Advertisement

ಆಕ್ಸಿಜನ್ ಬೇಕಿದ್ರೆ ಅಶ್ವತ್ಥ ಮರದ ಕೆಳಗೆ ಹೋಗಿ ಕುಳಿತುಕೊಳ್ಳಿ..ಇದು ಪೊಲೀಸರ ಬಿಟ್ಟಿ ಸಲಹೆ!

12:17 PM Apr 30, 2021 | Team Udayavani |

ಲಕ್ನೋ:ಭಾರತದಲ್ಲಿ ಮಾರಣಾಂತಿಕ ಕೋವಿಡ್ 2ನೇ ಅಲೆ ಕ್ಷಿಪ್ರವಾಗಿ ಹರಡುತ್ತಿರುವ ನಡುವೆಯೇ ಹಲವೆಡೆ ಸೂಕ್ತ ಬೆಡ್ ವ್ಯವಸ್ಥೆ ಇಲ್ಲದೆ ಕೋವಿಡ್ ಸೋಂಕಿತರು ಪರದಾಡುವಂತಾಗಿದೆ. ಏತನ್ಮಧ್ಯೆ ಮೆಡಿಕಲ್ ಆಕ್ಸಿಜನ್ ಸಿಲಿಂಡರ್ ಗಳಿಗಾಗಿ ಕೋವಿಡ್ ಸೋಂಕಿತರ ಸಂಬಂಧಿಕರು ಒಂದು ಪ್ಲ್ಯಾಂಟ್ ನಿಂದ ಮತ್ತೊಂದು ಪ್ಲ್ಯಾಂಟ್ ಗೆ ಓಡಾಡುತ್ತಿದ್ದವರಿಗೆ ಉತ್ತರಪ್ರದೇಶದ ಪ್ರಯಾಗ್ ರಾಜ್ ಪೊಲೀಸರು ನೀಡಿರುವ ಸಲಹೆ ನಿಮ್ಮ ಹುಬ್ಬೇರಿಸಲಿದೆ.

Advertisement

ಇದನ್ನೂ ಓದಿ:ಬುದ್ಧಿವಂತ ಗಜರಾಜ : ಹ್ಯಾಂಡ್ ಪಂಪ್ ಬಳಸಿ, ಯಾರ ಸಹಾಯವಿಲ್ಲದೆ ನೀರು ಕುಡಿದ ಆನೆ.!

ಹೌದು ಕೋವಿಡ್ ಸೋಂಕಿನಿಂದ ಒದ್ದಾಡುತ್ತಿದ್ದವರಿಗೆ, ಆಕ್ಸಿಜನ್ ಗಾಗಿ ಹಾತೊರೆಯುತ್ತಿದ್ದವರಿಗೆ, ನಿಮಗೆ ಆಕ್ಸಿಜನ್ ಬೇಕಿದ್ದರೆ ನೀವು ಅಶ್ವತ್ಥ್ ಮರದ ಕೆಳಗೆ ಹೋಗಿ ಕುಳಿತುಕೊಳ್ಳಿ, ನಿಮ್ಮ ಆಕ್ಸಿಜನ್ ಪ್ರಮಾಣ ಹೆಚ್ಚಾಗಲಿದೆ ಎಂದು ಪ್ರಯಾಗ್ ರಾಜ್ ಪೊಲೀಸರು ಬಿಟ್ಟಿ ಸಲಹೆ ನೀಡಿರುವುದಾಗಿ ವರದಿ ತಿಳಿಸಿದೆ.

ಎರಡು ದಿನಗಳ ಹಿಂದಷ್ಟೇ ಆಹಾರ ಮತ್ತು ನಾಗರಿಕ ಖಾತೆ ಸಚಿವ ಉಮೇಶ್ ಕತ್ತಿ ಅವರಿಗೆ ಕರೆ ಮಾಡಿದ್ದ ರೈತನೊಬ್ಬ 5ಕೆಜಿ ಬದಲಾಗಿ 3ಕೆಜಿ ನೀಡುತ್ತಿರುವುದು ಏಕೆ, ಸಾಯಬೇಕಾ, ಬದುಕಬೇಕಾ ಎಂದು ಕೇಳಿದಾಗ ಸಾಯಿ ಎಂದು ಹೇಳಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ನೂರಾರು ಕೋವಿಡ್ ಸೋಂಕಿತರ ಸಂಬಂಧಿಕರು ಪ್ರಯಾಗ್ ರಾಜ್ ಬಿಜೆಪಿ ಶಾಸಕ ಹರ್ಷ್ ವರ್ಧನ್ ವಾಜಪೇಯಿ ಅವರ ಆಕ್ಸಿಜನ್ ಪ್ಲ್ಯಾಂಟ್ ಹೊರಭಾಗದಲ್ಲಿ ಗುಂಪುಗೂಡಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು, ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಜನರನ್ನು ಚದುರಿಸಿದ್ದರು. ಅಲ್ಲದೇ ಆದ್ಯತೆ ಮೇರೆಗೆ ಆಸ್ಪತ್ರೆಗಳಿಗೆ ಆಕ್ಸಿಜನ ಸರಬರಾಜು ಮಾಡುವುದಾಗಿ ಭರವಸೆ ನೀಡಿರುವುದಾಗಿ ವರದಿ ಹೇಳಿದೆ.

