Advertisement
ಆ್ಯಂಡ್ರಾಯ್ಡ ಮೊಬೈಲ್ ಬಳಕೆದಾರರು ಪ್ಲೇ ಸ್ಟೋರ್‌ನಲ್ಲಿ ಹಾಗೂ ಐಒಎಸ್ ಮೊಬೈಲ್ ಬಳಕೆದಾರರು ಆ್ಯಪ್ ಸ್ಟೋರ್‌ನಲ್ಲಿ “ಬೆಸ್ಕಾಂ ಮಿತ್ರ’ ಆ್ಯಪ್ ಡೌನ್‌ಲೋಡ್ ಮಾಡಿ ಕೊಳ್ಳಬೇಕು. ನಂತರ ಮೊಬೈಲ್ ಸಂಖ್ಯೆ ನಮೂದಿಸಿದಾಗ ಪಡೆಯುವ ಒಟಿಪಿ ನಮೂದಿಸಿ ನೋಂದಣಿಯಾಗಬೇಕು. ಬಳಿಕ ವಿದ್ಯುತ್ ಬಿಲ್‌ನಲ್ಲಿ ನಮೂದಾದ ಅಕೌಂಟ್ ಐಡಿ ನಮೂದಿಸಿದರೆ ಪ್ರಕ್ರಿಯೆ ಪೂರ್ಣ ಗೊಳ್ಳಲಿದೆ. ನಂತರ ಆ್ಯಪ್ ಸೇವೆ ಬಳಸಬಹುದು.
ನಿರ್ವಹಣೆಗಾಗಿ ವಿದ್ಯುತ್ ವ್ಯತ್ಯಯ ಮಾಹಿತಿಯೂ ಸಿಗಲಿದೆ. ಪವರ್ ಕ್ಯಾಲ್ಕುಲೇಟರ್ ನಲ್ಲಿ ಆಯ್ದ ಉಪಕರಣದ ವಿದ್ಯುತ್ ಬಳಕೆ ವಿವರವೂ ಗೊತ್ತಾಗಲಿದೆ. ದೂರು ಸಲ್ಲಿಕೆಗೂ ಅವಕಾಶವಿದೆ. ಜಿಪಿಎಸ್ ಲೋಕೇಷನ್ ವ್ಯವಸೆ ಇದ್ದು, ಇದರಿಂದ ಸಮಸ್ಯೆ ತಲೆದೋರಿದ ಸ್ಥಳವನ್ನು ನಿಖರವಾಗಿ ಪತ್ತೆ ಹಚ್ಚಲು ಅನುಕೂಲವಾಗಲಿದೆ. ಬೆಸ್ಕಾಂ ನಿಂದ ನಿಯಮಿತ ಸಂದೇಶ, ಮಾಹಿತಿಯೂ ರವಾನೆಯಾಗಲಿದೆ. ಒಟ್ಟಾರೆ ಗ್ರಾಹಕರ ಅಗತ್ಯಗಳನ್ನು ಗಮನ ದಲ್ಲಿಟ್ಟು ಕೊಂಡು ಆ್ಯಪ್ ರೂಪುಗೊಂಡಿದೆ ಎಂದು ಹೇಳಿದರು.
Related Articles
ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ನಾನಾ ಸೇವೆಗಳಿಗೆ ಸಂಬಂಧ ಪಟ್ಟಂತೆ ಮೊಬೈಲ್ ಆ್ಯಪ್‌ಗ್ಳಿದ್ದು, ಅವುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸುತ್ತಿಲ್ಲ. ವಿದ್ಯುತ್ ಗ್ರಾಹಕರ ಅನುಕೂಲಕ್ಕಾಗಿ ರೂಪಿಸಿರುವ ಮೊಬೈಲ್ ಆ್ಯಪ್‌ಅನ್ನು ಗ್ರಾಹಕರು ಡೌನ್‌ಲೋಡ್ ಮಾಡಿಕೊಂಡು ಬಳಸಬೇಕು. ಆ್ಯಪ್ ಸೇವೆಯಿಂದ ಗ್ರಾಹಕರು ಕಚೇರಿ ಗಳಿಗೆ ಅಲೆದಾಡುವುದು ಕಡಿಮೆಯಾಗುವ ನಿರೀಕ್ಷೆ ಇದೆ ಎಂದು ಹೇಳಿದರು.
Advertisement
ಎಫ್ಕೆಸಿಸಿಐ ಅಧ್ಯಕ್ಷ ಕೆ.ರವಿ, “ದೇಶದಲ್ಲಿಂದು ಆನ್‌ಲೈನ್ ಸೇವೆಗಳನ್ನು ಪರಿಣಾಮಕಾರಿಯಾಗಿ ಬಳಸುವವರ ಸಂಖ್ಯೆ ಹೆಚ್ಚಾಗಿದ್ದು, ಗ್ರಾಹಕರ ಅನುಕೂಲಕ್ಕಾಗಿ ಬೆಸ್ಕಾಂ ಆ್ಯಪ್ ಅಭಿವೃದ್ಧಿಪಡಿಸಿರುವುದು ಉತ್ತಮವಾಗಿದೆ ಎಂದು ತಿಳಿಸಿದರು.
ಕಾಸಿಯಾ ಅಧ್ಯಕ್ಷ ಹನುಮಂತೇಗೌಡ, ಅಧಿಕಾರಿಗಳು ವಿದ್ಯುತ್ ಗ್ರಾಹಕರ ಸಮಸ್ಯೆಗಳಿಗೆ ಸ್ಪಂದಿಸಿ ಉತ್ತಮ ಸೌಲಭ್ಯ ಕಲ್ಪಿಸಲು ಸಹಕಾರ ನೀಡಬೇಕು. ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಕೆಲ ಸಮಸ್ಯೆಗಳಿದ್ದು, ಪರಿಹರಿಸಲು ಗಮನ ಹರಿಸಬೇಕು. ಸೌರ ವಿದ್ಯುತ್ ಉತ್ಪಾದನೆ ಹೆಚ್ಚಾದರೆ ಕೈಗಾರಿಕೆಗಳಿಗೆ ವಿದ್ಯುತ್ ದರ ಇಳಿಕೆ ಬಗ್ಗೆಯೂ ಚಿಂತಿಸಬೇಕು ಎಂದು ಮನವಿ ಮಾಡಿದರು. ಬೆಸ್ಕಾಂ ಜಾಗೃತ ದಳದ ಅಧಿಕಾರಿಗಳು ಉಪಸ್ಥಿತರಿದ್ದರು.