರಾತ್ ಸಂಪರ್ಕ, 14 ಮಹಾರಾಷ್ಟ್ರ ಸಂಪರ್ಕ, 1 ಮೈಸೂರು, 47 ಪ್ರಾಥಮಿಕ ಸಂಪರ್ಕ ಹಾಗೂ 7 ದ್ವಿತೀಯ ಸಂಪರ್ಕದಿಂದ ಕೋವಿಡ್ ಸೋಂಕು ಖಚಿತಟ್ಟಿದೆ. –
ಕ್ಯಾಪ್ಟನ್ ಡಾ|ರಾಜೇಂದ್ರ, ಜಿಲ್ಲಾಧಿಕಾರಿ