Advertisement

“ನಾವು ಎಲ್ಲಿಗೆ ಹೋದರು ನಮಗೆ ಯಾವುದೇ ಉತ್ತರ ಸಿಗುತ್ತಿಲ್ಲ. ಆಸ್ಪತ್ರೆ ಮತ್ತು ಆಕ್ಸಿಜನ್ ಪ್ಲ್ಯಾಂಟ್ ಗಳಲ್ಲಿ ಹೊರಭಾಗದ ಗೇಟ್ ನಲ್ಲಿ ಬೋರ್ಡ್ ಹಾಕಿಬಿಟ್ಟಿದ್ದಾರೆ. ಯಾರೊಬ್ಬರು ಮಾತನಾಡಲು ಸಿಗುತ್ತಿಲ್ಲ. ಈ ಸಂದರ್ಭದಲ್ಲಿ ಪೊಲೀಸರು ನಮ್ಮನ್ನು ಓಡಿಸುತ್ತಿದ್ದಾರೆ ಎಂದು ಉಸಿರಾಟದ ತೊಂದರೆಯಿಂದ ನರಳುತ್ತಿರುವ ತಂದೆಗಾಗಿ ಆಕ್ಸಿಜನ್ ಹುಡುಕಾಟದಲ್ಲಿರುವ ಪ್ರಯಾಗ್ ರಾಜ್ ನ ಯುವಕನೊಬ್ಬ ತೋಡಿಕೊಂಡ ಅಳಲು ಇದಾಗಿದೆ.

ಪ್ರಯಾಗ್ ರಾಜ್ ನಿಂದ ಲಕ್ನೋದವರೆಗೆ ನಾವು ಮೇದಾಂತ, ಅಪೋಲೋ ಸೇರಿದಂತೆ ಎಲ್ಲಾ ಆಸ್ಪತ್ರೆಗಳಲ್ಲಿ ಪ್ರಯತ್ನಿಸಿದ್ದೇವೆ, ಆದರೆ ಯಾರೂ ಕೋವಿಡ್ ರೋಗಿಗಳನ್ನು ದಾಖಲಿಸಿಕೊಳ್ಳುತ್ತಿಲ್ಲ. ನಾವು ಎಲ್ಲಿಗೆ ಹೋಗಬೇಕು ಎಂದು ಅಸಹಾಯಕ ವ್ಯಕ್ತಿಯೊಬ್ಬರು ದೂರಿದ್ದಾರೆ.

ಅಶ್ವತ್ಥ ಮರದ ಕೆಳಗೆ ಕುಳಿತುಕೊಳ್ಳಿ!
“ನೀವು ಕೋವಿಡ್ ರೋಗಿ ಜತೆ ಅಶ್ವತ್ಥ ಮರದ ಕೆಳಗೆ ಕುಳಿತುಕೊಳ್ಳಿ, ಆಕ್ಸಿಜನ್ ಪ್ರಮಾಣ ಹೆಚ್ಚಳವಾಗುತ್ತದೆ ಎಂದು ಪ್ರಯಾಗ್ ರಾಜ್ ಪೊಲೀಸರು ಸಲಹೆ ನೀಡಿರುವುದಾಗಿ ಮತ್ತೊಬ್ಬ ಕೋವಿಡ್ ರೋಗಿಯ ಸಂಬಂಧಿಯೊಬ್ಬರು ತಿಳಿಸಿರುವುದಾಗಿ ವರದಿ ವಿವರಿಸಿದೆ. ಇದು ಕೇವಲ ಒಬ್ಬ ರೋಗಿಗೆ ಹೇಳಿದ ಸಲಹೆಯಲ್ಲ, ಬಹುತೇಕ ಕೋವಿಡ್ ರೋಗಿಗಳು ಮತ್ತು ಸಂಬಂಧಿಗಳಿಗೆ ಪೊಲೀಸರು ಇದೇ ಸಲಹೆ ನೀಡಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next