Advertisement

SIT: ದೇವರಾಜೇಗೌಡ, ಪ್ರಜ್ವಲ್‌ ಮಾಜಿ  ಕಾರು ಚಾಲಕನಿಗೆ ಎಸ್‌ಐಟಿ ನೋಟಿಸ್‌

10:39 PM May 09, 2024 | Team Udayavani |

ಬೆಂಗಳೂರು: ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇ ಗೌಡ ಹಾಗೂ ಪ್ರಜ್ವಲ್‌ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ್‌ಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ನೋಟಿಸ್‌ ಜಾರಿ ಮಾಡಿ ವಿಚಾರಣೆಗೆ ಕರೆದಿದೆ.

Advertisement

ಸಂಸದ ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವೀಡಿಯೋ ಪೆನ್‌ಡ್ರೈವ್‌ ಪ್ರಕರಣದಲ್ಲಿ ಇತ್ತೀಚೆಗೆ ದೇವರಾಜೇ ಗೌಡ ಬಹಿರಂಗವಾಗಿ ಒಂದಷ್ಟು ದಾಖಲೆ ಬಿಡುಗಡೆ ಮಾಡಿದ್ದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಜತೆಗೆ ಸಂಭಾಷಣೆ ನಡೆಸಿರುವ ಆಡಿಯೋವೊಂದರ ಸ್ವಲ್ಪ ತುಣುಕನ್ನೂ ಸುದ್ದಿಗೋಷ್ಠಿಯ ವೇಳೆ ನೀಡಿದ್ದರು. ಇದರ ಬೆನ್ನಲ್ಲೇ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಅಧಿಕಾರಿಗಳು ನೋಟಿಸ್‌ ನೀಡಿರುವುದು ಕುತೂಹಲಕ್ಕೀಡು ಮಾಡಿದೆ. ತಮ್ಮ ಬಳಿ ಇರುವ ಮತ್ತಷ್ಟು ಸಾ ಸಾಕ್ಷ್ಯಾಧಾರಗಳು, ಫೋಟೊಗಳು, ಆಡಿಯೋ ತರಲು ದೇವರಾಜೇಗೌಡರಿಗೆ ಎಸ್‌ಐಟಿ ಸೂಚಿಸಿದೆ. ಮತ್ತೂಂದೆಡೆ ಪ್ರಜ್ವಲ್‌ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ್‌ ಗೌಡಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next