Advertisement
ಶುಕ್ರವಾರ ಮುಂಜಾನೆ 3.15ಕ್ಕೆ ಎಸ್ಪಿ ಸೀಮಾ ಲಾಟ್ಕರ್ ನೇತೃತ್ವದಲ್ಲಿ ಹಾಸನ ಜಿಲ್ಲೆಗೆ ಐದು ವಾಹನಗಳಲ್ಲಿ ಆಗಮಿಸಿದ ತನಿಖಾ ತಂಡ, ಪಡುವಲಹಿಪ್ಪೆ ಗ್ರಾಮದ ಎಚ್.ಡಿ.ರೇವಣ್ಣ ಅವರಿಗೆ ಸೇರಿದ ಫಾರ್ಮ್ ಹೌಸ್, ಗನ್ನಿಕಡ ಹಾಗೂ ಕಾಮೇನಹಳ್ಳಿ ಗ್ರಾಮದ ಬಳಿ ಇರುವ ಫಾರ್ಮ್ ಹೌಸ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
Related Articles
ಹೊಳೆನರಸೀಪುರ: ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಮೊದಲ ನೋಟಿಸ್‌ಗೆ ಯಾವುದೇ ಉತ್ತರ ನೀಡದ ಮಾಜಿ ಸಚಿವ ರೇವಣ್ಣ ಅವರಿಗೆ ಎಸ್‌ಐಟಿಯಿಂದ ಮತ್ತೊಂದು ನೋಟಿಸ್ ಜಾರಿ ಮಾಡಲಾಗಿದೆ.
Advertisement
ಹೊಳೆನರಸೀಪುರದ ಅವರ ನಿವಾಸಕ್ಕೆ ಸ್ಥಳೀಯ ಪೊಲೀಸರು ಆಗಮಿಸಿ, ಎಸ್‌ಐಟಿ ನೋಟಿಸ್ ನೀಡಿದರು. ಪಿಎಸ್‌ಐ ಅಜಯ್ ಕುಮಾರ್ ಜತೆ ಮಹಿಳಾ ಸಿಬಂದಿಯೂ ಇದ್ದರು. ಆಗ ರೇವಣ್ಣ ಹಾಗೂ ಪತ್ನಿ ಭವಾನಿ ಮನೆಯಲ್ಲೇ ಇದ್ದರು ಎಂದು ತಿಳಿದು ಬಂದಿದೆ.