Advertisement
ಬೆಂಗಳೂರು ನಗರದಿಂದ ಸುಮಾರು 54 ಕಿ.ಮೀ. ದೂರದಲ್ಲಿರುವ ಒಂದು ಪಾವನ ಪುಣ್ಯ ಕ್ಷೇತ್ರವೇ ಈ ಶಿವಗಂಗೆ ಬೆಟ್ಟ. ಇದು ಕರ್ನಾಟಕದ ಪ್ರಮುಖ ಯಾತ್ರಾ ಸ್ಥಳವೂ ಆಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸವಾಲಾಗಿರುವ ಸಂಗತಿಗಳಲ್ಲಿ ಈ ಶಿವಗಂಗೆಯ ಲಿಂಗ ಮಹಾತೆ¾ಯೂ ಒಂದು. ಇಲ್ಲಿರುವ ಈಶ್ವರ ಲಿಂಗಕ್ಕೆ ತುಪ್ಪವನ್ನು ಹಚ್ಚಿದರೆ ಅದು ಬೆಣ್ಣೆಯಾಗಿ ಪರಿವರ್ತನೆಯಾಗುತ್ತದೆ. ಬೆಣ್ಣೆಯನ್ನು ಒಲೆಯ ಮೇಲಿಟ್ಟು ಕಾಯಿಸಿ, ಕರಗಿಸಿದರೆ ಅದು ತುಪ್ಪವಾಗುತ್ತದೆ. ವಾಸ್ತವ ಏನೆಂದರೆ, ನಮಗೆಲ್ಲ ಗೊತ್ತಿರುವಂತೆ ಒಮ್ಮೆ ತುಪ್ಪವಾದ ಬೆಣ್ಣೆಯನ್ನು ಪ್ರಿಡ್ಜ್‌ನಲ್ಲಿ ಇಟ್ಟರೂ ಅದು ಮತ್ತೆ ಬೆಣ್ಣೆಯಾಗುವುದು ಅಸಾಧ್ಯದ ಮಾತು. ಆದರೆ, ಈ ಶಿವಗಂಗೆಯಲ್ಲಿ ಈ ಪವಾಡವನ್ನು ಪ್ರತ್ಯಕ್ಷ ಕಾಣಬಹುದು. ಭಗವಂತನ ಕೃಪೆ ಇದ್ದರೆ ಯಾವುದೂ ಅಸಾಧ್ಯವಲ್ಲ ಎಂಬ ಮಾತು ಇದಕ್ಕೆ ಅನ್ವಯಿಸುತ್ತದೆ. ಇಂಥ ವೈಶಿಷ್ಟ್ಯ ಪೂರ್ಣ ಪುಣ್ಯಕ್ಷೇತ್ರ ಕರ್ನಾಟಕದಲ್ಲಿದೆ ಎಂಬುದೇ ಹೆಮ್ಮೆಯ ವಿಷಯ.
