Advertisement
ಸುದ್ದಿಗಾರರೊಂದಿಗೆ ಮಾತನಾಡಿ, ಸಿಬಿಐ ಮುಕ್ತಾಯ ಮಾಡಿದ್ದ ಅಕ್ರಮ ಗಣಿ ಹಗರಣವನ್ನು ರಾಜ್ಯ ಸರ್ಕಾರ ಪುನಃ ಎಸ್‌ಐಟಿ ಮೂಲಕ ಓಪನ್ ಮಾಡಿಸಿದೆ. ಸಿದ್ದರಾಮಯ್ಯರಿಂದ ಆಡಳಿತ ದುರುಪಯೋಗವಾಗುತ್ತಿದೆ. ಜಂತಕಲ್ ಮೈನಿಂಗ್ ಪ್ರಕರಣದಲ್ಲಿ ನಾನು ಯಾವುದೇ ತಪ್ಪೆಸಗಿಲ್ಲ. ಸಿಎಂಗೆ ಆಗದ ವಿಪಕ್ಷ ನಾಯಕರ ಮೇಲೆ ಎಸ್ ಐಟಿ ಮೂಲಕ ಪ್ರಕರಣ ಓಪನ್ ಮಾಡಿಸಿ ದ್ವೇಷದರಾಜಕೀಯ ಮಾಡಲು ಹೊರಟಿದ್ದಾರೆ ಎಂದರು. ಕಾಂಗ್ರೆಸ್ ಸಚಿವರು ಹೈಕಮಾಂಡ್‌ಗೆ ಕಪ್ಪ ಕೊಟ್ಟ ಬಗ್ಗೆ ಸಮಯ ಬಂದಾಗ ಅವರ ಹೆಸರನ್ನು ಬಹಿರಂಗ ಪಡಿಸುತ್ತೇನೆ. ನಾನು ಹಿಟ್ ಆ್ಯಂಡ್ ರನ್ ಮಾಡಿಲ್ಲ. ಸಿಎಂ ಎಲ್ಲ ವಿಷಯಕ್ಕೂ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಹಿಟ್ ಆ್ಯಂಡ್ ರನ್ ಅಂದರೇನು ಎನ್ನೋದನ್ನು ಅಧಿಕಾರಕ್ಕೆ ಬಂದಾಗ ತೋರಿಸುತ್ತೇನೆ ಎಂದು ಹೇಳಿದರು.