Advertisement

ಪ್ರಜ್ವಲ್‌ ನಿವಾಸದಲ್ಲಿ ಎಸ್‌ಐಟಿ 10 ಗಂಟೆಗಳ ಕಾಲ ಹುಡುಕಾಟ

11:17 PM May 29, 2024 | Team Udayavani |

ಹಾಸನ: ಸಂಸದ ಪ್ರಜ್ವಲ್‌ ರೇವಣ್ಣ ಮೇ 31ರಂದು ಕರ್ನಾಟಕಕ್ಕೆ ಆಗಮಿಸಿ ಎಸ್‌ಐಟಿ ಮುಂದೆ ಹಾಜರಾಗುವುದಾಗಿ ವೀಡಿಯೋ ಮೂಲಕ ಮಾಹಿತಿ ರವಾನಿಸಿದ ಬೆನ್ನಲ್ಲೇ, ಅವರ ವಿಚಾರಣೆಗೆ ಪೂರಕ ಸಾಕ್ಷ್ಯಾಧಾರ ಸಂಗ್ರಹದ ಕಾರ್ಯವನ್ನು ಎಸ್‌ಐಟಿ ತನಿಖಾ ತಂಡ ಬಹುತೇಕ ಪೂರ್ಣಗೊಳಿಸಿದೆ.

Advertisement

ಸಾಕ್ಷ್ಯಾಧಾರ ಸಂಗ್ರಹಣೆ ಸಂಬಂಧ ಮಂಗಳವಾರ ಸಂಜೆಯಿಂದ ಹಾಸನದ ಆರ್‌.ಸಿ. ರಸ್ತೆಯಲ್ಲಿರುವ ಸಂಸದರ ವಸತಿಗೃಹ, ಹೊಳೆನರಸೀಪುರದ ರೇವಣ್ಣ ನಿವಾಸ ಹಾಗೂ ಚನ್ನರಾಯಪಟ್ಟಣ ತಾಲೂಕು ಗನ್ನಿಕಡದ ಫಾರ್ಮ್ಹೌಸ್‌ನಲ್ಲಿ ಏಕಕಾಲದಲ್ಲಿ ದಾಳಿ ನಡೆಸಿತ್ತು. ತಂಡದಲ್ಲಿದ್ದ 12ಕ್ಕೂ ಹೆಚ್ಚು ಅಧಿಕಾರಿಗಳು, ಸಿಬಂದಿ ಮತ್ತು ಎಫ್ಎಸ್‌ಎಲ್‌ ತಂಡ ಮೂರೂ ಸ್ಥಳಗಳಲ್ಲೂ ಪರಿಶೀಲನೆ ನಡೆಸಿ, ಪ್ರಕರಣಕ್ಕೆ ಪೂರಕ ಸಾಕ್ಷ್ಯಗಳನ್ನು ಸಂಗ್ರಹಿಸಿದೆ ಎಂದು ಮೂಲಗಳು ತಿಳಿಸಿವೆ.

ಸಂಸದರ ನಿವಾಸದಲ್ಲಿ ಸತತ 10 ಗಂಟೆ ಕಾಲ ಎಫ್ಎಸ್‌ಎಲ್‌ ತಂಡ ಸಂಪೂರ್ಣ ಜಾಲಾಡಿತು. ಪ್ರಜ್ವಲ್‌ ಮಲಗುತ್ತಿದ್ದ ಕೊಠಡಿಯಲ್ಲಿದ್ದ ಹಾಸಿಗೆ, ದಿಂಬು, ಹೊದಿಕೆ, ಕರವಸ್ತ್ರ ಹಾಗೂ ಇತರ ವಸ್ತುಗಳನ್ನು ಸಂಗ್ರಸಿದ ತಂಡವು ಮುಂಜಾನೆ ಬೆಂಗಳೂರು ಕಡೆ ಪ್ರಯಾಣ ಬೆಳೆಸಿತು. ಹಾಸನದಲ್ಲಿ 10 ಗಂಟೆ ಪರಿಶೀಲನೆ ನಡೆದರೆ, ಗನ್ನಿಕಡದ ಹಾಗೂ ರೇವಣ್ಣ ನಿವಾಸದಲ್ಲಿ 2 ಗಂಟೆಗೂ ಹೆಚ್ಚು ಕಾಲ ತಪಾಸಣೆ ನಡೆಸಿತು.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next