ಕಾಲುವೆ ನಿರ್ಮಾಣದಲ್ಲಿ ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಅವರು ಕೋಟ್ಯಂತರ ರೂ. ಭ್ರಷ್ಟಾಚಾರ ಎಸಗಿದ್ದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಹೇಳಿದರು.
Advertisement
ಸೋಮವಾರ ಮಸೂತಿ ಪಶ್ಚಿಮ ಮುಖ್ಯ ಕಾಲುವೆ ವೀಕ್ಷಿಸಿದ ನಂತರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಮುಳವಾಡ, ಚಿಮ್ಮಲಗಿ, ಗುತ್ತಿಬಸವಣ್ಣ ಸೇರಿದಂತೆ ಕೆರೆ ತುಂಬುವ ಯೋಜನೆ ಜಿಲ್ಲೆಯಲ್ಲಿ 6 ಸಾವಿರ ಕೋಟಿ ಕಾಮಗಾರಿ ಸಾಗಿದೆ. ಇದರಲ್ಲಿ ಸುಮಾರು 4 ಸಾವಿರ ಕೋಟಿಯಷ್ಟು ಕಾಮಗಾರಿ ಮುಗಿದಿದೆ ಎಂದು ಹೇಳುತ್ತಾರೆ. ಅದರಲ್ಲಿ ಮಸೂತಿ, ಮಸಿಬಿನಾಳ, ನಂದಿಹಾಳ ಸೇರಿದಂತೆ ಅನೇಕ ಕಡೆ ಕಾಲುವೆ ಸಂಪೂರ್ಣ ಕಳಪೆ ಗುಣಮಟ್ಟದಾಗಿದ್ದು. ಇದರಲ್ಲಿ ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಅವರು ಕೋಟ್ಯಂತರ ರೂ. ಭ್ರಷ್ಟಾಚಾರದಲ್ಲಿ ಶಾಮಿಲ್ ಆಗಿದ್ದು ಸತ್ಯಾಂಶ ತಿಳಿಯಬೇಕಾದರೆ ಎಸಿಬಿ ಮತ್ತು ಸಿಬಿಐ ತನಿಖೆಯಾಗಬೇಕು ಎಂದು ಹೇಳಿದರು.
ನಡೆಯುತ್ತಿರುವ ಕಾಮಗಾರಿ ವೀಕ್ಷಿಸಿ ಕಳಪೆಯಾದಲ್ಲಿ ಅದನ್ನು ಸರಿಪಡಿಸಬೇಕು. ತಾಲೂಕಿನಲ್ಲಿ ನಡೆಯುತ್ತಿರುವ ಎಲ್ಲ ಏತ
ನೀರಾವರಿಯ ಮುಖ್ಯ ಕಾಲುವೆಗಳು ಕಳಪೆ ಗುಣಮಟ್ಟದಾಗಿದ್ದು ಇದನ್ನು ವೀಕ್ಷಿಸಿ ಸರಿಪಡಿಸುವ ಕೆಲಸವನ್ನು ಶಾಸಕ ಶಿವಾನಂದ ಪಾಟೀಲ ಮಾಡಿಲ್ಲ. ಅದರೆ ಈ ಕಳಪೆ ಕಾಮಗಾರಿ ಕೆಲಸದಲ್ಲಿ ಅವರದು ಪಾಲಿದೆ ಎಂಬುವುದು ಕಂಡು ಬರುತ್ತಿದೆ ಎಂದು ಹೇಳಿದರು. ಈ ಭಾಗದ ರೈತರ ಮತ್ತು ಅವಳಿ ಜಿಲ್ಲೆಯ ಜನತೆಯ ಹೋರಾಟದ ಫಲದಿಂದ ಮತ್ತು 2008ರಲ್ಲಿ ಮುಖ್ಯಮಂತ್ರಿ
ಬಿ.ಎಸ್. ಯಡಿಯೂರಪ್ಪ, ಸದಾನಂದಗೌಡ, ಜಗದೀಶ ಶೆಟ್ಟರ ಮತ್ತು ಅಂದಿನ ನಿರಾವರಿ ಸಚಿವರಾದ ಕೆ.ಎಸ್. ಈಶ್ವರಪ್ಪ, ಬಸವರಾಜ ಬೊಮ್ಮಾಯಿವರ ಪ್ರಯತ್ನದಿಂದ ವಿಜಯಪುರ- ಬಾಗಲಕೋಟಿ ಅವಳಿ ಜಿಲ್ಲೆಯ ಮುಳವಾಡ, ಚಿಮ್ಮಲಗಿ, ಗುತ್ತಿಬಸವಣ್ಣ ಸೇರಿದಂತೆ ಅನೇಕ ಏತ ನೀರಾವರಿ ಯೋಜನೆಗಳ ಹಾಗೂ ಕೆರೆ ತುಂಬುವ ಯೋಜನೆಗೆ ಚಾಲನೆ ಸಿಕ್ಕಿದೆ. ಆದರೆ ಇಂದು ಕಾಂಗ್ರೆಸ್ ಸರ್ಕಾರದ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು ಈ ಎಲ್ಲ ಏತ ನೀರಾವರಿ ಯೋಜನೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಎಂದು ಹೇಳಿದರು.
Related Articles
ಅವರಿಗೆ ಜಿಲ್ಲೆಯಲ್ಲಿ ನಡೆದಿರುವ ನೀರಾವರಿ ಯೋಜನೆ ಕಾಲುವೆಯ ಭ್ರಷ್ಟಾಚಾರದ ಬಗ್ಗೆ ಸಮಗ್ರ ಮಾಹಿತಿ ನೀಡಿ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಹೇಳಿದರು.
Advertisement
ಸುದ್ದಿಗೋಷ್ಠಿಯಲ್ಲಿ ಬಸವರಾಜ ಕುಂಬಾರ, ನಿತ್ಯಾನಂದ ಮಠ, ರಾಮಣ್ಣ ಬಾಟಿ, ಆನಂದ ಬಿಷ್ಟಗೊಂಡ, ರಾಮುಜಗತಾಪ, ಈರಣ್ಣ ರೋಳ್ಳಿ, ಮಲ್ಲು ಸೇಬಗೊಂಡ, ಪ್ರವೀಣ ಪವಾರ ಇದ್ದರು.