Advertisement
ಸ್ಥಳೀಯ ನಿವಾಸಿಗಳಾದ ಮಂಜುನಾಥ್ ಅಲಿಯಾಸ್ ಸಂಜು, ಮಲ್ಲಿಕಾರ್ಜುನಯ್ಯ, ಮಂಜುನಾಥ್ ಅಲಿಯಾಸ್ ಬುಳ್ಳೆ , ಮೋಹನ್, ಹನುಮೇಶ್ ಮತ್ತು ರಾಜೇಶ್ ಅಲಿಯಾಸ್ ಕೋತಿ ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳು ಹಲವು ವರ್ಷಗಳಿಂದ ವೇಶ್ಯಾವಾಟಿಕೆ ಜಾಲದಲ್ಲಿದ್ದಾರೆ. ಫೇಸ್‌ಬುಕ್, ಟ್ವಿಟರ್ ಹಾಗೂ ಇತರೆಡೆ ಸಿಗುವ ಯುವತಿಯ ಫೋಟೋಗಳನ್ನು ಲೊಕ್ಯಾಂಟೋ ವೆಬ್‌ಸೈಟ್ ನಲ್ಲಿ ಹಾಕಿ, ಅವರ ಹೆಸರಿನಲ್ಲಿ ಪ್ರೊಫೈಲ್ ಸಿದ್ಧಪಡಿಸುತ್ತಿದ್ದರು. ಅದನ್ನು ಕೆಲ ನಿರ್ದಿಷ್ಟ ಗ್ರಾಹಕರಿಗೆ ಕಳುಹಿಸುತ್ತಿದ್ದರು. ಅಲ್ಲದೆ, ವೆಬ್ ಸೈಟ್ ಅಥವಾ ಆ್ಯಪ್‌ನಲ್ಲಿ ಯುವತಿಯರ ಪೋಟೋ ಕಂಡ ಗ್ರಾಹಕರು ಮುಂಗಡವಾಗಿ ಆ ಯುವತಿಯನ್ನು ಬುಕ್ ಮಾಡಿಕೊಳ್ಳಲು ಅಡ್ವಾನ್ಸ್ ಹಣ ವರ್ಗಾವಣೆ ಮಾಡುತ್ತಿದ್ದರು. ಮಾತುಕತೆಯಂತೆ ಗೊತ್ತುಪಡಿಸಿದ ಯುವತಿಯರನ್ನು ಕಳುಹಿಸದೇ ಬೇರೆ ಯುವತಿಯರನ್ನು ಕಳುಹಿಸುತ್ತಿದ್ದರು. ಮತ್ತೂಂದೆಡೆ ಹಣ ವರ್ಗಾ ವಣೆ ಆಗುತ್ತಿದ್ದಂತೆ ಆ ಪ್ರೊಫೈಲ್ ಡಿಲೀಟ್ ಮಾಡುತ್ತಿದ್ದರು. ಅದನ್ನು ಗ್ರಾಹಕರು ಪ್ರಶ್ನಿದರೆ ಬೆದರಿಕೆ ಹಾಕಿ ಹೆಚ್ಚು ಹಣ ವಸೂಲಿ ಮಾಡುತ್ತಿ ದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ವೇಶ್ಯಾವಾಟಿಕೆಗೆ ಜಾಲತಾಣದಲ್ಲಿದ್ದ ಯುವತಿಯ ಫೋಟೋಗಳ ಬಳಕೆ: ಆರು ಮಂದಿ ಬಂಧನ
12:11 PM Jan 17, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.