Related Articles
Advertisement
ಮುಖ್ಯವಾದದ್ದು ಈ ಬೆಟ್ಟದ ಮೇಲಿರುವ ಶ್ರೀ ಹೊನ್ನಾದೇವಿ ದೇವಸ್ಥಾನವೂ ಪ್ರತಿ ವರ್ಷ ಸಂಕ್ರಾಂತಿ ಹಬ್ಬದ ದಿನ ಎರಡೂ ದೇವರುಗಳಿಗೆ ವಿವಾಹ ಮಹೋತ್ಸವವನ್ನು ಮಾಡಲಾಗುತ್ತದೆ. ಆ ದಿನ ಮುಂಜಾನೆ, ಬೆಟ್ಟದ ಮೇಲಿನ ಕಲ್ಲಿನಿಂದ ಗಂಗಾ ಜಲ ಹೊರ ಹೊಮ್ಮುತ್ತದೆ. ಆದೇ ಜಲವನ್ನು ವಾದ್ಯಗೋಷ್ಟಿಗಳ ಸಮೇತ ತಂದು ಆ ಪವಿತ್ರ ನೀರಿನಿಂದ ಶ್ರೀಹೊನ್ನಾದೇವಿಯನ್ನು ಶ್ರೀ ಗಂಗಾಧರೇಶ್ವರನಿಗೆ ಧಾರೆ ಎರೆದು ಕೊಡಲಾಗುತ್ತದೆ. ಇನ್ನು ಇಲ್ಲಿ ಶಂಕರಾಚಾರ್ಯರ ಶಾಖಾ ಮಠ, ಶಾರದಾಂಬೆಯ ದೇವಸ್ಥಾನ, ಬೃಹದಾಕಾರವಾದ ತೋಪಿನ ಗಣೇಶ ಹಾಗೂ 108 ಲಿಂಗಗಳನ್ನುಳ್ಳ ಅಗಸ್ತ್ಯ ದೇವಸ್ಥಾನಗಳಿವೆ.
ಹತ್ತಿರದಲ್ಲಿಯೇ ಪಾತಾಳ ಗಂಗೆ ಇದೆ. ಇದು ಸದಾ ನೀರಿನಿಂದ ತುಂಬಿರುತ್ತದೆ. ವಿಚಿತ್ರವೆಂದರೆ ಇಲ್ಲಿ ಮಳೆಗಾಲದಲ್ಲಿ ನೀರು ಆಳಕ್ಕೆ ಹೋಗಿರುತ್ತದೆ. ಬೇಸಿಗೆಯಲ್ಲಿ ನೀರು ಮೇಲಕ್ಕೆ ಬರುತ್ತದೆ. ಈ ಕ್ಷೇತ್ರವನ್ನು ದಕ್ಷಿಣ ಕಾಶಿ ಎಂದೂ ಕೂಡ ಕರೆಯುತ್ತಾರೆ. ಒಂದೊಂದು ದಿಕ್ಕಿನಿಂದ ಒಂದೊಂದು ಆಕಾರದಲ್ಲಿ ಗೋಚರಿಸುವ ಈ ಬೆಟ್ಟವನ್ನು ಉತ್ತರದಿಂದ ನೋಡಿದರೆ ಸರ್ಪದಂತೆಯೂ, ದಕ್ಷಿಣದಿಂದ ಗಣೇಶನಂತೆಯೂ, ಪೂರ್ವದಿಂದ ನಂದಿಯಂತೆಯೂ, ಪಶ್ಚಿಮದಿಂದ ಲಿಂಗದಂತೆಯೂ ಕಾಣುತ್ತದೆ. ಚಾರಣ ಪ್ರಿಯರಿಗೆ ಹೇಳಿ ಮಾಡಿಸಿದ ತಾಣ ಇದಾಗಿದೆ. ಇದೇ ಬೆಟ್ಟದÇÉೇ ನಾಟ್ಯರಾಣಿ ಶಾಂತಲೆ ಆತ್ಮಹತ್ಯೆ ಮಾಡಿಕೊಂಡಿದ್ದು ಎಂಬ ಐತಿಹ್ಯವಿದೆ.
ತಲುಪುವ ಮಾರ್ಗ ಬೆಂಗಳೂರು ನಗರದಿಂದ ಸುಮಾರು 54 ಕಿಮೀ. ದಾಬಸ್ ಪೇಟೆಯಿಂದ ಸುಮಾರು 6 ಕಿ.ಮೀ. ತುಮಕೂರಿನಿಂದ 20 ಕಿ.ಮೀ. ಅಂತರದಲ್ಲಿರುವ ಈ ಬೆಟ್ಟಕ್ಕೆ ಸಾಕಷ್ಟು ಬಸ್ ಸೌಕರ್ಯವಿದೆ. ಆಶಾ. ಎಸ್ ಕುಲಕರ್ಣಿ